ಪ್ರಧಾನಿ ಮೋದಿ ಜೊತೆ ಕಾರಿನಲ್ಲಿ ಹೋಗಲು 10 ನಿಮಿಷ ಕಾದ ಪುಟಿನ್; ಟ್ರೆಂಡ್ ಆಯ್ತು ಫೋಟೋ
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚೀನಾದ ಟಿಯಾಂಜಿನ್‌ನಲ್ಲಿ ತಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಮೋದಿಗಾಗಿ ಪುಟಿನ್ 10 ನಿಮಿಷ ಕಾದಿದ್ದಾರೆ. ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಹಾಗೂ ಪುಟಿನ್ ಕಾರು ಪ್ರಯಾಣದ ಫೋಟೋ, ವಿಡಿಯೋಗಳ ಸರ್ಚ್ ಟ್ರೆಂಡಿಂಗ್ನಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 1: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಚೀನಾದ ಟಿಯಾಂಜಿನ್‌ನಲ್ಲಿ ತಮ್ಮ ದ್ವಿಪಕ್ಷೀಯ ಸಭೆಗೆ ತೆರಳಲು ರಷ್ಯಾದಲ್ಲಿ ತಯಾರಿಸಿದ ಆರಸ್ ಲಿಮೋಸಿನ್ ಸೆನಾಟ್ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಅವರಿಬ್ಬರೂ ತಮ್ಮ ಪ್ರಯಾಣದ ಬಳಿಕ ಕಾರಿನಲ್ಲಿ 45 ನಿಮಿಷ ಮಾತುಕತೆ ನಡೆಸಿದರು. ಇದು ದ್ವಿಪಕ್ಷೀಯ ಮಾತುಕತೆಗೆ ಮುಂಚಿತವಾಗಿ ಗಟ್ಟಿಯಾದ ಭಾರತ-ರಷ್ಯಾ ಸಂಬಂಧವನ್ನು ಎತ್ತಿ ತೋರಿಸಿದವು. ರಷ್ಯಾದೊಂದಿಗಿನ ಭಾರತದ ತೈಲ ವ್ಯಾಪಾರವನ್ನು ಅಮೆರಿಕ ಸಾರ್ವಜನಿಕವಾಗಿ ಖಂಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವಿನ ಈ ಮಾತುಕತೆ ಮಹತ್ವದ್ದಾಗಿದೆ.
ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ನಂತರ ತಮ್ಮ ದ್ವಿಪಕ್ಷೀಯ ಮಾತುಕತೆಗಾಗಿ ಒಟ್ಟಿಗೆ ಪ್ರಯಾಣಿಸಲು ಪುಟಿನ್ ಪ್ರಧಾನಿ ಮೋದಿಗಾಗಿ ಕಾದಿದ್ದಾರೆ. ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಪುಟಿನ್ ಹಾಗೂ ಮೋದಿಯ ಕಾರು ಪ್ರಯಾಣದ ಫೋಟೋ ಭಾರೀ ವೈರಲ್ ಆಗಿದೆ. ಈ ಫೋಟೋ ಅತಿ ಹೆಚ್ಚು ಸರ್ಚ್ ಆಗುವ ಮೂಲಕ ಟ್ರೆಂಡಿಂಗ್ನಲ್ಲಿದೆ. ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಅವರಿಬ್ಬರೂ ತಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಂದೇ ಕಾರಿನಲ್ಲಿ ಪ್ರಯಾಣಿಸಿದರು.
🔥🇮🇳🇷🇺 From Kremlin with class: Modi & Putin ride together in AURUS Senat – Russian President’s official car https://t.co/bOzimx2v7T pic.twitter.com/FpDegWZIh5
— Sputnik India (@Sputnik_India) September 1, 2025
ಅವರ ಪ್ರಯಾಣದ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಪುಟಿನ್ ತಮ್ಮ ದ್ವಿಪಕ್ಷೀಯ ಸಭೆಯ ಸಮಯದಲ್ಲಿ ಮಾತುಕತೆ ನಡೆಸುವ ಮೊದಲು ಹಲವಾರು ವಿಷಯಗಳ ಕುರಿತು ಮಾತನಾಡಿದರು. ದ್ವಿಪಕ್ಷೀಯ ಸಭೆಯ ಸ್ಥಳವನ್ನು ತಲುಪಿದ ನಂತರವೂ ಅವರು ಕಾರಿನಲ್ಲಿ ಸುಮಾರು 45 ನಿಮಿಷಗಳನ್ನು ಕಳೆದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ ಬೇಗ ಕೊನೆಗೊಳ್ಳಲಿ; ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
“SCO ಶೃಂಗಸಭೆಯ ಸ್ಥಳದಲ್ಲಿ ನಡೆದ ಸಭೆಯ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ನಾನು ನಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸಿದೆವು” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
Number one trend on Weibo right now:
“Modi takes Putin’s car” pic.twitter.com/h1bP8UT1wW
— Aadil Brar (@aadilbrar) September 1, 2025
ರಷ್ಯಾದ ರಾಷ್ಟ್ರೀಯ ರೇಡಿಯೋ ಸ್ಟೇಷನ್ ವೆಸ್ಟಿಎಫ್‌ಎಂ ಪ್ರಕಾರ, “ಇಬ್ಬರು ನಾಯಕರು ತಮ್ಮ ತಂಡಗಳ ಸದಸ್ಯರು ಸೇರಬೇಕಾದ ಹೋಟೆಲ್‌ಗೆ ಹೋಗುವ ದಾರಿಯಲ್ಲಿ ತಮ್ಮ ಸಂವಾದವನ್ನು ಮುಂದುವರೆಸಿದರು. ಆದರೆ, ಹೋಟೆಲ್ ತಲುಪಿದ ನಂತರವೂ ಅವರು ರಷ್ಯಾದ ಅಧ್ಯಕ್ಷರ ಲಿಮೋಸಿನ್ ಕಾರಿನಲ್ಲೇ ಕುಳಿತು ಸುಮಾರು 45 ನಿಮಿಷಗಳ ಕಾಲ ತಮ್ಮ ಮಾತುಕತೆಯನ್ನು ಮುಂದುವರೆಸಿದರು” ಎಂದು ಅದು ವರದಿ ಮಾಡಿದೆ.
After the proceedings at the SCO Summit venue, President Putin and I travelled together to the venue of our bilateral meeting. Conversations with him are always insightful. pic.twitter.com/oYZVGDLxtc
— Narendra Modi (@narendramodi) September 1, 2025
ಇದನ್ನೂ ಓದಿ: ಚೀನಾ, ರಷ್ಯಾದ ಅಧ್ಯಕ್ಷರಿಗೆ ಹಸ್ತಲಾಘವ, ಅಪ್ಪುಗೆ, ತಮಾಷೆ; ಟ್ರಂಪ್ ನಿದ್ರೆಗೆಡಿಸಿದ ಮೋದಿಯ ವಿಡಿಯೋ ಇಲ್ಲಿದೆ
ರಷ್ಯಾದೊಂದಿಗಿನ ಭಾರತದ ತೈಲ ವ್ಯಾಪಾರವನ್ನು ಅಮೆರಿಕ ಸಾರ್ವಜನಿಕವಾಗಿ ಖಂಡಿಸುತ್ತಿರುವ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ನಲ್ಲಿ ಪುಟಿನ್ ಅವರ ಯುದ್ಧಕ್ಕೆ ನವದೆಹಲಿ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಳೆದ ತಿಂಗಳು, ಟ್ರಂಪ್ ಆ ಇಂಧನ ಖರೀದಿಗಳಿಗೆ ದಂಡ ವಿಧಿಸಲು ಏಷ್ಯಾದಲ್ಲಿ ಅತಿ ಹೆಚ್ಚು ಅಮೆರಿಕಕ್ಕೆ ಹೋಗುವ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದರು. ಅಮೆರಿಕದ ಒತ್ತಡದ ಹೊರತಾಗಿಯೂ ಭಾರತ ರಷ್ಯಾದೊಂದಿಗಿನ ತೈಲ ವ್ಯಾಪಾರವನ್ನು ನಿಲ್ಲಿಸಿಲ್ಲ. ರಷ್ಯಾ ಕೂಡ ಭಾರತದ ಬೆಂಬಲಕ್ಕೆ ನಿಂತಿದೆ. ಅಂದಹಾಗೆ, ರಷ್ಯಾ ಅಧ್ಯಕ್ಷ ಪುಟಿನ್ ಡಿಸೆಂಬರ್‌ನಲ್ಲಿ ಭಾರತಕ್ಕೆ ಪ್ರಯಾಣಿಸಲಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Mon, 1 September 25




