ಕೊರೊನಾ ಲಸಿಕೆ ಪ್ರಯೋಗಕ್ಕೆ ಹಿನ್ನಡೆ: ಲಸಿಕೆ ಪ್ರಯೋಗದಲ್ಲಿದ್ದ ವ್ಯಕ್ತಿಗೆ ಕಾಯಿಲೆ!
ಕೊರೊನಾ ಸೋಂಕಿನಿಂದ ಬಳಲಿರುವ ಇಡೀ ವಿಶ್ವವೇ ಸೋಂಕು ನಿವಾರಣೆಯ ಲಸಿಕೆ ಪತ್ತೆ ಹಚ್ಚುವಲ್ಲಿ ನಾ ಮುಂದೆ ತಾ ಮುಂದೆ ಎಂಬಂತೆ ಲಸಿಕೆಯ ಹಿಂದೆ ಬಿದ್ದಿವೆ. ಆದರೆ ಲಸಿಕೆಯ ಪ್ರಾಯೋಗಿಕ ಹಂತದಲ್ಲಿ ಆಘಾತಕಾರಿ ವಿಚಾರ ಹೊರಬಿದ್ದಿದೆ. ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಪ್ರಯೋಗಕ್ಕೆ ಹಿನ್ನಡೆಯಾಗಿದ್ದು, ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ವ್ಯಕ್ತಿಯಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಅಸ್ಟ್ರಾಜನಿಕ್ ಕಂಪನಿಯಿಂದ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ತಡೆ ನೀಡಲಾಗಿದೆ. ಯಾವ ಕಾಯಿಲೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಹೌದು. ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ವ್ಯಕ್ತಿಯಲ್ಲಿ […]
ಕೊರೊನಾ ಸೋಂಕಿನಿಂದ ಬಳಲಿರುವ ಇಡೀ ವಿಶ್ವವೇ ಸೋಂಕು ನಿವಾರಣೆಯ ಲಸಿಕೆ ಪತ್ತೆ ಹಚ್ಚುವಲ್ಲಿ ನಾ ಮುಂದೆ ತಾ ಮುಂದೆ ಎಂಬಂತೆ ಲಸಿಕೆಯ ಹಿಂದೆ ಬಿದ್ದಿವೆ. ಆದರೆ ಲಸಿಕೆಯ ಪ್ರಾಯೋಗಿಕ ಹಂತದಲ್ಲಿ ಆಘಾತಕಾರಿ ವಿಚಾರ ಹೊರಬಿದ್ದಿದೆ.
ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಪ್ರಯೋಗಕ್ಕೆ ಹಿನ್ನಡೆಯಾಗಿದ್ದು, ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ವ್ಯಕ್ತಿಯಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಅಸ್ಟ್ರಾಜನಿಕ್ ಕಂಪನಿಯಿಂದ ಮೂರನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ತಡೆ ನೀಡಲಾಗಿದೆ.
ಯಾವ ಕಾಯಿಲೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಹೌದು. ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ವ್ಯಕ್ತಿಯಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದು, ವ್ಯಕ್ತಿಗೆ ಕಾಣಿಸಿಕೊಂಡಿರುವುದು ಯಾವ ಕಾಯಿಲೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಸ್ವಪ್ರೇರಣೆಯಿಂದ 3ನೇ ಹಂತದ ಲಸಿಕೆ ಪ್ರಯೋಗವನ್ನು ಅಸ್ಟ್ರಾಜನಿಕ್ ಕಂಪನಿ ನಿಲ್ಲಿಸಿದೆ.
ಬ್ರಿಟನ್ನಲ್ಲಿ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕ ತಡೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ಪ್ರಯೋಗದಲ್ಲಿ ಮುಂಚೂಣಿಯಲ್ಲಿದ್ದ ಅಸ್ಟ್ರಾಜನಿಕ್ ಕಂಪನಿಯ ಲಸಿಕೆಯ ಬಗ್ಗೆ ಈಗ ಸ್ವತಂತ್ರ ಸಮಿತಿಯಿಂದ ಲಸಿಕೆಯ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲಿದೆ. ಬ್ರಿಟನ್ನಲ್ಲಿ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕ ತಡೆ ನೀಡಿರುವುದರಿಂದ ಅಸ್ಟ್ರಾಜನಿಕ್ ಕಂಪನಿಯ ಷೇರುಗಳ ಬೆಲೆ ಶೇಕಡಾ 6 ರಷ್ಟು ಕುಸಿತ ಕಂಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಯ ಪ್ರಯೋಗ ನಿಲ್ಲಿಸಿದ ಅಸ್ಟ್ರಾಜನಿಕ್ ಕಂಪನಿ ಆಕ್ಸ್‌ಫರ್ಡ್ ವಿವಿ ಜೊತೆ ಸೇರಿ ಲಸಿಕೆ ಅಭಿವೃದ್ಧಿಪಡಿಸುತ್ತಿತ್ತು. 3 ನೇ ಹಂತ ಪ್ರವೇಶಿಸಿದ 3 ಕಂಪನಿಗಳಲ್ಲಿ ಅಸ್ಟ್ರಾಜನಿಕ್ ಕೂಡ ಒಂದಾಗಿತ್ತು. ಅಸ್ಟ್ರಾಜನಿಕ್- ಆಕ್ಸ್‌ಫರ್ಡ್ ವಿವಿ ಜೊತೆಗೆ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ನಿಂದ ಲಸಿಕೆ ಅಭಿವೃದ್ಧಿ, ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದವು.