Burundi prison fire ಬುರುಂಡಿ ಜೈಲಿನಲ್ಲಿ ಬೆಂಕಿ; 38 ಮಂದಿ ಸಜೀವ ದಹನ, 69 ಮಂದಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Dec 07, 2021 | 6:58 PM

ಇದು ನಿಜವಾಗಿಯೂ ದುರಂತ. ಸುಮಾರು ಶೇ 90 ಮಲಗುವ ಕೋಣೆಗಳು ಸುಟ್ಟುಹೋಗಿವೆ ಎಂದು ನಾನು ಹೇಳುತ್ತೇನೆ ಎಂದು ಒಬ್ಬ ಕೈದಿ ಬಿಬಿಸಿಗೆ ತಿಳಿಸಿದರು. ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ (02:00 GMT) ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.

Burundi prison fire ಬುರುಂಡಿ ಜೈಲಿನಲ್ಲಿ ಬೆಂಕಿ; 38 ಮಂದಿ ಸಜೀವ ದಹನ, 69 ಮಂದಿಗೆ ಗಾಯ
ಬುರುಂಡಿ ಜೈಲಿನ ಹೊರಗೆ (ಬರುಂಡಿ ಸಚಿವಾಲಯ )
Follow us on

ಗಿಟೆಗಾ:ಪೂರ್ವ-ಮಧ್ಯ ಆಫ್ರಿಕಾದಲ್ಲಿರುವ ಬುರುಂಡಿ (Burundi)ದೇಶದ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 38 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ರಾಜಧಾನಿ ಗಿಟೆಗಾದಲ್ಲಿ (Gitega) ಕಿಕ್ಕಿರಿದು ತುಂಬಿದ ಜೈಲಿಗೆ ಬೆಂಕಿ ತಗುಲಿತು ಎಂದು ಉಪಾಧ್ಯಕ್ಷ ಪ್ರಾಸ್ಪರ್ ಬಜೊಂಬಾಂಜಾ (Prosper Bazombanza) ಸುದ್ದಿಗಾರರಿಗೆ ತಿಳಿಸಿದರು. ಬೆಂಕಿ ಅವಘಡದಲ್ಲಿ ಕನಿಷ್ಠ 69 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಚಿತ್ರಗಳು ಬೆಂಕಿಯಿಂದ ಆವರಿಸಿರುವ ಕಟ್ಟಡವನ್ನು ತೋರಿಸುತ್ತವೆ . ಶವಗಳ ರಾಶಿಗಳು ಜೈಲಿನಲ್ಲಿರುವ ಕೈದಿಗಳದ್ದು ಎಂದು ಹೇಳಿವೆ.  “ಇದು ನಿಜವಾಗಿಯೂ ದುರಂತ. ಸುಮಾರು ಶೇ 90 ಮಲಗುವ ಕೋಣೆಗಳು ಸುಟ್ಟುಹೋಗಿವೆ ಎಂದು ನಾನು ಹೇಳುತ್ತೇನೆ” ಎಂದು ಒಬ್ಬ ಕೈದಿ ಬಿಬಿಸಿಗೆ ತಿಳಿಸಿದರು. ಸ್ಥಳೀಯ ಕಾಲಮಾನ ಸುಮಾರು 04:00 ಗಂಟೆಗೆ (02:00 GMT) ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.


ಗಿಟೆಗಾ ಆಸ್ಪತ್ರೆಯ ನರ್ಸ್‌ಗಳು ಸಂತ್ರಸ್ತರಿಗೆ ಸಹಾಯ ಮಾಡಲು ಜೈಲಿನೊಳಗೆ ಪ್ರವೇಶಿಸಿದ್ದಾರೆ, ಅವರು ಸತ್ತವರು ಮತ್ತು ಗಾಯಗೊಂಡವರನ್ನು ಹೊರತೆಗೆಯುತ್ತಿದ್ದಾರೆ ಎಂದು ಜೈಲಿನ ಹೊರಗಿನ ಪತ್ರಕರ್ತರೊಬ್ಬರು ಬಿಬಿಸಿಗೆ ತಿಳಿಸಿದರು. 400 ಕೈದಿಗಳ ಸಾಮರ್ಥ್ಯವಿರುವ ಗಿಟೆಗಾ ಜೈಲು ಕಳೆದ ತಿಂಗಳವರೆಗೆ 1,539 ಕೈದಿಗಳನ್ನು ಹೊಂದಿತ್ತು ಎಂದು ಕ್ರಿಶ್ಚಿಯನ್ ಅಸೋಸಿಯೇಷನ್ ಅಗೇನ್ಸ್ಟ್ ಟಾರ್ಚರ್ (ACAT-Burundi) ಹೇಳಿದೆ.

ಇದನ್ನೂ ಓದಿ:  ಬಿಹಾರ: ಕೊವಿಡ್ ಪರೀಕ್ಷೆಯ ಡೇಟಾದಲ್ಲಿ ಮೋದಿ, ಶಾ, ಸೋನಿಯಾ ಹೆಸರು; ಇಬ್ಬರು ಸಿಬ್ಬಂದಿ ಅಮಾನತು