ಬಿಹಾರ: ಕೊವಿಡ್ ಪರೀಕ್ಷೆಯ ಡೇಟಾದಲ್ಲಿ ಮೋದಿ, ಶಾ, ಸೋನಿಯಾ ಹೆಸರು; ಇಬ್ಬರು ಸಿಬ್ಬಂದಿ ಅಮಾನತು
ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು "ತಪ್ಪಾದ ಮಾಹಿತಿಗೆ ಕಾರಣರಾದವರನ್ನು ಸರ್ಕಾರ ವಿಚಾರಣೆಗೆ ತಂದಿದೆ. ಕೊವಿಡ್ ಪರೀಕ್ಷಾ ದಾಖಲೆಗಳ ಮೇಲೆ ನಿಗಾ ಇಡಲು ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಪಟನಾ: ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ (Arwal) ಕೊವಿಡ್ ಪರೀಕ್ಷೆಯ (Covid Test) ದತ್ತಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha), ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ನಟರಾದ ಪ್ರಿಯಾಂಕಾ ಚೋಪ್ರಾ ಮತ್ತು ಅಕ್ಷಯ್ ಕುಮಾರ್ ಕೊವಿಡ್ ಪರೀಕ್ಷೆ ನಡೆಸಿದ್ದಾರೆ. ಅಕ್ಟೋಬರ್ 27ರ ಆರ್‌ಟಿ-ಪಿಸಿಆರ್ (RTPCR) ಪರೀಕ್ಷಾ ದಾಖಲೆಗಳಲ್ಲಿ ಇವರೆಲ್ಲರೂ ಕೊವಿಡ್ ನೆಗಟಿವ್ ಆಗಿದ್ದಾರೆ ಎಂದು ಇದೆ. ಈ ವಿಷಯವನ್ನು ಗಮನಿಸಿದ ರಾಜ್ಯ ಆರೋಗ್ಯ ಇಲಾಖೆ ಗಂಭೀರ ಲೋಪಕ್ಕಾಗಿ ಇಬ್ಬರು ಡೇಟಾ ಆಪರೇಟರ್‌ಗಳನ್ನು ಅಮಾನತುಗೊಳಿಸಿದೆ. ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು “ತಪ್ಪಾದ ಮಾಹಿತಿಗೆ ಕಾರಣರಾದವರನ್ನು ಸರ್ಕಾರ ವಿಚಾರಣೆಗೆ ತಂದಿದೆ. ಕೊವಿಡ್ ಪರೀಕ್ಷಾ ದಾಖಲೆಗಳ ಮೇಲೆ ನಿಗಾ ಇಡಲು ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ನಾವು ಅರ್ವಾಲ್ ಡೇಟಾ ತಪ್ಪುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕ್ರಮವನ್ನು ಪ್ರಾರಂಭಿಸಿದ್ದೇವೆ. ಇಂತಹ ಅಕ್ರಮಗಳ ವಿರುದ್ಧ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಪಾಂಡೆ ತಿಳಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜಮುಯಿ, ಶೇಖೌರಾ ಮತ್ತು ಭಾಗಲ್ಪುರ್ ಜಿಲ್ಲೆಗಳಲ್ಲಿ ತಪ್ಪು ಹೆಸರುಗಳು ಮತ್ತು ಸಂಬಂಧವಿಲ್ಲದ ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ಸಂಪರ್ಕ ಸಂಖ್ಯೆಯ ಮುಂದೆ 10 ಸೊನ್ನೆಗಳು ಮಾತ್ರ ಇರುವ ಫೋನ್ ಸಂಖ್ಯೆ ಇರುವ ಬೃಹತ್ ಕೊವಿಡ್ ಡೇಟಾ ಅಕ್ರಮವನ್ನು ಬಹಿರಂಗಪಡಿಸಿದೆ. ಆಗ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ಒಂಬತ್ತು ನೌಕರರನ್ನು ಅಮಾನತು ಮಾಡಿತ್ತು.
ಅರ್ವಾಲ್ ಜಿಲ್ಲೆಯ ಕೊವಿಡ್ ಪರೀಕ್ಷೆಯ ದತ್ತಾಂಶ ದಾಖಲೆಗಳಲ್ಲಿ ಮೋದಿ ಹೆಸರನ್ನು ಮೂರು ಬಾರಿ ನಮೂದಿಸಿದ್ದರೆ, ‘ಅಮಿತ್ ಶಾ’ ಅಕ್ಟೋಬರ್ 27 ರಂದು ಎರಡು ಬಾರಿ ಪರೀಕ್ಷಿಸಲಾಗಿದೆ ಎಂದು ತೋರಿಸಲಾಗಿದೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಬಿಹಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮ್ ಜತನ್ ಸಿನ್ಹಾ ಒಂದೇ ದಿನದಲ್ಲಿ ಆರು ಬಾರಿ ಪರೀಕ್ಷಿಸಿ ದ್ದಾರೆ. ನಟ ಅಕ್ಷಯ್ ಕುಮಾರ್ ನಾಲ್ಕು ಬಾರಿ ಮತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಒಂದು ಬಾರಿ ಪಟ್ಟಿಯಲ್ಲಿದೆ. ಈ ಹೆಸರುಗಳ ಮುಂದೆ ಸ್ಥಳೀಯ ಅಥವಾ ಪಟನಾ ನಿವಾಸಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದೆ.
ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಹೋದವರ ಫೋನ್ ನಂಬರ್‌ಗಳನ್ನು ಡೇಟಾ ಆಪರೇಟರ್‌ಗಳು ಬಳಸಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. “ಇದು ಡೇಟಾ ಆಪರೇಟರ್‌ಗಳ ಕಡೆಯಿಂದ ಆದ ಸಂಪೂರ್ಣ ನಿರ್ಲಕ್ಷ್ಯ” ಎಂದು ಅಧಿಕಾರಿ ಹೇಳಿದರು.
ರಾಜ್ಯದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅರ್ವಾಲ್ ಡೇಟಾವು ವ್ಯವಸ್ಥೆಯ ಸಂಪೂರ್ಣ ಅಗೌರವ ಮತ್ತು ನಿರ್ಭಯತೆಯ ಭಾವನೆಯನ್ನು ತೋರಿಸುತ್ತದೆ. ಮಾಧ್ಯಮ ವರದಿಗಳ ಹೊರತಾಗಿಯೂ ಕೊವಿಡ್ ಡೇಟಾ ಗೊಂದಲವನ್ನು ಅನ್ನು ಪರಿಶೀಲಿಸಲಾಗಲಿಲ್ಲ ಎಂದಿದ್ದಾರೆ. ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಅವರು ಫೆಬ್ರವರಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಸರಣಿ ವರದಿಗಳ ನಂತರ ಡೇಟಾ ಗೊಂದಲದ ವಿಷಯವನ್ನು ಎತ್ತಿದ್ದರು. ಕೇಂದ್ರವೂ ಬಿಹಾರ ಸರ್ಕಾರದಿಂದ ವರದಿ ಕೇಳಿತ್ತು.
ಇದನ್ನೂ ಓದಿ: Farmers Protest ಬಹುತೇಕ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿದ ಸರ್ಕಾರ, ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆಯುವ ಸಾಧ್ಯತೆ