ಐಪಿಎಲ್-2022 ರಲ್ಲಿ ಆಸ್ಟ್ರೇಲಿಯದ ಸ್ಟಾರ್ ಬ್ಯಾಟರ್ ಫಿಂಚ್ ಮಾರಾಟವಾಗಲಿಲ್ಲ, ಆದರೆ ಅಲ್ಲಿನ ಈ ಕುರಿ ರೂ. 2 ಕೋಟಿಗೆ ಮಾರಾಟವಾಗಿದೆ!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 05, 2022 | 8:02 AM

ಸಿಂಡಿಕೇಟ್ ಸದಸ್ಯರಲ್ಲಿ ಒಬ್ಬರಾಗಿರುವ ಸ್ಟೀವ್ ಮಾಧ್ಯಮದೊಂದಿಗೆ ಮಾತಾಡಿ, ‘ ಕುರಿಯನ್ನು ನಮ್ಮ ಗುಂಪಿನಲ್ಲಿರುವ ಎಲ್ಲ ಸದಸ್ಯರು ಬಳಸುತ್ತೇವೆ. ಕುರಿಯನ್ನು ಬಳಸಿ ಬೇರೆ ಕುರಿತಳಿಗಳನ್ನು ಸಹ ಅದರಷ್ಟೇ ಬಲಿಷ್ಠ ಮಾಡಲಾಗುವುದು ಎಂದು  ಹೇಳಿದ್ದಾರೆ.

ಐಪಿಎಲ್-2022 ರಲ್ಲಿ ಆಸ್ಟ್ರೇಲಿಯದ ಸ್ಟಾರ್ ಬ್ಯಾಟರ್ ಫಿಂಚ್ ಮಾರಾಟವಾಗಲಿಲ್ಲ, ಆದರೆ ಅಲ್ಲಿನ ಈ ಕುರಿ ರೂ. 2 ಕೋಟಿಗೆ ಮಾರಾಟವಾಗಿದೆ!!
ರೂ. ಎರಡು ಕೋಟಿ ಬೆಲೆಯ ಕುರಿ ಇದೇ!
Follow us on

ಒಂದು ಕುರಿಯ (sheep) ಬೆಲೆ ಅಬ್ಬಬ್ಬಾ ಅಂದರೆ ಎಷ್ಟಿರಬಹುದು? ನಿಮಗೆ ಗೊತ್ತಿರಬಹುದು, ಹಿಂದೊಮ್ಮೆ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಬೆಂಗಳೂರಿನ ಅಭಿಮಾನಿಯೊಬ್ಬ ಬಕ್ರೀದ್ ಹಬ್ಬಕ್ಕೆ 7 ಲಕ್ಷ ರೂ. ಬೆಲೆಯ ಕುರಿಯೊಂದನ್ನು ಗಿಫ್ಟ್ ರೂಪದಲ್ಲಿ ನೀಡಿದ್ದ. ಅದನ್ನು ಕೇಳಿಸಿಕೊಂಡ ನಾವು ಕುರಿಗೆ 7 ಲಕ್ಷ ರೂಪಾಯಿನಾ ಅಂತ ಉದ್ಗರಿಸಿದ್ದೆವು. ಆದರೆ ಆ ಕುರಿಯ ಬೆಲೆ ಆಸ್ಟ್ರೇಲಿಯದಲ್ಲಿ (Australia) ಇತ್ತೀಚಿಗೆ ಮಾರಾಟವಾದ ಕುರಿಯೊಂದರ ಬೆಲೆ ಎದುರು ಏನೂ ಅಲ್ಲ ಬಿಡಿ ಮಾರಾಯ್ರೇ. ಯಾಕೆ ಗೊತ್ತಾ ನಾವು ಹೇಳುತ್ತಿರುವ ಕುರಿ ಮಾರಾಟವಾಗಿರುವ ಬೆಲೆಯನ್ನು ಭಾರತೀಯ ಕರನ್ಸಿಯಲ್ಲಿ ಹೇಳುವುದಾದರೆ 2 ಕೋಟಿ ರೂ.!! ಇದೊಂದು ಜಾಗತಿಕ ದಾಖಲೆ ಅಂತ ಬೇರೆ ಹೇಳಬೇಕೇ?

ವ್ಹೈಟ್ ಸ್ಟಡ್ ತಳಿಯ ಕುರಿಯನ್ನು ನಾಲ್ವರು ಸದಸ್ಯರನ್ನೊಳಗೊಂಡ ನ್ಯೂ ಸೌಥ್ ವೇಲ್ಸ್ ನ ಎಲೀಟ್ ಆಸ್ಟ್ರೇಲಿಯನ್ ವ್ಹೈಟ್ ಸಿಂಡಿಕೇಟೊಂದು 2 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಸದರಿ ಕುರಿಗೆ ಅವರು ‘ಎಲೀಟ್ ಶೀಪ್’ ಅಂತ ಹೆಸರಿಟ್ಟಿದ್ದಾರೆ.

ಸಿಂಡಿಕೇಟ್ ಸದಸ್ಯರಲ್ಲಿ ಒಬ್ಬರಾಗಿರುವ ಸ್ಟೀವ್ ಮಾಧ್ಯಮದೊಂದಿಗೆ ಮಾತಾಡಿ, ‘ ಕುರಿಯನ್ನು ನಮ್ಮ ಗುಂಪಿನಲ್ಲಿರುವ ಎಲ್ಲ ಸದಸ್ಯರು ಬಳಸುತ್ತೇವೆ. ಕುರಿಯನ್ನು ಬಳಸಿ ಬೇರೆ ಕುರಿತಳಿಗಳನ್ನು ಸಹ ಅದರಷ್ಟೇ ಬಲಿಷ್ಠ ಮಾಡಲಾಗುವುದು ಎಂದು  ಹೇಳಿದ್ದಾರೆ. ಈ ಕುರಿಯ ಬೆಳವಣಿಗೆ ಅಚ್ಚರಿ ಹುಟ್ಟಿಸುವಷ್ಟು ಅಗಾಧವಾಗಿದೆಯಂತೆ.

ಎಲೀಟ್ ಕುರಿಯನ್ನು ಪೋಷಿಸಿ ಬೆಳೆಸಿ ಸಿಂಡಿಕೇಟ್ ಗೆ ಮಾರಿರುವ ಗ್ರಹಾಂ ಗಿಲ್ಮೋರ್ ಅದಕ್ಕೆ ಈ ಪಾಟಿ ಬೆಲೆ ಸಿಕ್ಕೀತೆಂಬ ನಿರೀಕ್ಷೆಯನ್ನೇ ಇಟ್ಟುಕೊಂಡಿರಲಿಲ್ಲವಂತೆ. ಕುರಿಯೊಂದನ್ನು ಇಷ್ಟು ಭಾರಿ ಮೊತ್ತಕ್ಕೆ ಮಾರುವುದು ಒಂದು ಅನಿವರ್ಚನೀಯ, ಅವಿಸ್ಮರಣೀಯ ಅನುಭವ, ಎಂದು ಗಿಲ್ಮೋರ್ ಹೇಳಿದ್ದಾರೆ. ಎಲೀಟ್ ಕುರಿಯ ಮಾರಾಟ ಬೆಲೆ ಅಸ್ಟ್ರೇಲಿಯದಲ್ಲಿ ಉಣ್ಣೆ ಮತ್ತು ಕುರಿ ಮಾಂಸದ ಉದ್ಯಮ ಯಾವಮಟ್ಟಕ್ಕೆ ಬೆಳೆದಿದೆ ಅನ್ನುವುದರ ಸೂಚಕವಾಗಿದೆ.

ಅಸ್ಟ್ರೇಲಿಯದಲ್ಲಿ ಕುರಿ ತುಪ್ಪಳ (ಉಣ್ಣೆಗಾಗಿ) ಕತ್ತರಿಸುವ ಆಥವಾ ಬೋಳಿಸುವ ಕಾಯಕದಲ್ಲಿ ತೊಡಗಿರುವ ಜನರ ಸಂಖ್ಯೆ ದಿನೇದಿನೆ ಕಮ್ಮಿಯಾಗುತ್ತಿದ್ದಂತೆಯೇ ಕುರಿಮಾಂಸದ ಬೆಲೆ ಹೆಚ್ಚುತ್ತಾ ಸಾಗುತ್ತಿದೆಯಂತೆ. ಕುರಿ ತುಪ್ಪಳ ತೆಗೆಸುವ ವೆಚ್ಚ ಬಹಳ ಹೆಚ್ಚಾಗಿದೆಯಂತೆ. ದೇಹದ ಮೇಲೆ ಹೆಚ್ಚು ತುಪ್ಳಳವಿರದ ಕೆಲವು ತಳಿಯ ಕುರಿಗಳನ್ನು ಮಾಂಸಕ್ಕಾಗಿ ಮಾತ್ರ ಸಾಕಾಣಿಕೆ ಮಾಡಲಾಗುತ್ತದೆ.

ಹಾಗಾಗೇ, ದೇಹದ ಮೇಲೆ ಹೆಚ್ಚು ತುಪ್ಪಳವಿರದ ಆಸ್ಟ್ರೇಲಿಯನ್ ಬಿಳಿ ತಳಿಯ ಕುರಿಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ ಎಂದು ಗಿಲ್ಮೋರ್ ಹೇಳಿದ್ದಾರೆ.