AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australia Crime: ಭಾರತ ಮೂಲದ ಯುವತಿಯನ್ನು ಜೀವಂತ ಸಮಾಧಿ ಮಾಡಿದ್ದ ಮಾಜಿ ಪ್ರಿಯಕರ

ಭಾರತ ಮೂಲದ ಯುವತಿಯನ್ನು ಮಾಜಿ ಪ್ರಿಯಕರನೊಬ್ಬ ಜೀವಂತ ಸಮಾಧಿ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

Australia Crime: ಭಾರತ ಮೂಲದ ಯುವತಿಯನ್ನು ಜೀವಂತ ಸಮಾಧಿ ಮಾಡಿದ್ದ ಮಾಜಿ ಪ್ರಿಯಕರ
ಜಾಸ್ಮಿನ್ ಕೌರ್
ನಯನಾ ರಾಜೀವ್
|

Updated on: Jul 07, 2023 | 8:05 AM

Share

ಭಾರತ ಮೂಲದ ಯುವತಿಯನ್ನು ಮಾಜಿ ಪ್ರಿಯಕರನೊಬ್ಬ ಜೀವಂತ ಸಮಾಧಿ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಆಕೆ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಳು, 2021ರ ಮಾರ್ಚ್​ನಲ್ಲಿ ಈ ಘಟನೆ ನಡೆದಿದೆ, ಆತ 21 ವರ್ಷದ ಜಾಸ್ಮಿನ್ ಕೌರ್ ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ತಾರಿಕ್​ಜೋತ್ ಸಿಂಗ್ ಎಂಬಾತ ಜಾಸ್ಮಿನ್​ಳನ್ನು ಪ್ರೀತಿಸುತ್ತಿದ್ದ ಆದರೆ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಜಾಸ್ಮಿನ್ ಕೌರ್ ಕೆಲಸ ಮಾಡುತ್ತಿದ್ದ ಸ್ಥಳದಿಂದ ಆಕೆಯನ್ನು ಅಪಹರಿಸಿದ್ದರು, ಅಲ್ಲಿಂದ 644 ಕಿ.ಮೀ ದೂರ ಕರೆದೊಯ್ದು ಜೀವಂತ ಸಮಾಧಿ ಮಾಡಿದ್ದರು.

ಕೋರ್ಟ್​ನಲ್ಲಿ ಶಿಕ್ಷೆ ಪ್ರಕಟವಾಗುವ ಸಮಯದಲ್ಲಿ ಈ ಮಾಹಿತಿಯನ್ನು ಎಲ್ಲರಿಗೂ ನೀಡಲಾಯಿತು, ಜಾಸ್ಮಿನ್ ಅವರ ಕೊಲೆಗೆ ತಾರಿಕ್​ಜೋತ್ ಸಂಚು ರೂಪಿಸಿದ್ದ, ಕೌರ್ ಅವರ ಹತ್ಯೆ ನಿಜಕ್ಕೂ ಕ್ರೂರವಾಗಿತ್ತು.

ಮತ್ತಷ್ಟು ಓದಿ: Madikeri News: 2 ವರ್ಷದ ಮಗು, ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪತಿ: ಬಂಧನ

ನ್ಯಾಯಾಲಯದಲ್ಲಿ ತನ್ನ ಮಗಳು ಹೇಗೆ ಮೃತಪಟ್ಟಳು ಎಂಬುದನ್ನು ಕೇಳಿ ತಾಯಿ ಕಣ್ಣೀರು ಹಾಕಿದ್ದಾರೆ. ತನ್ನ ಮಗಳನ್ನು ಜೀವಂತ ಸಮಾಧಿ ಮಾಡುವಾಗ ಆಕೆಯ ಬಾಯಿಗೆಲ್ಲಾ ಮಣ್ಣು ಹೋಗಿರಬಹುದಲ್ಲವೇ, ಉಸಿರು ಕಟ್ಟಿರಬಹುದಲ್ಲವೇ ಎಂದು ತಾಯಿ ಹೇಳುತ್ತಿರುವಾಗ ಅಲ್ಲಿದ್ದವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು.

ತಾರಿಕ್​ಜೋತ್ ಈ ಮೊದಲು ತಾನು ಕೊಲೆ ಮಾಡಿಲ್ಲ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದ, ಬಳಿಕ ತಪ್ಪೊಪ್ಪಿಕೊಂಡು ಆಕೆಯನ್ನು ಹೂತು ಹಾಕಿರುವುದಾಗಿ ತಿಳಿಸಿದ್ದ, ಬಳಿಕ ಸಮಾಧಿ ಸ್ಥಳಕ್ಕೆ ತೆರಳಿದಾಗ ಜಾಸ್ಮಿನ್​ಳ ಶೂಗಳು, ಕನ್ನಡಕ, ಬ್ಯಾಡ್ಜ್​ ಎಲ್ಲವೂ ಸಿಕ್ಕಿತ್ತು. ಆಕೆಯ ಕೈಕಾಲು ಕಟ್ಟಿ, ಕತ್ತು ಸೀಳಿ, ಆಕೆಯನ್ನು ಹೂತು ಹಾಕಲಾಗಿತ್ತು. ಜಾಸ್ಮಿನ್ ತಂದೆ-ತಾಯಿಗಾದ ನೋವು ಜೀವನ ಪರ್ಯಂತ ಹಾಗೆಯೇ ಉಳಿಯುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ