Big Breaking: Salman Rushdie ನ್ಯೂಯಾರ್ಕ್​​ನಲ್ಲಿ ಲೇಖಕ ಸಲ್ಮಾನ್​​​ ರಶ್ದಿ ಮೇಲೆ ಹಲ್ಲೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 15, 2022 | 3:10 PM

ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ ಚೌಟಕಾ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ  ಮಾತನಾಡುತ್ತಿದ್ದಾಗ ಈ ದಾಳಿ ನಡೆದಿದೆ.

Big Breaking: Salman Rushdie ನ್ಯೂಯಾರ್ಕ್​​ನಲ್ಲಿ ಲೇಖಕ ಸಲ್ಮಾನ್​​​ ರಶ್ದಿ ಮೇಲೆ ಹಲ್ಲೆ
Follow us on

ದಿ ಸೈಟಾನಿಕ್ ವರ್ಸಸ್  (The Satanic Verses)ಬರೆದ ನಂತರ ಹಲವಾರು ವರ್ಷಗಳ ಕಾಲ ಜೀವ ಬೆದರಿಕೆಗಳನ್ನು ಅನುಭವಿಸಿದ ಲೇಖಕ ಸಲ್ಮಾನ್ ರಶ್ದಿ(Salman Rushdie) ಮೇಲೆ ನ್ಯೂಯಾರ್ಕ್​​ನಲ್ಲಿ ಹಲ್ಲೆ ನಡೆದಿದೆ. ಬೂಕರ್ ಪ್ರಶಸ್ತಿ ವಿಜೇತ ರಶ್ದಿ ಚೌಟಕಾ ಸಂಸ್ಥೆಯ(Chautauqua Institution) ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ  ಮಾತನಾಡುತ್ತಿದ್ದಾಗ ಈ ದಾಳಿ ನಡೆದಿದೆ.

ಸಲ್ಮಾನ್ ರಶ್ದಿರನ್ನು ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ದಾಖಲು

ನ್ಯೂಯಾರ್ಕ್​ನಲ್ಲಿ ಲೇಖಕ ಸಲ್ಮಾನ್ ರಶ್ದಿಗೆ ಚಾಕುವಿನಿಂದ ಇರಿಯಲಾಗಿದೆ. ಸಲ್ಮಾನ್​​ ರಶ್ದಿರನ್ನು ಹೆಲಿಕಾಪ್ಟರ್‌ನಲ್ಲಿ ಏರ್​ಲಿಫ್ಟ್​​ ಮಾಡುವ ಮುಖಾಂತರ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಒಬ್ಬ ವ್ಯಕ್ತಿ ವೇದಿಕೆಯ ಮೇಲೆ ಓಡಿಹೋಗುವುದನ್ನು ಆಮೇಲೆ ರಶ್ದಿ ಮೇಲೆ ಹಲ್ಲೆ ನಡೆದಿರುವುದನ್ನು ಅವರು ನೋಡಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಆಯೋಜಕರು ತಕ್ಷಣವೇ ವೇದಿಕೆಯ ಮೇಲೆ ಧಾವಿಸುತ್ತಿರುವುದನ್ನು ತೋರಿಸುತ್ತದೆ.

Published On - 9:00 pm, Fri, 12 August 22