ಬಾಹ್ಯಾಕಾಶದಿಂದ ಭೂಮಿಗೆ ಹೊರಡುವ ಮುನ್ನ ಗಗನಯಾತ್ರಿ ಶುಭಾಂಶು ಭಾರತದ ಬಗ್ಗೆ ಏನು ಹೇಳಿದ್ರು?

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಮೊದಲ ಬಾರಿಗೆ ಭಾರತದ ಧ್ವಜ ಹಾರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಸ್ವಾಗತಿಸಲು 1.4 ಶತಕೋಟಿಗೂ ಹೆಚ್ಚು ಭಾರತೀಯರು ಉತ್ಸುಕರಾಗಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳ ಕಾಲ ಉಳಿದು ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ಮಾಡಿದ ನಂತರ, ಗಗನಯಾನ ಶುಭಾಂಶು ಅವರು ಆಕ್ಸಿಯಮ್ -4 ಕಾರ್ಯಾಚರಣೆಯ ತಮ್ಮ ಮೂವರು ಸಹ ಗಗನಯಾತ್ರಿಗಳೊಂದಿಗೆ ಮಂಗಳವಾರ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿಯಲಿದ್ದಾರೆ.

ಬಾಹ್ಯಾಕಾಶದಿಂದ ಭೂಮಿಗೆ ಹೊರಡುವ ಮುನ್ನ ಗಗನಯಾತ್ರಿ ಶುಭಾಂಶು ಭಾರತದ ಬಗ್ಗೆ ಏನು ಹೇಳಿದ್ರು?
ಶುಭಾಂಶು

Updated on: Jul 14, 2025 | 8:01 AM

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ(Shubhanshu Shukla) ಇಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(International Space Station)ದಿಂದ ಭೂಮಿಗೆ ಮರಳಲಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಗುರುವಾರ ಈ ಮಾಹಿತಿಯನ್ನು ನೀಡಿದೆ. ಶುಭಾಂಶು ಸೇರಿದಂತೆ ನಾಲ್ವರು ಸಿಬ್ಬಂದಿ ಆಕ್ಸಿಯಮ್ -4 ಕಾರ್ಯಾಚರಣೆಯ ಅಡಿಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ತಲುಪಿದ್ದರು.

ಬಾಹ್ಯಾಕಾಶ ನಿಲ್ದಾಣದಿಂದ ಹೊರಡುವ ಮುನ್ನ ಶುಭಾಂಶು ಶುಕ್ಲಾ ಮಾತನಾಡಿ, ಭಾರತ ಇಡೀ ವಿಶ್ವದಲ್ಲೇ ಸರ್ವಶ್ರೇಷ್ಠ ಎಂದು ಬಣ್ಣಿಸಿದ್ದಾರೆ.ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ ಮಿಷನ್ ಅನ್ನು ಉಡಾವಣೆ ಮಾಡಲಾಗಿತ್ತು.

8 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 26 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಿತು. ಆದಾಗ್ಯೂ, ಈ ಮಿಷನ್ 14 ದಿನಗಳದ್ದಾಗಿತ್ತು. ಈಗ ಗಗನಯಾತ್ರಿಗಳ ಮರಳುವಿಕೆ ನಾಲ್ಕು ದಿನಗಳ ವಿಳಂಬವಾಗಿದೆ. ಜುಲೈ 6 ರಂದು, ಶುಭಾಂಶು ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.

ಜೂನ್ 28ರಂದು ಶುಭಾಂಶು ಬಳಿ ಮಾತನಾಡಿದ್ದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಜೂನ್ 28ರಂದು ಶುಭಾಂಶು ಶುಕ್ಲಾ ಅವರ ಬಳಿ ಮಾತನಾಡಿದ್ದರು. ಬಾಹ್ಯಾಕಾಶಕ್ಕೆ ತಲುಪಿದ ಬಳಿಕ ನಿಮಗೆ ಏನೆನಿಸಿತು ಎಂದು ಕೇಳಿದಾಗ, ಬಾಹ್ಯಾಕಾಶದಿಂದ ನೋಡಿದಾಗ ಯಾವುದೇ ಗಡಿ ಕಾಣುವುದಿಲ್ಲ, ಇಡೀ ಭೂಮಿ ಒಗ್ಗಟ್ಟಿನಿಂದ ಇರುವಂತೆ ಕಾಣುತ್ತದೆ ಎಂದಿದ್ದರು.

ಶುಭಾಂಶು ಶುಕ್ಲಾ ಮಾತು

ಇದನ್ನು ಅಮೆರಿಕನ್ ಬಾಹ್ಯಾಕಾಶ ಕಂಪನಿ ಆಕ್ಸಿಯಮ್, ನಾಸಾ ಮತ್ತು ಸ್ಪೇಸ್‌ಎಕ್ಸ್ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ. ಈ ಕಂಪನಿಯು ತನ್ನ ಬಾಹ್ಯಾಕಾಶ ನೌಕೆಯಲ್ಲಿ ಖಾಸಗಿ ಗಗನಯಾತ್ರಿಗಳನ್ನು ISS ಗೆ ಕಳುಹಿಸುತ್ತದೆ. ಶುಭಾಂಶು ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತೀಯ ಶಿಕ್ಷಣ ಸಂಸ್ಥೆಗಳ 7 ಪ್ರಯೋಗಗಳನ್ನು ನಡೆಸಬೇಕಾಗಿತ್ತು.ಇವುಗಳಲ್ಲಿ ಹೆಚ್ಚಿನವು ಜೈವಿಕ ಅಧ್ಯಯನಗಳಿಗೆ ಸಂಬಂಧಿಸಿವೆ.

 

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಸಂಸ್ಥೆ ಇಸ್ರೋ ನಡುವಿನ ಒಪ್ಪಂದದಡಿಯಲ್ಲಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. 41 ವರ್ಷಗಳ ಹಿಂದೆ, ಭಾರತದ ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.

ಮತ್ತಷ್ಟು ಓದಿ: Axiom-4 Mission: ಜುಲೈ 14ರಂದು ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವೆಂದರೇನು?
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಭೂಮಿಯ ಸುತ್ತ ಸುತ್ತುವ ಒಂದು ದೊಡ್ಡ ಬಾಹ್ಯಾಕಾಶ ನೌಕೆಯಾಗಿದೆ. ಗಗನಯಾತ್ರಿಗಳು ಅದರಲ್ಲಿ ಇರುತ್ತಾರೆ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಾರೆ. ಇದು ಗಂಟೆಗೆ 28,000 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಇದು ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಸುತ್ತ ಒಂದು ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ಇದನ್ನು 5 ಬಾಹ್ಯಾಕಾಶ ಸಂಸ್ಥೆಗಳು ಒಟ್ಟಾಗಿ ನಿರ್ಮಿಸಿವೆ.

ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸೋಮವಾರ ಭಾರತೀಯ ಸಮಯ ಸಂಜೆ 4.35 ರ ಸುಮಾರಿಗೆ ಬ್ಯಾಹ್ಯಾಕಾಶ ಕೇಂದ್ರದಿಂದ ಬೇರ್ಪಡಲಿದೆ. ಅನ್‌ಡಾಕ್ ಮಾಡಿದ ಹಲವು ಗಂಟೆಗಳ ನಂತರ ಕ್ಯಾಲಿಫೋರ್ನಿಯಾದ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ನಿರೀಕ್ಷಿಸಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ