2024ರ ಬಾಬಾ ವಂಗಾ ಭವಿಷ್ಯವಾಣಿ: ಜಗತ್ತಿನ ಅಂತ್ಯ ಯಾವಾಗ, ಈ ವರ್ಷ ಸಂಭವಿಸಲಿದೆ ಮಹತ್ವದ ಘಟನೆ
Baba Vanga's Predictions: ಬಾಬಾ ವಂಗಾ ಅವರು 2024ರಲ್ಲಿ ತೀವ್ರ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿದೆ. ಸೈನ್ಸ್ ಅಡ್ವಾನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜಾಗತಿಕ ಸೂರ್ಯನ ಶಾಖದ ಅಲೆಗಳು 67% ದಷ್ಟು ಹೆಚ್ಚಾಗಲಿದೆ. 40 ವರ್ಷಗಳ ಹಿಂದೆ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಈ ಶಾಖದ ಅಲೆಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕುರುಡು ಬಲ್ಗೇರಿಯನ್ ಅತೀಂದ್ರಿಯ ಖ್ಯಾತಿಯ ಬಾಬಾ ವಂಗಾ (Baba Vanga Prediction) ನೀಡಿದ ಅನೇಕ ಭವಿಷ್ಯಗಳು ನಿಜವಾಗಿದೆ. ಈ ಹಿಂದೆಯು ಅಂದರೆ 2023ರಲ್ಲಿ ನಡೆಯಲಿರುವ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ 2024ರಲ್ಲಿ ನಡೆಯುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2024ರ ನಾಲ್ಕು ತಿಂಗಳುಗಳ ನಂತರ ಪ್ರಪಂಚವು ಈಗಾಗಲೇ ಗಮನಾರ್ಹ ಪ್ರಕ್ಷುಬ್ಧತೆಯನ್ನು ಅನುಭವಿಸಿದೆ. 9/11 ತಿಂಗಳಲ್ಲಿ ಚೆರ್ನೋಬಿಲ್ ದುರಂತ ಮತ್ತು ರಾಜಕುಮಾರಿ ಡಯಾನಾ ಅವರ ಸಾವಿನಂತಹ ಪ್ರಮುಖ ಜಾಗತಿಕ ಘಟನೆಗಳು ನಡೆಯಲಿದೆ ಎಂದು ಹೇಳಿದ್ದಾರೆ. ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್‌ಗೆ ಹೋಲಿಸಿದರೆ, ಇವರು ನುಡಿದ ಭವಿಷ್ಯಗಳು ನಿಜವಾಗಿದೆ.
ಹವಾಮಾನ ಬದಲಾವಣೆಗಳು
ಬಾಬಾ ವಂಗಾ ಅವರು 2024ರಲ್ಲಿ ತೀವ್ರ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿದೆ. ಸೈನ್ಸ್ ಅಡ್ವಾನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜಾಗತಿಕ ಸೂರ್ಯನ ಶಾಖದ ಅಲೆಗಳು 67% ದಷ್ಟು ಹೆಚ್ಚಾಗಲಿದೆ. 40 ವರ್ಷಗಳ ಹಿಂದೆ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಈ ಶಾಖದ ಅಲೆಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ. 1979 ರಿಂದ 1983 ರವರೆಗೆ, ಜಾಗತಿಕ ಶಾಖದ ಬಿಸಿ ಸಾಮಾನ್ಯವಾಗಿ ಸರಾಸರಿ ಎಂಟು ದಿನಗಳವರೆಗೆ ಮಾತ್ರ ಇರುತ್ತಿತ್ತು. ಆದರೆ ಈ ಶಾಖದ ಪರಿಣಾಮ 2016 ರಿಂದ 2020 ರವರೆಗೆ ಅವಧಿಯು 12 ದಿನಗಳವರೆಗೆ ಇದೆ. ಈ ಬಗ್ಗೆ ವಿಶ್ವ ಹವಾಮಾನ ಸಂಸ್ಥೆಯು ಕೂಡ 2024 ಇದರ ಪರಿಣಾಮದ ಬಗ್ಗೆ ಹೇಳಿತ್ತು.
ಸೈಬರ್ ದಾಳಿಗಳು
1996ರಲ್ಲಿ ಅವರ ಮರಣದ ಸಮಯಕ್ಕೂ ಮೊದಲು ಇಂಟರ್ನೆಟ್, ಡಿಜಿಟಲ್ ಯುಗ ಆರಂಭವಾಗಬೇಕಷ್ಟೇ ಆದರೆ, ಆ ಸಮಯದಲ್ಲೇ 2024ರಲ್ಲಿ ಸೈಬರ್ ದಾಳಿಗಳು ನಡೆಯುತ್ತದೆ ಎಂದು ಹೇಳಿದರು. ಜಾಗತಿಕ ಮಟ್ಟದಲ್ಲಿ ಭದ್ರತೆಯ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಿದರು. ಇತ್ತೀಚೆಗೆ, AT&T “ಡಾರ್ಕ್ ವೆಬ್” ನಲ್ಲಿ ಪತ್ತೆಯಾದ ಡೇಟಾಸೆಟ್ ಸುಮಾರು ಪ್ರಸ್ತುತ 7.6 ಮಿಲಿಯನ್ ಮತ್ತು ಹಳೆಯ 65.4 ಮಿಲಿಯನ್ ಖಾತೆದಾರರಿಗೆ ಸೇರಿದ ಸಾಮಾಜಿಕ ಭದ್ರತೆ ಸಂಖ್ಯೆಗಳು ಮತ್ತು ಪಾಸ್‌ವರ್ಡ್‌ಗಳು ಲೀಕ್ ಆಗಿದೆ. ಈ ಬಗ್ಗೆ ತನಿಖೆ ಕೂಡ ನಡೆಸುತ್ತಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ, Apple, Meta ಮತ್ತು X ನಂತಹ ಪ್ರಮುಖ ಕಂಪನಿಗಳು ಸೈಬರ್ ಸುರಕ್ಷತೆಯ ಉಲ್ಲಂಘನೆಯ ಎಲ್ಲಾ ನಿದರ್ಶನಗಳನ್ನು ಬಹಿರಂಗಪಡಿಸಿವೆ.
ಆರ್ಥಿಕ ಬಿಕ್ಕಟ್ಟು
ಜಾಗತಿಕ ಆರ್ಥಿಕ ಶಕ್ತಿಯಲ್ಲಿನ ಬದಲಾವಣೆಗಳು, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಹೆಚ್ಚುತ್ತಿರುವ ಸಾಲದ ಮಟ್ಟಗಳಿಂದ 2024ರಲ್ಲಿ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಬೇಕಾಗಿದೆ. ಈಗಾಗಲೇ ಈ ವರ್ಷ ಅಮೆರಿಕ ನಿರಂತರ ಹಣದುಬ್ಬರವನ್ನು ಎದುರಿಸುತ್ತಿದೆ. ಆರ್ಥಿಕಯನ್ನು ಭದ್ರತೆ ಮಾಡಲು ತುಂಬಾ ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಅಲಿಯಾನ್ಸ್ ಲೈಫ್ ಬಿಡುಗಡೆ ಮಾಡಿದ ಇತ್ತೀಚಿನ ಅಧ್ಯಯನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಘಾನಾ: 12 ವರ್ಷದ ಅಪ್ರಾಪ್ತೆಯನ್ನು ಮದುವೆಯಾದ 63 ವರ್ಷದ ವ್ಯಕ್ತಿ
ಭಯೋತ್ಪಾದನೆ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಪರೀಕ್ಷೆಯಲ್ಲಿ ಉತ್ತೇಜನ
ಯುರೋಪ್ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜೈವಿಕ ಶಸ್ತ್ರಾಸ್ತ್ರಗಳ ಪರೀಕ್ಷೆಯಲ್ಲಿ ತೊಡಗಿರುವ ಅಥವಾ ದಾಳಿಗಳನ್ನು ಪ್ರಾರಂಭಿಸುವ ದೇಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಪ್ರಮುಖ ಸಮಸ್ಯೆಗಳಾಗಿ ಉಳಿದಿವೆ.
ವೈದ್ಯಕೀಯ ಪ್ರಗತಿಗಳು
ಬಾಬಾ ವಂಗಾ ಅವರು 2024 ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಔಷಧಿ ಬರಲಿದೆ. ಈಗಾಗಲೇ ಶ್ವಾಸಕೋಶದ ಕ್ಯಾನ್ಸರ್ ಲಸಿಕೆಯನ್ನು ವೈದ್ಯರು ಅಭಿವೃದ್ಧಿಪಡಿಸಿದ್ದಾರೆ. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವಂತೆ ಯುನೈಟೆಡ್ ಕಿಂಗ್‌ಡಮ್ ಎರಡು ವರ್ಷಗಳ ಪ್ರಯೋಗಾಲಯ ಸಂಶೋಧನೆ ಮತ್ತು DNA ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ಲಸಿಕೆಗಾಗಿ 3000 ಡೋಸ್‌ಗಳ ಆರಂಭಿಕ ತಯಾರಿಕೆ ಬೇಕಾದ ಎಲ್ಲ ವೆಚ್ಚವನ್ನು ನೀಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ