ತಂದೆಯೊಬ್ಬ ಮಗುವನ್ನು ಕಾರಿನಲ್ಲಿ ಮಲಗಿಸಿ ಮರೆತು ಹೊರಗೆ ಹೋಗಿ ಏಳು ಗಂಟೆಗಳ ಬಳಿಕ ಬಂದು ನೋಡುವಾಗ ಆಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಪೋರ್ಚುಗಲ್ನಲ್ಲಿ ಈ ಘಟನೆ ನಡೆದಿದೆ, ವ್ಯಕ್ತಿಯೊಬ್ಬ ಮಗುವನ್ನು ಕಾರಿನಲ್ಲೇ ಮಲಗಿಸಿ ಮರೆತು ಹೊರ ಹೋಗಿದ್ದಾನೆ, ಬಿಸಿಲಿನಲ್ಲಿ ಕಾರು ನಿಂತಿದ್ದ ಕಾರಣ ಉಸಿರು ಗಟ್ಟಿ, ಜತೆಗೆ ಶಾಖದಿಂದಾಗಿ ಮಗು ಕೊನೆಯುಸಿರೆಳೆದಿದೆ.
ಮಗುವಿನ ತಂದೆ, ವಿಜ್ಞಾನ ಮತ್ತು ತಂತ್ರಜ್ಞಾನ NOVA ವಿಶ್ವವಿದ್ಯಾಲಯದ ಉಪನ್ಯಾಸಕರಾಗಿದ್ದು, ಸೆಪ್ಟೆಂಬರ್ 12 ರಂದು ಬೆಳಗ್ಗೆ 8 ಗಂಟೆಗೆ ಕ್ಯಾಂಪಸ್ ಕ್ರೆಚ್‌ನ 100 ಮೀಟರ್ ಒಳಗೆ ಕಾರನ್ನು ನಿಲ್ಲಿಸಿದ್ದರು. ಅವರು ಕೆಲಸಕ್ಕೆ ಹೋಗುವ ಮೊದಲು ತಮ್ಮ ಮಗಳನ್ನು ನರ್ಸರಿಗೆ ಬಿಡಬೇಕಿತ್ತು.
ಆದರೆ, ಅವರು ಎಂದಿನಂತೆ ತಮ್ಮ ಮಗಳನ್ನು ಕರೆದುಕೊಂಡು ಹೋಗದೆ, ನೇರವಾಗಿ ತಮ್ಮ ಕಚೇರಿಗೆ ಹೋದರು ಎಂದು ಪೋರ್ಚುಗೀಸ್ ದಿನಪತ್ರಿಕೆ ವರದಿ ಮಾಡಿದೆ.
ಏಳು ಗಂಟೆಗಳ ನಂತರ, ಉಪನ್ಯಾಸಕರು ತಮ್ಮ ಕಾರಿಗೆ ಹಿಂತಿರುಗಿದರು ಮತ್ತು ಹಿಂಬದಿ ಸೀಟಿನಲ್ಲಿ ತಮ್ಮ ಮಗಳು ಪ್ರಜ್ಞಾಹೀನವಾಗಿರುವುದನ್ನು ಕಂಡು ಆಘಾತಕ್ಕೊಳಗಾದರು.
ಮತ್ತಷ್ಟು ಓದಿ: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು: ಮೃತದೇಹ ತರಿಸಿಕೊಡುವಂತೆ ಸರ್ಕಾರಕ್ಕೆ ತಾಯಿ ಮನವಿ
ಮಗುವನ್ನು ಉಳಿಸಲು ಸಾಕಷ್ಟು ಪ್ರಯತ್ನ ಪಟ್ಟರು, ಆದರೂ ಮಗುವಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣವೇ ಆಂಬ್ಯುಲೆನ್ಸ್ ಕರೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊನೆಗೆ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ಘೋಷಿಸಿತು.
ಮಂಗಳವಾರದ ಪ್ರದೇಶದಲ್ಲಿ ತಾಪಮಾನವು ಸುಮಾರು 26 C ಆಗಿತ್ತು.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾಹಿತಿ ಇನ್ನೂ ಹೊರಬರಬೇಕಿದೆ. ತನಿಖಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮಗುವಿನ ತಂದೆ ಕಾರಿನಲ್ಲೇ ಮಗುವನ್ನು ಮರೆತು ಕಾಲೇಜಿಗೆ ಹೋಗಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ