Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಂಚಣಿ ಹಣ ಪಡೆಯಲು ಪತ್ನಿಯ ಮೃತದೇಹವನ್ನು 5 ವರ್ಷಗಳ ಕಾಲ ಫ್ರೀಜರ್​ನಲ್ಲಿಟ್ಟಿದ್ದ ವ್ಯಕ್ತಿಗೆ ಜೈಲು ಶಿಕ್ಷೆ

ಪಿಂಚಣಿ ಹಣ ಪಡೆಯಲು ಮೃತ ಪತ್ನಿಯ ದೇಹವನ್ನು 5 ವರ್ಷಗಳ ಕಾಲ ಫ್ರೀಜರ್​ನಲ್ಲಿಟ್ಟಿದ್ದ ವ್ಯಕ್ತಿಗೆ ಸ್ವೀಡಿಷ್ ನ್ಯಾಯಾಲಯ 3.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪತಿ ತನ್ನ ಪತ್ನಿಯ ಪಿಂಚಣಿಯನ್ನು ಸಂಗ್ರಹಿಸುವ ಸಲುವಾಗಿ ಸುಮಾರು ಐದು ವರ್ಷಗಳ ಕಾಲ ಫ್ರೀಜರ್‌ನಲ್ಲಿ ತನ್ನ ಹೆಂಡತಿಯ ದೇಹವನ್ನು ಸಂರಕ್ಷಿಸಿದ್ದ. ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿ ಮಾಡಿದರೆ ಎಲ್ಲರಿಗೂ ಪತ್ನಿ ಸಾವಿನ ವಿಚಾರ ತಿಳಿಯುತ್ತೆ ಎಂದು ಮನೆಯಲ್ಲೇ ಇರಿಸಿದ್ದ, 2018ರಲ್ಲಿ ಕ್ಯಾನ್ಸರ್​ನಿಂದ ಪತ್ನಿ ಮೃತಪಟ್ಟಿದ್ದರು, ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂದು ಸ್ನೇಹಿತರು ಹಾಗೂ ಕುಟುಂಬದವರ ಬಳಿ ಹೇಳಿಕೊಂಡಿದ್ದ.

ಪೊಲೀಸ್
Follow us
ನಯನಾ ರಾಜೀವ್
|

Updated on: Sep 14, 2023 | 8:28 AM

ಪಿಂಚಣಿ ಹಣ ಪಡೆಯಲು ಮೃತ ಪತ್ನಿಯ ದೇಹವನ್ನು 5 ವರ್ಷಗಳ ಕಾಲ ಫ್ರೀಜರ್​ನಲ್ಲಿಟ್ಟಿದ್ದ ವ್ಯಕ್ತಿಗೆ ಸ್ವೀಡಿಷ್ ನ್ಯಾಯಾಲಯ 3.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪತಿ ತನ್ನ ಪತ್ನಿಯ ಪಿಂಚಣಿಯನ್ನು ಸಂಗ್ರಹಿಸುವ ಸಲುವಾಗಿ ಸುಮಾರು ಐದು ವರ್ಷಗಳ ಕಾಲ ಫ್ರೀಜರ್‌ನಲ್ಲಿ ತನ್ನ ಹೆಂಡತಿಯ ದೇಹವನ್ನು ಸಂರಕ್ಷಿಸಿದ್ದ. ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿ ಮಾಡಿದರೆ ಎಲ್ಲರಿಗೂ ಪತ್ನಿ ಸಾವಿನ ವಿಚಾರ ತಿಳಿಯುತ್ತೆ ಎಂದು ಮನೆಯಲ್ಲೇ ಇರಿಸಿದ್ದ, 2018ರಲ್ಲಿ ಕ್ಯಾನ್ಸರ್​ನಿಂದ ಪತ್ನಿ ಮೃತಪಟ್ಟಿದ್ದರು, ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂದು ಸ್ನೇಹಿತರು ಹಾಗೂ ಕುಟುಂಬದವರ ಬಳಿ ಹೇಳಿಕೊಂಡಿದ್ದ.

ಆಕೆ ಯಾರೊಂದಿಗೂ ಮಾತನಾಡಲು ಬಯಸುತ್ತಿಲ್ಲ ಎಂದು ಸುಳ್ಳು ಹೇಳಿ ಎಲ್ಲರ ಸಂಪರ್ಕದಿಂದ ದೂರ ಇದ್ದ. ಮನೆಗೆ ಬಂದವರಿಗೆಲ್ಲಾ ಆಕೆ ನಿದ್ರಿಸುತ್ತಿದ್ದಾಳೆ, ತೊಂದರೆ ಕೊಡಬೇಡಿ ಎಂದು ಹೇಳಿ ಕಳುಹಿಸುತ್ತಿದ್ದ, ಆದರೂ ಕೆಲವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಆಗ ಪೊಲೀಸರು ಮನೆಗೆ ಬಂದು ಶವವನ್ನು ವಶಪಡಿಸಿಕೊಂಡಿದ್ದಾರೆ. ಆಕೆಯ ಸಾವು ಹಾಗೂ ದೇಹವನ್ನು ಫ್ರೀಜರ್​ನಲ್ಲಿ ಇಟ್ಟಿರುವ ಕುರಿತು ಆತ ಒಪ್ಪಿಕೊಂಡಿದ್ದಾನೆ. ದಂಪತಿ ಅರ್ಜಾಂಗ್​ನಲ್ಲಿ ವಾಸವಾಗಿದ್ದರು, ಇದು ಸ್ಟಾಕ್​ಹೋಮ್​ನಿಂದ ಪಶ್ಚಿಮಕ್ಕೆ 340 ಕಿ.ಮೀ ದೂರದಲ್ಲಿದೆ.

ಮತ್ತಷ್ಟು ಓದಿ: ಪ್ರೀತಿಗಾಗಿ ಬಾಗೇಪಲ್ಲಿ ಯುವತಿಯ ಬೆನ್ನು ಬಿದ್ದಿದ್ದ, ನಿರಾಕರಿಸಿದಾಗ ಚಾಕುವಿನಿಂದ ಕುತ್ತಿಗೆಗೆ ಇರಿದ, ರಕ್ಷಣೆಗೆ ಮುಂದಾದವರ ಮೇಲೆಯೂ ಹುಚ್ಚಾಟ ಮೆರೆದ

ಆ ವ್ಯಕ್ತಿ 1.2 ಮಿಲಿಯನ್​ನಷ್ಟು ಪಿಂಚಣಿ ಪಡೆದಿದ್ದ, ಜನರು ನಾನಾ ಕಾರಣಗಳಿಂದಾಗಿ ಫ್ರೀಜರ್​ನ್ನು ಬಳಕೆ ಮಾಡುತ್ತಾರೆ, ಆದರೆ ಈ ವ್ಯಕ್ತಿ ಪತ್ನಿಯ ಶವವನ್ನು ಅದರಲ್ಲಿಟ್ಟು ತಪ್ಪು ಮಾಡಿದ್ದಾನೆ ಎಂದು ಪ್ರಾಸಿಕ್ಯೂಟರ್ ಲಿಂಡಾ ಹೇಳಿದ್ದಾರೆ.

ನಾಗರಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ, ವಂಚನೆ, ಶವವನ್ನು ವಿರೂಪಗೊಳಿಸುವುದು, ನಕಕಿ ದಾಖಲೆ ಸೃಷ್ಟಿ ಸೇರಿದಂತೆ ಇತರೆ ಆರೋಪಗಳ ಮೇಲೆ ಆತನನ್ನು ದೋಷಿ ಎಂದು ಕೋರ್ಟ್​ ತೀರ್ಪು ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ

ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು

ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ

ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ

ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್