Shahabuddin Chuppu: ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಶಹಾಬುದ್ದೀನ್ ಚುಪ್ಪು ಆಯ್ಕೆ

Bangladesh New President: ಬಾಂಗ್ಲಾದೇಶ(Bangladesh)ದ ನೂತನ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಮೊಹಮ್ಮದ್ ಶಹಾಬುದ್ದೀನ್ ಚುಪ್ಪು(Shahabuddin Chuppu) ಆಯ್ಕೆಯಾಗಿದ್ದಾರೆ.

Shahabuddin Chuppu: ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಶಹಾಬುದ್ದೀನ್ ಚುಪ್ಪು ಆಯ್ಕೆ
ಶಹಾಬುದ್ದೀನ್ ಚುಪ್ಪುImage Credit source: ANI
Follow us
ನಯನಾ ರಾಜೀವ್
|

Updated on:Feb 14, 2023 | 11:19 AM

ಬಾಂಗ್ಲಾದೇಶ(Bangladesh)ದ ನೂತನ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಮೊಹಮ್ಮದ್ ಶಹಾಬುದ್ದೀನ್ ಚುಪ್ಪು(Shahabuddin Chuppu) ಆಯ್ಕೆಯಾಗಿದ್ದಾರೆ. ಅವರು ಬಾಂಗ್ಲಾದೇಶದ 22 ನೇ ಅಧ್ಯಕ್ಷರಾಗಲಿದ್ದಾರೆ. 74 ವರ್ಷದ ಶಹಾಬುದ್ದೀನ್ ಚುಪ್ಪು ಅವಿರೋಧವಾಗಿ ಆಯ್ಕೆಯಾದರು. ಮೊಹಮ್ಮದ್ ಅಬ್ದುಲ್ ಹಮೀದ್ ಬದಲಿಗೆ ಅಧಯಜ್ಷ ಸ್ಥಾನಕ್ಕೇರಲಿದ್ದಾರೆ, ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಲ್ ಅವರು ಭಾನುವಾರ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಯ ನಂತರ ಚುಪ್ಪು ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರು ಸೋಮವಾರ ಗೆಜೆಟ್ ಕೂಡ ಹೊರಡಿಸಿದ್ದಾರೆ. ಸಂಸತ್ತಿನಲ್ಲಿ ಬಹುಮತ ಹೊಂದಿರುವ ಆಡಳಿತಾರೂಢ ಅವಾಮಿ ಲೀಗ್ ಪಕ್ಷವು , ಚುಪ್ಪು ಅವರನ್ನು ದೇಶದ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿತ್ತು. 350 ಸದಸ್ಯ ಬಲದ ಸಂಸತ್ತಿನಲ್ಲಿ ಅವಾಮಿ ಲೀಡ್ 305 ಸದಸ್ಯರನ್ನು ಹೊಂದಿದೆ.

ಮತ್ತಷ್ಟು ಓದಿ: Pak vs Bangla: 1971ರ ನರಮೇಧ: ಪಾಕಿಸ್ತಾನದ ಕ್ಷಮೆಗೆ ಬಾಂಗ್ಲಾದೇಶ ಮತ್ತೆ ಆಗ್ರಹ

ಚುಪ್ಪು ಅವರ ನಾಮನಿರ್ದೇಶನ ಪತ್ರವನ್ನು ಚುನಾವಣಾ ಆಯೋಗಕ್ಕೆ ಅವಾಮಿ ಲೀಗ್ ಸಲ್ಲಿಸಿತ್ತು. ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಹಮೀದ್ ಅವರ ಅಧಿಕಾರಾವಧಿ ಏಪ್ರಿಲ್ 24ರಂದು ಅಂತ್ಯಗೊಳ್ಳಲಿದೆ. ಮೊಹಮ್ಮದ್ ಶಹಾಬುದ್ದೀನ್ ಚುಪ್ಪು ವಾಯುವ್ಯ ಪಬ್ನಾ ಜಿಲ್ಲೆಯಲ್ಲಿ ಜನಿಸಿದರು. ಅವರು 1960 ರ ದಶಕದ ಕೊನೆಯಲ್ಲಿ ಮತ್ತು 1970 ರ ದಶಕದ ಆರಂಭದಲ್ಲಿ ಅವಾಮಿ ಲೀಗ್‌ನ ವಿದ್ಯಾರ್ಥಿ ಮತ್ತು ಯುವ ವಿಭಾಗದ ಭಾಗವಾಗಿದ್ದರು.

ಅವರು ನಾಯಕರಾಗಿದ್ದರು. ಇಷ್ಟೇ ಅಲ್ಲ, ಚಪ್ಪು 1971 ರ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದ್ದರು ಮತ್ತು ಆಗಸ್ಟ್ 15 ರಂದು, 1975 ರಲ್ಲಿ ಬಾಂಗ್ಲಾದೇಶದ ಸಂಸ್ಥಾಪಕ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಹತ್ಯೆಯನ್ನು ಅವರ ಕುಟುಂಬ ಸದಸ್ಯರೊಂದಿಗೆ ಮಿಲಿಟರಿ ದಂಗೆಯಲ್ಲಿ ಪ್ರತಿಭಟಿಸಿ ಅವರು ಜೈಲು ಸೇರಿದ್ದರು.

ಆ ದಂಗೆಯಿಂದಾಗಿ ಅವಾಮಿ ಲೀಗ್ ಸರ್ಕಾರವೂ ಪತನವಾಯಿತು. ನಂತರ 1982 ರಲ್ಲಿ ಅವರು ದೇಶದ ನ್ಯಾಯಾಂಗ ಸೇವೆಗೆ ಸೇರಿದರು. ನಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ರಾಜಕೀಯಕ್ಕೆ ಸೇರಿದ ನಂತರ, ಅವರು ಅವಾಮಿ ಲೀಗ್ ಸಲಹಾ ಮಂಡಳಿಯ ಸದಸ್ಯರಾದರು. ಈಗ ದೇಶದ ಅಧ್ಯಕ್ಷರಾದ ನಂತರ ಪಕ್ಷದಲ್ಲಿನ ತಮ್ಮ ಜವಾಬ್ದಾರಿಯನ್ನು ಬಿಟ್ಟುಕೊಡಬೇಕಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Tue, 14 February 23