America: ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ: ಒಂದು ಸಾವು, ಅನೇಕರಿಗೆ ಗಾಯ
ಅಮೇರಿಕಾದ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ನಡೆದಿದೆ.
ಅಮೇರಿಕಾದ ( America) ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ (Michigan State University) ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ರಕ್ಷಣೆ ಕಾರ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ. ಬರ್ಕಿ ಹಾಲ್ ಎಂದು ಕರೆಯಲ್ಪಡುವ ಶೈಕ್ಷಣಿಕ ಕಟ್ಟಡದ ಬಳಿ ಮತ್ತು ಐಎಂ ಈಸ್ಟ್ ಎಂಬ ಅಥ್ಲೆಟಿಕ್ ಸೌಲಭ್ಯದ ಬಳಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡಿನ ದಾಳಿಯ ನಂತರ ಪೊಲೀಸ್ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಸುತ್ತುವರಿಯುತ್ತಿರಿದುದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ತೋರಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: America Freezed: ಮನುಷ್ಯರು ಬದುಕಲುಂಟೆ; ಅಮೆರಿಕದಲ್ಲಿ ದಾಖಲೆ ಚಳಿ; ಮೈನಸ್ 79 ಡಿಗ್ರಿ ಉಷ್ಣಾಂಶಕ್ಕೆ ತತ್ತರಿಸುತ್ತಿರುವ ಜನರು
ಈ ದಾಳಿಯಂದ ಅನೇಕ ಗಾಯಗೊಂಡಿದ್ದಾರೆ ಎಂದು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ (MSU) ಹೇಳಿದೆ. ಒಬ್ಬ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಉನ್ನತ ಶಿಕ್ಷಣದ ಪ್ರಮುಖ US ಸಾರ್ವಜನಿಕ ಸಂಸ್ಥೆಯಾಗಿದ್ದು, ಇದರ ಪ್ರಮುಖ ಪೂರ್ವ ಲ್ಯಾನ್ಸಿಂಗ್ ಕ್ಯಾಂಪಸ್ 50,000 ಪದವೀಧರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳನ್ನು ಹೊಂದಿದೆ.