AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಶಿಬಿರ, ಹಿಂದೂ ಪ್ರಾಧ್ಯಾಪಕರ ಕೊಲೆ, ಹಿಂದೂ ಗ್ರಾಮಗಳಿಗೆ ಬೆಂಕಿ ಇಟ್ಟಿದ್ದ ಅಜರುಲ್ ಇಸ್ಲಾಂ ಖುಲಾಸೆ

ಅತ್ಯಾಚಾರ ಶಿಬಿರ, ನರಮೇಧ, ಹಿಂದೂ ಗ್ರಾಮಗಳಿಗೆ ಬೆಂಕಿ, ಹಿಂದೂ ಪ್ರಾಧ್ಯಾಪಕ ಹತ್ಯೆ ಇವೆಲ್ಲವೂ ನಡೆದಿದ್ದು 1971ರ ಬಾಂಗ್ಲಾದೇಶದ ವಿಮೋಚನಾ ಯುದ್ಧದ ಸಮಯದಲ್ಲಿ, ಇದಕ್ಕೆ ಕಾರಣನಾಗಿದ್ದ ಜಮಾತ್ ನಾಯಕ ರಜಾಕರ್ ಅಜರುಲ್​ ಇಸ್ಲಾಂನನ್ನು ಬಾಂಗ್ಲಾದೇಶ ಸುಪ್ರೀಂಕೋರ್ಟ್​ ಮರಣದಂಡನೆ ಶಿಕ್ಷೆಯಿಂದ ಖುಲಾಸೆಗೊಳಿಸಿದೆ. ಅಜರುಲ್ ಇಸ್ಲಾಂನನ್ನು 2012 ರಲ್ಲಿ ಬಂಧಿಸಲಾಯಿತು. ಪಾಕಿಸ್ತಾನಿ ಸೈನ್ಯದೊಂದಿಗೆ ಸೇರಿ 1,256 ಜನರನ್ನು ಕೊಂದಿರುವ, 17 ಜನರನ್ನು ಅಪಹರಿಸಿರುವ ಮತ್ತು 13 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಅವನು ತಪ್ಪಿತಸ್ಥನೆಂದು ಸಾಬೀತಾಗಿತ್ತು.

ಅತ್ಯಾಚಾರ ಶಿಬಿರ, ಹಿಂದೂ ಪ್ರಾಧ್ಯಾಪಕರ ಕೊಲೆ, ಹಿಂದೂ ಗ್ರಾಮಗಳಿಗೆ ಬೆಂಕಿ ಇಟ್ಟಿದ್ದ ಅಜರುಲ್ ಇಸ್ಲಾಂ ಖುಲಾಸೆ
ಅಜರುಲ್ ಇಸ್ಲಾಂ Image Credit source: Social Media X
ನಯನಾ ರಾಜೀವ್
|

Updated on: May 28, 2025 | 9:03 AM

Share

ಢಾಕಾ, ಮೇ 28: 1971ರಲ್ಲಿ ಬಾಂಗ್ಲಾದೇಶ(Bangladesh)ದ ವಿಮೋಚನಾ ಯುದ್ಧದ ಸಮಯದಲ್ಲಿ ನಡೆದ ನರಮೇಧ, ಅತ್ಯಾಚಾರ ಸೇರಿ ಇತರೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದ ಜಮಾತ್ ನಾಯಕ ರಜಾಕರ್ ಅಜರುಲ್ ಇಸ್ಲಾಂನನ್ನು ಬಾಂಗ್ಲಾದೇಶ ಸುಪ್ರೀಂಕೋರ್ಟ್​ ಖುಲಾಸೆಗೊಳಿಸಿದೆ. ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಅವರ ಮರಣದಂಡನೆಯನ್ನು ರದ್ದುಗೊಳಿಸಿದೆ. ಎಟಿಎಂ ಅಜರುಲ್ ಇಸ್ಲಾಂನನ್ನು ಸುಪ್ರೀಂ ಕೋರ್ಟ್‌ನ ಮೇಲ್ಮನವಿ ವಿಭಾಗವು ಖುಲಾಸೆಗೊಳಿಸಿದೆ.

2012ರಲ್ಲಿ ಇಸ್ಲಾಂ ಬಂಧನ

ಅಜರುಲ್ ಇಸ್ಲಾಂನನ್ನು 2012 ರಲ್ಲಿ ಬಂಧಿಸಲಾಯಿತು. ಪಾಕಿಸ್ತಾನಿ ಸೈನ್ಯದೊಂದಿಗೆ ಸೇರಿ 1,256 ಜನರನ್ನು ಕೊಂದಿರುವ, 17 ಜನರನ್ನು ಅಪಹರಿಸಿರುವ ಮತ್ತು 13 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಅವನು ತಪ್ಪಿತಸ್ಥನೆಂದು ಸಾಬೀತಾಗಿತ್ತು.

ಅಜರುಲ್ ದೋಷಿ

ಜಮಾತ್-ಎ-ಇಸ್ಲಾಮಿ ಭಯೋತ್ಪಾದಕನು ನರಮೇಧ, ಬಂಧನ, ಚಿತ್ರಹಿಂಸೆ, ಗಂಭೀರ ಗಾಯ, ಲೂಟಿ ಮತ್ತು ಬೆಂಕಿ ಹಚ್ಚುವಿಕೆಯಲ್ಲಿಯೂ ಭಾಗಿಯಾಗಿದ್ದನು. ಡಿಸೆಂಬರ್ 2014 ರಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಅವನನ್ನು ದೋಷಿ ಎಂದು ಘೋಷಿಸಿತು.

ಇದನ್ನೂ ಓದಿ
Image
ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ: ಮೋದಿ
Image
ತನ್ನ ಅಸ್ತಿತ್ವಕ್ಕೆ ಭಾರತವೇ ದೊಡ್ಡ ಬೆದರಿಕೆ ಎಂದುಕೊಂಡಿದೆ ಪಾಕಿಸ್ತಾನ
Image
ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ
Image
ಪಾಕ್​ ಸರ್ಕಾರದೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ: ಇಮ್ರಾನ್ ಖಾನ್

ಹೊಸ ಮೇಲ್ಮನವಿಗೆ ಅವಕಾಶ

ಅಕ್ಟೋಬರ್ 2019 ರಲ್ಲಿ ಸುಪ್ರೀಂ ಕೋರ್ಟ್‌ನ ಮೇಲ್ಮನವಿ ವಿಭಾಗವು ಆತನ ಮರಣದಂಡನೆಯನ್ನು ಎತ್ತಿಹಿಡಿಯಿತು. ಈ ವರ್ಷದ ಫೆಬ್ರವರಿಯಲ್ಲಿ, ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಇಸ್ಲಾಂಗೆ ತಪ್ಪಿತಸ್ಥ ತೀರ್ಪನ್ನು ಪ್ರಶ್ನಿಸಲು ಹೊಸ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತು. ಈ ಹಿಂದೆ ಶಿಕ್ಷೆ ಮತ್ತು ಮರಣದಂಡನೆಯನ್ನು ಎತ್ತಿಹಿಡಿದ ಅದೇ ಮೇಲ್ಮನವಿ ವಿಭಾಗವು ಜಮಾತ್ ಉಗ್ರನನ್ನು ಖುಲಾಸೆಗೊಳಿಸಿದೆ.

ಮತ್ತಷ್ಟು ಓದಿ: ಬಾಂಗ್ಲಾ ಮಹಿಳೆಯರನ್ನು ಮದುವೆಯಾಗಬೇಡಿ; ತನ್ನ ಪ್ರಜೆಗಳಿಗೆ ಚೀನಾ ಎಚ್ಚರಿಕೆ

ಅತ್ಯಾಚಾರ, ನರಮೇಧ

ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತನಿಖೆಯ ಪ್ರಕಾರ, ಅಜರುಲ್ ಇಸ್ಲಾಂ 1971 ರ ಏಪ್ರಿಲ್ 16 ರಂದು ಮೋಕ್ಸೇದ್‌ಪುರ ಗ್ರಾಮದ ಮೇಲೆ ದಾಳಿ ಮಾಡಿದ್ದ. ನಿರಾಯುಧ ನಾಗರಿಕರನ್ನು ಕೊಲ್ಲುವುದು, ಮನೆಗಳನ್ನು ಲೂಟಿ ಮಾಡುವುದು ಮತ್ತು ಬೆಂಕಿ ಹಚ್ಚುವಲ್ಲಿ ಅವನು ಭಾಗಿಯಾಗಿದ್ದ. ಅವನೊಂದಿಗೆ ಪಾಕಿಸ್ತಾನಿ ಸೈನ್ಯ ಮತ್ತು ಇತರ ಜಮಾತ್ ನಾಯಕರಿದ್ದರು.

ಒಂದು ದಿನದ ಬಳಿಕ ಇಸ್ಲಾಂ  ಬೀಲ್ ಬಳಿ ಹಿಂದೂ ಪ್ರಾಬಲ್ಯದ ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ದಾಳಿ ನಡೆಸಿ 1200 ಕ್ಕೂ ಹೆಚ್ಚು ಜನರನ್ನು ಕೊಂದಿದ್ದ, ಭೂಸ್ವಾಧೀನ, ಬೆಂಕಿ ಹಚ್ಚುವಿಕೆ, ಕೊಲೆ ಮತ್ತು ದೊಡ್ಡ ಪ್ರಮಾಣದ ನರಮೇಧದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ.

ಪ್ರಾಧ್ಯಾಪಕರ ಕೊಲೆ

ಪಾಕಿಸ್ತಾನಿ ಪಡೆಗಳೊಂದಿಗೆ ಸೇರಿ ರಂಗ್‌ಪುರ್ ಕಾರ್ಮೈಕಲ್ ಕಾಲೇಜಿನ ಮೇಲೆ ದಾಳಿ ಮಾಡಿ, 4 ಹಿಂದೂ ಪ್ರಾಧ್ಯಾಪಕರು ಮತ್ತು ಅವರ ಒಬ್ಬ ಪತ್ನಿಯನ್ನು ಅಪಹರಿಸಿದರು. ಎಲ್ಲಾ ಐವರನ್ನು ಕ್ರೂರವಾಗಿ ಕೊಂದಿದ್ದರು, ಈ ಘಟನೆ ಏಪ್ರಿಲ್ 30, 1971 ರಂದು ಸಂಭವಿಸಿತ್ತು. 1971 ರ ಮಾರ್ಚ್ ಮತ್ತು ಡಿಸೆಂಬರ್ ನಡುವೆ ರಂಗ್‌ಪುರದಲ್ಲಿ ‘ಅತ್ಯಾಚಾರ ಶಿಬಿರ’ವನ್ನು ನಡೆಸುತ್ತಿದ್ದ, ಅಲ್ಲಿ ಮಹಿಳೆಯರನ್ನು ಅಪಹರಿಸಿ ಕರೆತಂದು, ಬಂಧಿಸಿ, ಚಿತ್ರಹಿಂಸೆ ನೀಡಿ ಮತ್ತು ಪದೇ ಪದೇ ಅತ್ಯಾಚಾರ ಮಾಡಿದ್ದ.

1971ರ ಯುದ್ಧದ ವೇಳೆ ಪಾಕಿಸ್ತಾನದ ಸೇನಾ ಪಡೆಗಳು ಬಾಂಗ್ಲಾದೇಶೀಯರ ಮೇಲೆ ದಾಳಿ ಮಾಡಿ ನರಮೇಧ ಎಸಗಿದ 1971ರಲ್ಲಿ ಬಾಂಗ್ಲಾದೇಶ ವಿಮೋಚನೆಗಾಗಿ ನಡೆದ ಹೋರಾಟದ ವೇಳೆ ಪಾಕಿಸ್ತಾನ ಸೇನಾ ಪಡೆಗಳು ಅಮಾನುಷ ರೀತಿಯಲ್ಲಿ ಬಾಂಗ್ಲಾದೇಶೀಯರನ್ನು ಹತ್ಯೆಗೈದಿದ್ದವು. ಆಗ ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಭಾಷೆ ವಿಚಾರಕ್ಕೆ ಶುರುವಾದ ವಿಮುಕ್ತಿ ಹೋರಾಟ 1971ರಲ್ಲಿ ತಾರಕಕ್ಕೇರಿತ್ತು.

ಆ ಹೋರಾಟ ಹತ್ತಿಕ್ಕಲು ಪಾಕಿಸ್ತಾನ ಸೇನಾ ಪಡೆಗಳು ಬಾಂಗ್ಲಾದ ಇಸ್ಲಾಮಿ ಉಗ್ರರ ಜೊತೆ ಸೇರಿಕೊಂಡು 3ರಿಂದ 30 ಲಕ್ಷ ಜನರ ನರಮೇಧ ಮಾಡಿತ್ತು. ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಆಗಿತ್ತು. ಅಂತಿಮವಾಗಿ ಭಾರತೀಯ ಸೇನೆಯ ಸಹಾಯದಿಂದ ಬಾಂಗ್ಲಾದೇಶ ವಿಮೋಚನೆ ಪಡೆದು ಸ್ವತಂತ್ರ ದೇಶವಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ