ಬೈರೂತ್ ವಿಸ್ಫೋಟ: ಜನಾಕ್ರೋಶಕ್ಕೆ ಭ್ರಷ್ಟ ಲೆಬನಾನ್ ಸರ್ಕಾರ ಉಡೀಸ್!
ಲೆಬನಾನ್ ರಾಜಧಾನಿ ಬೈರೂತ್ ಬಂದರು ಪ್ರದೇಶ ಮೇಲಿನ ಚಿತ್ರದಂತೆ ಈಗ ಸ್ಮಶಾನಸದೃಶ. ಇದೀಗ ಅಲ್ಲಿನ ಭ್ರಷ್ಟ ಸರ್ಕಾರವೂ ಪತನಗೊಂಡಿದೆ. ಹೌದು, ಸರ್ಕಾರದ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿತು ಎಂದು ಜನರ ಆಕ್ರೋಶ ಮುಗಿಲುಮುಟ್ಟಿದೆ. ಘಟನೆ ಬಳಿಕ ಒಂದು ವಾರದಿಂದ ಬೀದಿಗಿಳಿದು ಪ್ರತಿಭಟನೆಗೆ ಮುಂದಾದ ಜನರ ಆಕ್ರೋಶಕ್ಕೆ ಮಣಿದ ಸರ್ಕಾರವು ಇದೀಗ ರಾಜೀನಾಮೆ ನೀಡಿದೆ. ದುರಂತದ ಜವಾಬ್ದಾರಿಯನ್ನ ಹೊತ್ತು ನಾವು ರಾಜೀನಾಮೆ ನೀಡುತ್ತಿದ್ದೇವೆ ಎಂದು ಅಲ್ಲಿನ ಆರೋಗ್ಯ ಸಚಿವ ಹಮದ್ ಹಸನ್ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ […]
ಲೆಬನಾನ್ ರಾಜಧಾನಿ ಬೈರೂತ್ ಬಂದರು ಪ್ರದೇಶ ಮೇಲಿನ ಚಿತ್ರದಂತೆ ಈಗ ಸ್ಮಶಾನಸದೃಶ. ಇದೀಗ ಅಲ್ಲಿನ ಭ್ರಷ್ಟ ಸರ್ಕಾರವೂ ಪತನಗೊಂಡಿದೆ.
ಹೌದು, ಸರ್ಕಾರದ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿತು ಎಂದು ಜನರ ಆಕ್ರೋಶ ಮುಗಿಲುಮುಟ್ಟಿದೆ. ಘಟನೆ ಬಳಿಕ ಒಂದು ವಾರದಿಂದ ಬೀದಿಗಿಳಿದು ಪ್ರತಿಭಟನೆಗೆ ಮುಂದಾದ ಜನರ ಆಕ್ರೋಶಕ್ಕೆ ಮಣಿದ ಸರ್ಕಾರವು ಇದೀಗ ರಾಜೀನಾಮೆ ನೀಡಿದೆ. ದುರಂತದ ಜವಾಬ್ದಾರಿಯನ್ನ ಹೊತ್ತು ನಾವು ರಾಜೀನಾಮೆ ನೀಡುತ್ತಿದ್ದೇವೆ ಎಂದು ಅಲ್ಲಿನ ಆರೋಗ್ಯ ಸಚಿವ ಹಮದ್ ಹಸನ್ ಹೇಳಿಕೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಘಟನೆಗೆ ಸಂಬಂಧಿಸಿದಂತೆ ಹಲವಾರು ಸಚಿವರು ರಾಜೀನಾಮೆ ನೀಡಿದ್ದರು. ಇದೀಗ ಸರ್ಕಾರವೇ ರಾಜೀನಾಮೆ ನೀಡಲು ಮುಂದಾಗಿದ್ದು ಪ್ರಧಾನಿ ಹಸನ್ ಡಿಯಾಬ್ ಅವರೂ ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನ ರಾಷ್ಟ್ರಪತಿ ಮಿಚೆಲ್ ಔನ್ಗೆ ನೀಡಿದ್ದಾರೆ.
ಹಸನ್ ಡಿಯಾಬ್ ಸರ್ಕಾರದ ವಿರುದ್ಧ ಈ ಹಿಂದೆಯೂ ದುರಾಡಳಿತದ ಆರೋಪ ಕೇಳಿಬಂದಿತ್ತು. ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿತ್ತು ಎಂಬ ಮಾತುಗಳು ಕೇಳಿಬಂದಿತ್ತು.
ಇದೀಗ, ಸರ್ಕಾರದ ಏಳು ತಿಂಗಳ ಆಡಳಿತಕ್ಕೆ ದುರಂತದ ಮುಖಾಂತರ ಅಂತ್ಯ ದೊರೆತಿದೆ. ಮುಂಬರುವ ಸರ್ಕಾರವು ಬಂದರು ದುರಂತದ ಆಘಾತ ಮತ್ತು ಎದುರಾಗಿರುವ ಹಾನಿಯಿಂದ ತತ್ತರಿಸಿರುವ ಜನರಿಗೆ ಹೇಗೆ ಆಸರೆಯಾಗುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
Published On - 12:31 pm, Tue, 11 August 20