ಸ್ವಿಟ್ಜರ್ಲೆಂಡ್ನಲ್ಲಿ ಅದ್ಧೂರಿಯಾಗಿ ನಡೆಯಿತು ಶಿವ ದೇವಾಲಯದ ಭೂಮಿ ಪೂಜೆ
ಸ್ವಿಟ್ಜರ್ಲೆಂಡ್ ಜ್ಯೂರಿಚ್‌ನಲ್ಲಿರುವ ಶಿವ ದೇವಾಲಯವನ್ನು ದೊಡ್ಡದಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಎರಡು ದಿನಗಳ ಕಾಲ ಭೂಮಿ ಪೂಜೆ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳು ನೆರವೇರಿದವು.
ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಎಂಬಂತೆ ಆ ಶಿವನನ್ನು ನೆನೆದರೆ ವ್ಯಕ್ತಿ ಮಾಡಿದ ಎಲ್ಲಾ ಪಾಪತಾಪಗಳೆಲ್ಲಾ ಕಳೆದು ಹೋಗುತ್ತದೆ ಎನ್ನುವ ನಂಬಿಕೆ ಇದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಹಲವು ದೇಶಗಳಲ್ಲಿ ಶಿವಭಕ್ತರಿದ್ದಾರೆ. ವಿದೇಶಗಳಲ್ಲಿ ಅನೇಕ ಪ್ರಸಿದ್ಧ ಶಿವ ದೇವಾಲಯಗಳಿವೆ, ಅವುಗಳು ಹೆಚ್ಚು ಗುರುತಿಸಲ್ಪಟ್ಟಿವೆ. ಅಂತಹ ಒಂದು ಪ್ರಸಿದ್ಧ ಶಿವ ದೇವಾಲಯವು ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿದೆ.
ಇದು ಶಿವನಿಗೆ ಸಮರ್ಪಿತವಾಗಿದೆ. ದೇವಾಲಯದ ಪ್ರದೇಶವನ್ನು ಈಗ ವಿಸ್ತರಿಸಲಾಗುತ್ತಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಭೂಮಿಪೂಜೆ ಏರ್ಪಡಿಸಲಾಗಿತ್ತು. ಈ ಪೂಜೆಯು ಮಾರ್ಚ್ 22 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 24 ರಂದು ಮುಕ್ತಾಯಗೊಳ್ಳಲಿದೆ.
ಭೂಮಿಪೂಜೆ ನಿಮಿತ್ತ ವಿಧಿವಿಧಾನದಂತೆ ಪೂಜೆ ಆಯೋಜಿಸಲಾಗುತ್ತಿದೆ. ಇದರಲ್ಲಿ ವೇದ ಮಂತ್ರ ಪಠಣ ಮತ್ತು ಹವನ ನಡೆಯುತ್ತಿದೆ. ಜ್ಯೂರಿಚ್‌ನಲ್ಲಿರುವ ಈ ಶಿವ ದೇವಾಲಯವನ್ನು ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿದೆ.
ಜ್ಯೂರಿಚ್‌ನಲ್ಲಿರುವ ಈ ಶಿವ ದೇವಾಲಯವನ್ನು ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತದ ಜನರು, ವಿಶೇಷವಾಗಿ ಈ ಪ್ರದೇಶದ ಹಿಂದೂ ಭಕ್ತರು ಶಿವನನ್ನು ಪೂಜಿಸಲು ಇಲ್ಲಿಗೆ ಬರುತ್ತಾರೆ. ಭಾರತೀಯ ಹಬ್ಬಗಳನ್ನು ಆಚರಿಸಲು ಹಿಂದೂ ಸಮುದಾಯದ ಜನರು ಕೂಡ ಇಲ್ಲಿ ಸೇರುತ್ತಾರೆ.
ಮತ್ತಷ್ಟು ಓದಿ: ಶಿವ -ಪಾರ್ವತಿ ವಿವಾಹವಾದ ಸ್ಥಳ ಈಗ ಹೇಗಿದೆ ಗೊತ್ತಾ?
ದೇವಾಲಯದ ಇತಿಹಾಸವೇನು? ಈ ದೇವಾಲಯವನ್ನು 1990 ರ ದಶಕದಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿರುವ ತಮಿಳು ಹಿಂದೂ ಜನಸಂಖ್ಯೆಯನ್ನು ಒಟ್ಟುಗೂಡಿಸಲು ನಿರ್ಮಿಸಲಾಯಿತು. ದೇವಾಲಯದ ವಿಸ್ತೀರ್ಣ ಚಿಕ್ಕದಾದ ಕಾರಣ ಅದನ್ನು ವಿಸ್ತರಿಸಲು ನಿರ್ಧರಿಸಲಾಯಿತು. ನಿರ್ಮಾಣ ಕಾಮಗಾರಿಗೂ ಮುನ್ನ ಎರಡು ದಿನಗಳ ಕಾಲ ಭೂಮಿಪೂಜೆ ಏರ್ಪಡಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ