ಗಡಿಯಲ್ಲಿ ರೋಬೋಟ್ ಡಾಗ್, ಲೇಜರ್ ಡ್ರೋನ್ಗಳ ಬಳಸುತ್ತಿದೆ ಚೀನಾ, ಭಾರತಕ್ಕೆ ಹೊಸ ಸವಾಲು
ಅಷ್ಟಷ್ಟಾಗಿ ಚೀನಾ ಹಾಗೂ ಭಾರತದ ಸಂಬಂಧಗಳು ಚೇತರಿಸಿಕೊಳ್ಳುತ್ತಿದ್ದವು, ಎಕ್ಸೋಸ್ಕೆಲಿಟನ್‌ಗಳು, ರೋಬೋಟ್ ಡಾಗ್‌ಗಳು ಮತ್ತು ಹೈ-ಪವರ್ ಲೇಸರ್‌ಗಳನ್ನು ಹೊಂದಿರುವ ಡ್ರೋನ್‌ಗಳು ಸೇರಿದಂತೆ ಬುದ್ಧಿವಂತ ತಂತ್ರಜ್ಞಾನವನ್ನು ಭಾರತದ ಗಡಿಯ ಬಳಿ ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಚೀನಾ ಬಳಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.ನಾಲ್ಕು ವರ್ಷಗಳ ಹಿಂದೆ ಮಾರಣಾಂತಿಕ ಗಡಿ ಘರ್ಷಣೆಗಳು ಸಂಬಂಧಗಳನ್ನು ಹದಗೆಡಿಟ್ಟಿತ್ತು. ಈ ರೋಬೋಟ್ ಶ್ವಾನಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕೆಲಸ ಮಾಡುತ್ತವೆ.
ಇನ್ನೇನು ಎಲ್ಲವೂ ಶಾಂತವಾಗಿದೆ, ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಮರಳಿ ಬಂದಿದೆ, ಭಾರತಕ್ಕೆ ಎಲ್ಲಾ ರೀತಿಯ ನೆರವು ಸಿಗುತ್ತದೆ ಎಂದು ನಿಟ್ಟುಸಿರುವ ಬಿಡುವಾಗ ಹೊಸ ತಲೆನೋವು ಶುರುವಾಗಿದೆ. ಎಕ್ಸೋಸ್ಕೆಲಿಟನ್‌ಗಳು, ರೋಬೋಟ್ ಡಾಗ್‌ಗಳು ಮತ್ತು ಹೈ-ಪವರ್ ಲೇಸರ್‌ಗಳನ್ನು ಹೊಂದಿರುವ ಡ್ರೋನ್‌ಗಳು ಸೇರಿದಂತೆ ಬುದ್ಧಿವಂತ ತಂತ್ರಜ್ಞಾನವನ್ನು ಭಾರತದ ಗಡಿಯ ಬಳಿ ಪೀಪಲ್ಸ್ ಲಿಬರೇಶನ್ ಆರ್ಮಿ ಆಫ್ ಚೀನಾ ಬಳಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾತುಕತೆ ಮತ್ತು ಸಂವಹನದ ಮೂಲಕ ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು ಮತ್ತು ಪ್ರಾಮಾಣಿಕತೆ ಮತ್ತು ಸಮಗ್ರತೆಯೊಂದಿಗೆ ಭಿನ್ನಾಭಿಪ್ರಾಯಗಳನ್ನು ನಿರ್ವಹಿಸಲು ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಗಡಿ ಸಮಸ್ಯೆಗಳ ಕುರಿತು ಈ ವಾರ ನಡೆಯಲಿರುವ ಮಾತುಕತೆಗಳ ಕುರಿತು ಕೇಳಲಾದ ಪ್ರಶ್ನೆಗೆ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಈ ಹೇಳಿಕೆ ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮಾರಣಾಂತಿಕ ಗಡಿ ಘರ್ಷಣೆಗಳು ಸಂಬಂಧಗಳನ್ನು ಹದಗೆಡಿಟ್ಟಿತ್ತು. ಈ ರೋಬೋಟ್ ಶ್ವಾನಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕೆಲಸ ಮಾಡುತ್ತವೆ.
ಮತ್ತಷ್ಟು ಓದಿ: ಗಡಿಯಲ್ಲಿ ಚೀನಾ ಮತ್ತೆ ಕಿರಿಕ್; ಲಡಾಖ್ನಲ್ಲಿ 2 ಕೌಂಟಿಗಳ ರಚನೆಗೆ ಭಾರತ ವಿರೋಧ
ನೀವು ರಿಮೋಟ್ ಮತ್ತು ನಿಮ್ಮ ಮೊಬೈಲ್ ಫೋನ್ ಮೂಲಕ ಇದನ್ನು ನಿರ್ವಹಿಸಬಹುದು. ಈ ಹಿಂದೆ ಅಮೆರಿಕ ಮಿಲಿಟರಿ ತರಬೇತಿಯಲ್ಲಿ ರೋಬೋಟ್ ನಾಯಿಗಳನ್ನು ಬಳಸಿತ್ತು. ಎಂ72 ಲೈಟ್ ಆ್ಯಂಟಿ-ಟ್ಯಾಂಕ್ ವೆಪನ್ ಲಾಂಚರ್ ಅನ್ನು ರೋಬೋಟ್ ನಾಯಿಯ ಹಿಂಭಾಗಕ್ಕೆ ಕಟ್ಟಿ ಅಮೆರಿಕ ಪರೀಕ್ಷೆ ನಡೆಸಿತ್ತು.
ಚೀನಾ ಬಹಳ ಸಮಯದಿಂದ ರೋಬೋಟ್ ನಾಯಿಗಳ ಮೇಲೆ ಕೆಲಸ ಮಾಡುತ್ತಿದೆ. ಅನೇಕ ಕಂಪನಿಗಳು ಈ ರೋಬೋಟ್ ನಾಯಿಗಳನ್ನು ತಯಾರಿಸುತ್ತವೆ, ಇಲ್ಲಿಯವರೆಗೆ ಈ ನಾಯಿಗಳನ್ನು ಮನೆಯಲ್ಲಿ ಆಟಿಕೆಗಳಾಗಿ ಪರಿಚಯಿಸಲಾಯಿತು. ಈಗ ಚೀನಾ ಅಥವಾ ಅಮೆರಿಕ ಅವರನ್ನು ಮಿಲಿಟರಿ ತರಬೇತಿಯಲ್ಲಿ ಬಳಸುವುದು ಎಚ್ಚರಿಕೆಯ ಗಂಟೆಯಾಗಿದೆ.
ಚೀನಾದ ರೋಬೋಟ್ ನಾಯಿಗೆ 7.62 ಎಂಎಂ ಮೆಷಿನ್ ಗನ್ ಅಳವಡಿಸಲಾಗಿದೆ. ಇದು ಅತ್ಯಾಧುನಿಕ ಮೆಷಿನ್ ಗನ್ ಆಗಿದ್ದು, ಒಂದು ನಿಮಿಷದಲ್ಲಿ 750 ಸುತ್ತು ಗುಂಡು ಹಾರಿಸಬಲ್ಲದು. ಈ ರೋಬೋಟ್ ನಾಯಿ 328 ಅಡಿಗಳವರೆಗೆ ಹೊಡೆಯಬಲ್ಲದು. ಮಾಹಿತಿಯ ಪ್ರಕಾರ, ಚೀನಾ ಈ ಹಿಂದೆಯೂ ರೋಬೋಟ್ ನಾಯಿಗಳನ್ನು ತಯಾರಿಸಿದೆ.
ಇತ್ತೀಚಿಗೆ ಗುಂಡು ಹಾರಿಸಿದ ರೋಬೋಟ್ ಶ್ವಾನದ ಮೇಲೆ, ಇದು ಚೀನಾದ ಹೊಸ ಪ್ರಚಾರ ಎಂದು ತಜ್ಞರು ಹೇಳುತ್ತಾರೆ. ಈ ರೋಬೋಟ್ ನಾಯಿ ಚೀನಾ ಸೇನೆಯೊಂದಿಗೆ ಯುದ್ಧ ತರಬೇತಿ ಪಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ