ಗ್ರೇಟರ್ ಟೊರಾಂಟೋ: ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಯನ್ನು ಕೆನಡಾದ ವಿನಂತಿ ಮೇರೆಗೆ ಇತ್ತೀಚಿಗೆ ಪೂರೈಕೆ ಮಾಡಲಾಗಿತ್ತು. ಇದರಿಂದ ಖುಷಿಗೊಂಡಿರುವ ಕೆನಡಾ ಆಡಳಿತ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದೆ. ಇಷ್ಟೇ ಅಲ್ಲದೇ ಧನ್ಯವಾದ ತಿಳಿಸಲು ಗ್ರೇಟರ್ ಟೊರಾಂಟೊ ನಗರದ ಹೆದ್ದಾರಿಗಳಲ್ಲಿ ಬೃಹತ್ ಜಾಹೀರಾತು ಫಲಕಗಳನ್ನು ಅಳವಡಿಸಿ ತನ್ನ ಕೃತಜ್ಞತೆಗಳು ಅರ್ಪಿಸಿದೆ.
ಹಿಂದಿನ ವಾರ ಭಾರತದಲ್ಲೇ ತಯಾರಿಸಿದ ಕೋವಿಶೀಲ್ಡ್ ಕೊರೊನಾ ಲಸಿಕೆಯ 5ಲಕ್ಷ ಘಟಕಗಳನ್ನು ಕೆನಡಾಕ್ಕೆ ಕಳುಹಿಸಿಕೊಟ್ಟಿತ್ತು ಭಾರತ. ಅಲ್ಲದೇ ಈಗಾಗಲೇ 50 ದೇಶಗಳಿಗೆ ಕೊರೊನಾ ಲಸಿಕೆ ನೀಡಿರುವುದಾಗಿ ಇತ್ತೀಚಿಗೆ ನಡೆದಿದ್ದ ವರ್ಚುವಲ್ ಸಮ್ಮೇಳನವೊದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದರು. ಅಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ದೇಶಗಳಿಗೆ ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಯನ್ನು ಕಳುಹಿಸಲು ಚಿಂತನೆ ನಡೆಸಿರುವುದಾಗಿ ಸಹ ಪ್ರಧಾನಿ ತಿಳಿಸಿದ್ದರು. ಭಾರತ ಕೈಗೊಳ್ಳುತ್ತಿರುವ ಈ ಮಾನವೀಯ ಕ್ರಮಕ್ಕೆ ಕೊರೊನಾ ಲಸಿಕೆ ಪಡೆದ ದೇಶಗಳಷ್ಟೇ ಅಲ್ಲದೇ, ವಿಶ್ವ ಆರೋಗ್ಯ ಸಂಸ್ಥೆ ಸಹ ಶ್ಲಾಘನೆ ವ್ಯಕ್ತಪಡಿಸಿತ್ತು.
Billboards come up in Greater Toronto area thanking PM Narendra Modi for providing COVID-19 vaccines to Canada pic.twitter.com/0AaQysm6O1
— ANI (@ANI) March 11, 2021
ಪಾಕಿಸ್ತಾನಕ್ಕೂ ಲಸಿಕೆ ನೀಡಿದೆ ಭಾರತ
ಭಾರತದಲ್ಲಿ ತಯಾರಿಸಿದ ಕೊರೊನಾ ಲಸಿಕೆಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿವೆ. ಬೇರೆ ಬೇರೆ ದೇಶಗಳಿಗೆ ಕೊವಿಡ್ 19 ಲಸಿಕೆ ವಿತರಿಸಿದ್ದ ಭಾರತ ತನ್ನ ನೆರೆ ರಾಷ್ಟ್ರ ಪಾಕಿಸ್ತಾನಕ್ಕೂ ಲಸಿಕೆ ಪೂರೈಸಿತ್ತು. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಿರುವ ಭಾರತ, ಗ್ಲೋಬಲ್ ಅಲೆಯನ್ಸ್ ಫಾರ್ ವ್ಯಾಕ್ಸಿನ್ ಇಮ್ಯೂನೈಜೇಶನ್ (GAVI) ಅಡಿ ಲಸಿಕೆ ನೀಡಿತ್ತು
ಈ ಮೂಲಕ ಪಾಕಿಸ್ತಾನಕ್ಕೆ ಮೇಡ್ ಇನ್ ಇಂಡಿಯಾ ಲಸಿಕೆ ತಲುಪಿದ್ದು, ಅಲ್ಲಿನ ಪ್ರಜೆಗಳಿಗೆ ಕೊರೊನಾ ಲಸಿಕೆ ವಿತರಿಸುವ ಕಾರ್ಯವನ್ನು ಪಾಕಿಸ್ತಾನ ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಭಾರತದಲ್ಲಿ ಈಗಾಗಲೇ ಮತ್ತೊಂದು ಹಂತದ ಲಸಿಕೆ ಪೂರೈಕೆ ಆರಂಭಿಸಿರುವ ಭಾರತ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 45 ವರ್ಷ ಮೇಲ್ಪಟ್ಟು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲು ಸಜ್ಜಾಗಿದೆ. ಇದೆಲ್ಲದರ ಜೊತೆಜೊತೆಗೆ ಹಲವು ದೇಶಗಳಿಗೆ ಲಸಿಕೆ ಪೂರೈಸುತ್ತಿರುವುದರಿಂದ ಭಾರತದ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೈಕ್ರೋಸಾಫ್ಟ್ ಕಂಪೆನಿಯ ಮಾಲೀಕ ಬಿಲ್ ಗೇಟ್ಸ್ ಸಹ ಭಾರತದ ಕೊರೊನಾ ಲಸಿಕೆ ದಾನದ ಕ್ರಮಗಳಿಗೆ ಈಗಾಗಲೇ ಅಪಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತ ಮಾನವೀಯ ಕ್ರಮಗಳ ಮೂಲಕ ವಿಶ್ವ ಸೋದರತ್ವವನ್ನು ಎತ್ತಿಹಿಡಿಯುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ 51 ದೇಶಗಳಿಗೆ ಭಾರತ ದೇಶದಲ್ಲಿ ತಯಾರಾದ ಕೊರೊನಾ ಲಸಿಕೆ ಒದಗಿಸಿದೆ. ಇದು ವ್ಯಾಕ್ಸಿನ್ ಮೈತ್ರಿಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
51 countries and counting have received India’s vaccines!#VaccineMaitri pic.twitter.com/GaVMcO6HI1
— Vinod Krishnamurthy (@vinodkbjp) March 11, 2021
ಇದನ್ನೂ ಓದಿ: ಭಾರತದಲ್ಲಿ ಕೊರೊನಾದಿಂದ ಸಾವು ಸಂಭವಿಸಿ ಭರ್ತಿ ಒಂದು ವರ್ಷ, ಸಾವಿಗೆ ನಾಂದಿ ಹಾಡಿದ್ದೇ ಕರ್ನಾಟಕ
ಬಾಲಿವುಡ್ ನಟ ರಣಬೀರ್ ಕಪೂರ್ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್ನಲ್ಲಿ ಇದ್ದಾರೆ ಎಂದ ನೀತು ಕಪೂರ್
Published On - 12:22 pm, Thu, 11 March 21