ಭಾರತದೊಂದಿಗಿನ ಉದ್ವಿಗ್ನತೆ ನಡುವೆ ಪಾಕ್​ನ ಲಾಹೋರ್​ನಲ್ಲಿ ಭಾರಿ ಸ್ಫೋಟ, ವಿಮಾನ ನಿಲ್ದಾಣ ಬಂದ್

ಭಾರತದೊಂದಿಗಿನ ಉದ್ವಿಗ್ನತೆ ನಡುವೆ ಪಾಕಿಸ್ತಾನದ ಲಾಹೋರ್​ನಲ್ಲಿ ಇಂದು ಸ್ಫೋಟದ ಶಬ್ದ ಕೇಳಿಬಂದಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿದ ವರದಿಗಳಿವೆ. ಸ್ಫೋಟದ ಸದ್ದು ದೂರದವರೆಗೂ ಕೇಳಿಸುತ್ತಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಭೂ ವರದಿ ಮತ್ತು ನೆಲದ ಮೇಲಿನ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸ್ಫೋಟಗಳಿಂದಾಗಿ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದೆ. ಲಾಹೋರ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ಭಾರತದೊಂದಿಗಿನ ಉದ್ವಿಗ್ನತೆ ನಡುವೆ ಪಾಕ್​ನ ಲಾಹೋರ್​ನಲ್ಲಿ ಭಾರಿ ಸ್ಫೋಟ, ವಿಮಾನ ನಿಲ್ದಾಣ ಬಂದ್
ಸ್ಫೋಟ-ಸಾಂದರ್ಭಿಕ ಚಿತ್ರ
Image Credit source: orissa post

Updated on: May 08, 2025 | 8:53 AM

ಲಾಹೋರ್, ಮೇ 08: ಭಾರತದೊಂದಿಗಿನ ಉದ್ವಿಗ್ನತೆ ನಡುವೆ ಪಾಕಿಸ್ತಾನ(Pakistan) ದ ಲಾಹೋರ್​ನಲ್ಲಿ ಇಂದು ಸ್ಫೋಟದ ಶಬ್ದ ಕೇಳಿಬಂದಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿದ ವರದಿಗಳಿವೆ. ಸ್ಫೋಟದ ಸದ್ದು ದೂರದವರೆಗೂ ಕೇಳಿಸುತ್ತಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಭೂ ವರದಿ ಮತ್ತು ನೆಲದ ಮೇಲಿನ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸ್ಫೋಟಗಳಿಂದಾಗಿ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿದೆ. ಲಾಹೋರ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ಬುಧವಾರ ಬೆಳಗಿನ ಜಾವ ಪಾಕಿಸ್ತಾನ ವಿರುದ್ಧ ಭಾರತ ಬಲವಾದ ಹೊಡೆತ ನೀಡಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಜಂಟಿ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಾರತ ಈ ಅಭಿಯಾನಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿತು.

ಪತ್ರಿಕಾಗೋಷ್ಠಿಯಲ್ಲಿ ಭಾರತದ ಕ್ರಮದ ಬಗ್ಗೆ ಸೇನೆಯು ಸಂಪೂರ್ಣ ಮಾಹಿತಿಯನ್ನು ನೀಡಿತು. ಕಾರ್ಯಾಚರಣೆಯು ಬೆಳಗಿನ ಜಾವ 1:05 ಕ್ಕೆ ಪ್ರಾರಂಭವಾಗಿ 1:30 ಕ್ಕೆ ಕೊನೆಗೊಂಡಿತು ಎಂದು ಹೇಳಲಾಯಿತು. 25 ನಿಮಿಷಗಳಲ್ಲಿ 21 ಗುರಿಗಳ ಮೇಲೆ ದಾಳಿ ಮಾಡಲಾಯಿತು.

ಇದನ್ನೂ ಓದಿ
ಯುದ್ಧದ ಉದ್ವಿಗ್ನತೆ: ದೇಶಾದ್ಯಂತ ಮಾಕ್​ ಡ್ರಿಲ್​ ದರ್ಶನ ಹೇಗಿತ್ತು?
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ಪಾಕಿಸ್ತಾನದೊಳಗೆ ನುಗ್ಗಿ ಹೊಡೆದ ಭಾರತ, ಆಪರೇಷನ್ ಸಿಂಧೂರಕ್ಕೆ ಜಾಗತಿಕ ಬೆಂಬಲ
ಭಾರತ ನಡೆಸಿದ ದಾಳಿಯಲ್ಲಿ ಉಗ್ರ ಮಸೂದ್ ಅಜರ್, ಹಫೀಜ್ ಸಯೀದ್ ಸಾವು?

ಮತ್ತಷ್ಟು ಓದಿ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ: ವಿಡಿಯೋ ನೋಡಿ

ಗಡಿಯುದ್ದಕ್ಕೂ ನಿರಂತರ ಗುಂಡಿನ ಚಕಮಕಿ ನಡೆಯುತ್ತಿರುವುದರಿಂದ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಕಥುವಾ ಹಾಗೂ ಜಮ್ಮುವಿನ ಆರ್‌ಎಸ್ ಪುರ ಪ್ರದೇಶದಲ್ಲಿ ಮುಂದಿನ 72 ಗಂಟೆಗಳ ಕಾಲ ಎಚ್ಚರಿಕೆ ನೀಡಲಾಗಿದೆ.

ಅಮೃತಸರ ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿದೆ
ಪಾಕಿಸ್ತಾನದ ಗಡಿಯಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಮೃತಸರ ವಿಮಾನ ನಿಲ್ದಾಣವನ್ನು ಸಹ ಮುಚ್ಚಲಾಗಿದೆ. “ಎಲ್ಲಾ ವಿಮಾನಗಳನ್ನು ರದ್ದುಗೊಳಿಸಬೇಕಾಗುತ್ತದೆ ಮತ್ತು ವಿಮಾನ ನಿಲ್ದಾಣವನ್ನು ಸಹ ಮುಚ್ಚಬೇಕಾಗುತ್ತದೆ ಎಂಬ ಮಾಹಿತಿ ನಮಗೆ ಬಂದಿದೆ. ಆದ್ದರಿಂದ ಇಡೀ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ಬಲೂಚ್ ದಾಳಿಯಲ್ಲಿ 12 ಪಾಕಿಸ್ತಾನಿ ಸೈನಿಕರು ಬಲಿ
ಭಾರತದ ಆಪರೇಷನ್ ಸಿಂಧೂರ್ ಜೊತೆಗೆ, 12 ಪಾಕಿಸ್ತಾನಿ ಸೇನಾ ಸೈನಿಕರ ಸಾವಿನ ಸುದ್ದಿಯೂ ಇದೆ. ಪಾಕಿಸ್ತಾನಿ ಸೇನಾ ವಾಹನದ ಮೇಲೆ ಬಿಎಲ್‌ಎ ದಾಳಿ ಮಾಡಿತು. ಐಇಡಿ ಸ್ಫೋಟದಿಂದ ಪಾಕ್ ಸೇನಾ ವಾಹನ ಸ್ಫೋಟಗೊಂಡಿದೆ. ಈ ಘಟನೆ ಬಲೂಚಿಸ್ತಾನದ ಬೋಲಾನ್‌ನಲ್ಲಿ ನಡೆದಿದ್ದು, ಇದರಲ್ಲಿ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

ಎರಡೂ ದೇಶಗಳು ಸಂಯಮ ಕಾಯ್ದುಕೊಳ್ಳುವಂತೆ ಉಕ್ರೇನ್ ಸೂಚನೆ
ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ, ಉಕ್ರೇನ್‌ನ ಹೇಳಿಕೆ ಈಗ ಬೆಳಕಿಗೆ ಬಂದಿದೆ. ಉಕ್ರೇನ್ ಎರಡೂ ದೇಶಗಳನ್ನು ಸಂಯಮದಿಂದ ವರ್ತಿಸುವಂತೆ ಕೇಳಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಕರ್ನಾ ಪ್ರದೇಶದಲ್ಲಿ ಪಾಕಿಸ್ತಾನ ಗಡಿಯುದ್ದಕ್ಕೂ ಗುಂಡು ಹಾರಿಸಿದೆ. ‘ಆಪರೇಷನ್ ಸಿಂಧೂರ್’ ನಂತರ, ಪಾಕಿಸ್ತಾನವು ಎಲ್‌ಒಸಿ ಮೇಲೆ ಸತತ ಎರಡನೇ ದಿನ ಗುಂಡಿನ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಕುರಿತು ಸರ್ಕಾರ ಇಂದು ಸರ್ವಪಕ್ಷ ಸಭೆ ಕರೆಯಲಿದೆ.

ಭಾರತದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಇಸ್ಲಾಮಾಬಾದ್‌ನಲ್ಲಿರುವ ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ತಿಳಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳ ಒಳಗೆ ಹೋಗಿ ಎಲ್ಲಾ ದೀಪಗಳನ್ನು ಆಫ್ ಮಾಡುವಂತೆ ಸೂಚನೆ ನೀಡಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:53 am, Thu, 8 May 25