Boat Capsizes in Pakistan: ಪಾಕಿಸ್ತಾನದಲ್ಲಿ ದೋಣಿ ಮುಳುಗಿ 10 ಮಕ್ಕಳು ಸಾವು

|

Updated on: Jan 30, 2023 | 11:13 AM

ಜನವರಿ 29 ರ ಭಾನುವಾರದಂದು ವಾಯವ್ಯ ಪಾಕಿಸ್ತಾನದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಿ ಕನಿಷ್ಠ 10 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Boat Capsizes in Pakistan: ಪಾಕಿಸ್ತಾನದಲ್ಲಿ ದೋಣಿ ಮುಳುಗಿ 10 ಮಕ್ಕಳು ಸಾವು
ಸಾಂದರ್ಭಿಕ ಚಿತ್ರ
Follow us on

ಕೋಹತ್‌: ಜನವರಿ 29 ರ ಭಾನುವಾರದಂದು ವಾಯವ್ಯ ಪಾಕಿಸ್ತಾನದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಿ ಕನಿಷ್ಠ 10 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಸರೋವರದ ದಡದ ಬಳಿ ಮಕ್ಕಳ ಕೂಗು ಕೇಳಿ ತಕ್ಷಣ ಜನರು ಬಂದಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿತ್ತು. ನೀರಿನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ ನಂತರ ತುರ್ತು ಸೇವೆಗಳಯ ಸ್ಥಳಕ್ಕೆ ಧಾವಿಸಿದೆ.

ಕೋಹತ್‌ನ ಜಿಲ್ಲಾಧಿಕಾರಿ ಮಹಮೂದ್ ಅಸ್ಲಾಂ ಮಾತನಾಡಿ, ಸ್ಥಳೀಯ ಧಾರ್ಮಿಕ ಶಾಲೆಯ ಸುಮಾರು 50 ವಿದ್ಯಾರ್ಥಿಗಳು ತಾಂಡಾ ಸರೋವರದ ಬಳಿ ಪಿಕ್‌ನಿಕ್‌ಗಾಗಿ ಹೋಗಿದ್ದರು. ಇಪ್ಪತ್ತೈದು ಜನರು ನೀರಿನ ಮೇಲೆಕ್ಕೆ ತರಲಾಗಿತ್ತು. ಮನರಂಜನಾ ಪ್ರವಾಸಗಳಿಗಾಗಿ ಈ ಪ್ರದೇಶವನ್ನು ತೆರೆಯಾಲಾಗಿತ್ತು. ಇದೀಗ ಮಕ್ಕಳು ಪ್ರವಾಸಕ್ಕೆ ಎಂದು ಬಂದಿದ್ದರು, ಆದರೆ ಬೋಟ್‌ ನಿಯಂತ್ರಣ ತಪ್ಪಿ ಮುಳುಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಮಿಷನರ್ ರಾಯಿಟರ್ಸ್ ಜೊತೆ ಹಂಚಿಕೊಂಡ ಮಾಹಿತಿ ಪ್ರಕಾರ ಸಾವನ್ನಪ್ಪಿದ ವಿದ್ಯಾರ್ಥಿಗಳು ಏಳು ಮತ್ತು 12 ವರ್ಷದೊಳಗಿನ ವಯಸ್ಸಿನವರು. ಪಾಕಿಸ್ತಾನದ ಸೇನೆಗಳು ರಕ್ಷಣಾ ಕಾರ್ಯಗಳನ್ನು ಮಾಡಿದ್ದು. ಇದೀಗ ಅನೇಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನು ಓದಿ:Pakistan Economic Crisis: ದೇಶದ ಏಳಿಗೆಗೆ, ಈಗಿನ ಪರಿಸ್ಥಿತಿಗೆ ಅಲ್ಲಾಹನೇ ಹೊಣೆ: ಪಾಕಿಸ್ತಾನದ ಹಣಕಾಸು ಸಚಿವ

ಅಪಘಾತ ಸಂಭವಿಸಿದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳ ಪ್ರಕಾರ, ಸುಮಾರು ಎಂಟು ವಿದ್ಯಾರ್ಥಿಗಳು ಇನ್ನೂ ಪತ್ತೆಯಾಗಿಲ್ಲ ಮತ್ತು ಏಳು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:13 am, Mon, 30 January 23