ಹವ್ಯಾಸಿ ಬಾಡಿಬಿಲ್ಡರ್ನೊಬ್ಬ ತಾನು ತಿನ್ನುತ್ತಿದ್ದ ಐಸ್ ಕ್ರೀಮನ್ನು ತನ್ನತ್ತೆಗೆ ಒಮ್ಮೆ ನೆಕ್ಕಲು ಕೊಡದಿದ್ದುದಕ್ಕೆ ಸ್ವಾರ್ಥಿ, ಹೊಟ್ಟೆಬಾಕ ಅನಿಸಿಕೊಂಡ!
ಅವನು ತಮ್ಮ ಪಾಲಿನ ಐಸ್ ಕ್ರೀಮನ್ನು ಅರ್ಧದಷ್ಟು ತಿಂದಿದ್ದಾಗ ತನ್ನ ಪಾಲಿನದನ್ನು ಅದಗಾಲೇ ತಿಂದು ಮುಗಿಸಿದ್ದ ಅತ್ತೆ ಅವನು ತಿನ್ನುತ್ತಿದ್ದ ಐಸ್ ಕ್ರೀಮ್ ನತ್ತ ಆಸೆಯಿಂದ ನೋಡುತ್ತಾ ಒಮ್ಮೆ ನೆಕ್ಕಲು ಕೊಡು ಅಂತ ಕೇಳಿದ್ದಾಳೆ. ಅದಕ್ಕೆ ಅವನು ನಯವಾಗೇ ತಿರಸ್ಕರಿಸಿದ್ದಾನೆ.
ಒಬ್ಬ ಹವ್ಯಾಸಿ ಬಾಡಿ ಬಿಲ್ಡರ್ (body builder) ಮತ್ತವನ ಅತ್ತೆಯ ಬಗ್ಗೆ ಸ್ವಾರಸ್ಯಕರ ಪ್ರಸಂಗವೊಂದನ್ನು ನಿಮಗೆ ಹೇಳಬೇಕಿದೆ ಮಾರಾಯ್ರೇ. ಏನಾಗಿದೆ ಗೊತ್ತಾ? ಬಾಡಿ ಬಿಲ್ಟರ್ ತಾನು ತಿನ್ನುತ್ತಿದ್ದ ಐಸ್ ಕ್ರೀಮಿನ (ice cream) ಸ್ಟಿಕ್ಕನ್ನು ಅವನ ಅತ್ತೆ ಒಮ್ಮೆ ನೆಕ್ಕುತ್ತೇನೆಂದು ಯಾಚಿಸಿದಾದ ಖಡಾಖಂಡಿತವಾಗಿ ನೋ ಅಂತ ತಿರಸ್ಕರಿಸಿ ಆಕೆಯ ಕೋಪಕ್ಕೆ ತುತ್ತಾಗಿದ್ದಾನೆ. ವಾರಾಂತ್ಯದಲ್ಲಿ ಮನೆಯಲ್ಲಿ ಕುಳಿತು ಸಿನಿಮಾ (movie) ನೋಡುವಾಗ ತಿನ್ನಲು ಅವನು ತನಗೊಂದು, ಹೆಂಡತಿಗೊಂದು ಮತ್ತು ಅತ್ತೆಗೊಂದು ಐಸ್ ಕ್ರೀಮ್ ತಂದಿದ್ದಾನೆ.
ಆದರೆ, ಅವನು ತಮ್ಮ ಪಾಲಿನ ಐಸ್ ಕ್ರೀಮನ್ನು ಅರ್ಧದಷ್ಟು ತಿಂದಿದ್ದಾಗ ತನ್ನ ಪಾಲಿನದನ್ನು ಅದಗಾಲೇ ತಿಂದು ಮುಗಿಸಿದ್ದ ಅತ್ತೆ ಅವನು ತಿನ್ನುತ್ತಿದ್ದ ಐಸ್ ಕ್ರೀಮ್ ನತ್ತ ಆಸೆಯಿಂದ ನೋಡುತ್ತಾ ಒಮ್ಮೆ ನೆಕ್ಕಲು ಕೊಡು ಅಂತ ಕೇಳಿದ್ದಾಳೆ. ಅದಕ್ಕೆ ಅವನು ನಯವಾಗೇ ತಿರಸ್ಕರಿಸಿದ್ದಾನೆ. ಅದೇ ಫ್ಲೇವರ್ ನ ಸಾಕಷ್ಟು ಐಸ್ ಕ್ರೀಮ್ ಫ್ರೀಜರ್ ನಲ್ಲಿದೆ ಅಂತ ಆಕೆಗೆ ಹೇಳಿದ್ದಾನೆ. ಆದರೆ, ಆಕೆ ನೀನು ತಿನ್ನುತ್ತಿರುವುದೇ ಬೇಕು ಅಂತ ದುಂಬಾಲು ಬಿದ್ದಿದ್ದಾಳೆ. ಪೂರ್ತಿ ಐಸ್ ಕ್ರೀಮ್ ಏನೂ ಬೇಡ, ಅದರ ರುಚಿ ನೋಡಲು ಬರೀ ಒಮ್ಮೆ ಮಾತ್ರ ನೆಕ್ತೀನಿ ಅಂತ ಹೇಳಿದ್ದಾಳೆ. ಅವನು ಕೊಟ್ಟಿಲ್ಲ.
ರೆಡ್ಡಿಟ್ ಸಾಮಾಜಕ ಜಾಲತಾಣದಲ್ಲಿ u/DenierOfIceCream, ಹೆಸರಿನಿಂದ ಖಾತೆ ಹೊಂದಿರುವ ಮತ್ತು ಅತ್ತೆಯ ವರ್ತನೆಯಿಂದ ಬೇಸತ್ತಿರುವ ಅಳಿಮಯ್ಯ ಹೀಗೆ ಬರೆದುಕೊಂಡಿದ್ದಾನೆ: ನೀವು ನನ್ನ ಐಸ್ ಕ್ರೀಮ್ ನೆಕ್ಕುವುದು ಸರ್ವಥಾ ನನಗಿಷ್ಟ ಇಲ್ಲ ಅಂತ ನಾನು ಅವರಿಗೆ ಮತ್ತೊಮ್ಮೆ ನಯಾವಾಗೇ ನಿರಾಕರಿಸಿದೆ. ಆದರೆ ಅವರು ಒಂದೇ ಸಮ ಪೀಡಿಸತೊಡಗಿದ್ದರಿಂದ ಅದನ್ನು ಅವರಿಗೆ ಕೊಟ್ಟು ಫ್ರೀಜರ್ ನಲ್ಲಿದ್ದ ಮತ್ತೊಂದನ್ನು ಎತ್ತಿಕೊಳ್ಳಲು ಮುಂದಾದೆ,’ ಅಂತ ಅವನು ಬರೆದಿದ್ದಾನೆ.
‘ಆದರೆ ನನ್ನ ಪತ್ನಿಯ ತಾಯಿ ನಾನು ಅದನ್ನೆಲ್ಲ ಮಾಡುವ ಅವಶ್ಯಕತೆಯಿಲ್ಲ. ನಾನೊಮ್ಮೆ ಟ್ರೈ ಮಾಡಿಕೊಡ್ತೀನಿ ಅಷ್ಟೇ, ಅಮೇಲೆ ನೀನು ತಿನ್ನುವುದನ್ನು ಮುಂದುವರಿಸಬಹುದು ಅಂತ ಹೇಳಿದಾಗ ನಾನು ನೋ ಥ್ಯಾಂಕ್ಸ್ ಎಂದೆ. ನಾನು ಹಾಗೆ ಹೇಳಿದ ಕೂಡಲೇ ನನ್ನತ್ತೆ ಮತ್ತು ನನ್ನ ಹೆಂಡತಿ ಜೊತೆಗೂಡಿ ನನ್ನನ್ನು ಹೊಟ್ಟೆಬಾಕ, ಸ್ವಾರ್ಥಿ ಅಂತ ಮೂದಲಿಸತೊಡಗಿದರು.’
ನನ್ನ ಸ್ಥಳದಲ್ಲಿ ಬೇರೆ ಯಾರೇ ಇದ್ದರೂ ನಾನು ಮಾಡಿದ್ದನ್ನೇ ಮಾಡುತ್ತಿದ್ದರು. ಅದರೆ ನನ್ನ ಹೆಂಡತಿ ಮತ್ತು ಅತ್ತೆಯ ವರ್ತನೆ ಹೇಗಿತ್ತೆಂದರೆ, ಒಂದು ಐಸ್ ಕ್ರೀಮ್ ನ ಸ್ಟಿಕ್ಕನ್ನು ಅತ್ತೆಯೊಂದಿಗೆ ಶೇರ್ ಮಾಡಿಕೊಳ್ಳದಿದ್ದುದಕ್ಕೆ ನಾನು ನಿಜವಾಗಿಯೂ ಸ್ವಾರ್ಥಿ ಮತ್ತು ಹೊಟ್ಟೆಬಾಕನೇ ಅಂತ ನನ್ನನ್ನು ನಾನು ಸೀರಿಯಸ್ಸಾಗಿ ಪ್ರಶ್ನಿಸಿಕೊಳ್ಳತೊಡಗಿದೆ!’
ಅತ್ತೆ ನೆಕ್ಕಿ ವಾಪಸ್ಸು ಕೊಡುವ ಐಸ್ ಕ್ರೀಮನ್ನು ತಿನ್ನಲು ಅಳಿಮಯ್ಯನಲ್ಲಿ ಹೇವರಿಕೆ ಹುಟ್ಟುವುದಕ್ಕೆ ಮತ್ತೊಂದು ಕಾರಣವೂ ಇದೆ. ಆಕೆ ನಾಯಿಂದ ತನ್ನ ಮುಖವನ್ನೆಲ್ಲ ನೆಕ್ಕಿಸಿಕೊಳ್ಳುತ್ತಾಳಂತೆ, ಆಕೆಯ ಬಾಯೊಳಗೂ ನಾಯಿ ಬಾಯಿ ಹಾಕುತ್ತಂತೆ!!
ಪರಿಸ್ಥಿತಿ ಹೀಗಿರಬೇಕಾದರೆ ಅವನು ನಾಯಿಂದ ನೆಕ್ಕಿಸಿಕೊಳ್ಳುವ ಅತ್ತೆ ನೆಕ್ಕಿದ ಐಸ್ ಕ್ರೀಮ್ ನೆಕ್ಕುತ್ತಾನೆಯೇ?