US Winter Storm: ಅಮೆರಿಕದಲ್ಲಿ ಭೀಕರ ಹಿಮಪಾತದಿಂದ 34 ಜನ ಸಾವು; ಹಲವು ವಿಮಾನಗಳು ರದ್ದು, ವಿದ್ಯುತ್ ಇಲ್ಲದೆ ಲಕ್ಷಾಂತರ ಜನರ ಪರದಾಟ

| Updated By: ಸುಷ್ಮಾ ಚಕ್ರೆ

Updated on: Dec 26, 2022 | 9:43 AM

ಹಿಮಪಾತದಿಂದ ನ್ಯೂಯಾರ್ಕ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. 9 ರಾಜ್ಯಗಳಲ್ಲಿ 34 ಹವಾಮಾನ ಸಂಬಂಧಿತ ಸಾವುಗಳು ದೃಢೀಕರಿಸಲ್ಪಟ್ಟಿವೆ.

US Winter Storm: ಅಮೆರಿಕದಲ್ಲಿ ಭೀಕರ ಹಿಮಪಾತದಿಂದ 34 ಜನ ಸಾವು; ಹಲವು ವಿಮಾನಗಳು ರದ್ದು, ವಿದ್ಯುತ್ ಇಲ್ಲದೆ ಲಕ್ಷಾಂತರ ಜನರ ಪರದಾಟ
ಅಮೆರಿಕದಲ್ಲಿ ಹಿಮಪಾತ
Image Credit source: Reuters
Follow us on

ನ್ಯೂಯಾರ್ಕ್: ಭಾರೀ ಚಳಿಗಾಲದ ಚಂಡಮಾರುತವು (Winter Storm) ಕ್ರಿಸ್‌ಮಸ್ ದಿನದಂದು ಲಕ್ಷಾಂತರ ಅಮೆರಿಕನ್ನರಿಗೆ ಅಪಾಯ ಮತ್ತು ದುಃಖವನ್ನು ತಂದಿಟ್ಟಿದೆ. ಪೂರ್ವ ಅಮೆರಿಕದ (United States) ಕೆಲವು ಭಾಗಗಳಲ್ಲಿ ತೀವ್ರವಾದ ಹಿಮ ಮತ್ತು ಚಳಿಯಿಂದ ಕೂಡಿದೆ. ಅಮೆರಿಕದಲ್ಲಿ ಹವಾಮಾನ ಸಂಬಂಧಿತ ಸಾವಿನ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಚಳಿಗಾಲದ ಚಂಡಮಾರುತದ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, ದೇಶದಾದ್ಯಂತ 34 ಜನರನ್ನು ಬಲಿ ಪಡೆದಿದೆ. ಅಮೆರಿಕದ ಹಿಮಪಾತದಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಬಿರುಗಾಳಿಗೆ ಸಿಲುಕಿ ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ.

ನ್ಯೂಯಾರ್ಕ್‌ನ ಬಫಲೋ ಚಂಡಮಾರುತದ ದಾಳಿಗೆ ತುತ್ತಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೂ ಕೂಡ ತಡೆಯುಂಟುಮಾಡಿದೆ. ಹಿಮಪಾತದಿಂದ ನ್ಯೂಯಾರ್ಕ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಜನ ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದಿಂದ ಅಮೆರಿಕದ ಜನರು ಕಂಗಾಲಾಗಿದ್ದಾರೆ. ಅಮೆರಿಕದಾದ್ಯಂತ ಅಪಘಾತ, ಮರಗಳು ಧರೆಗುರುಳಿ, ಚಂಡಮಾರುತದಿಂದಾಗಿ 34 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: US Winter Storm: ಅಮೆರಿಕದಲ್ಲಿ ಮಾರಣಾಂತಿಕ ಶೀತಗಾಳಿ; -48 ಡಿಗ್ರಿಗೆ ಕುಸಿದ ಉಷ್ಣಾಂಶ, ವಿದ್ಯುತ್ ಕಡಿತದಿಂದ ಬದುಕು ಅಸ್ತವ್ಯಸ್ತ

ಈ ಬಗ್ಗೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೋಮವಾರದವರೆಗೆ ಮುಚ್ಚಲಾಗುವುದು ಎಂದಿದ್ದಾರೆ. 6 ನ್ಯೂ ಇಂಗ್ಲೆಂಡ್ ರಾಜ್ಯಗಳಾದ್ಯಂತ ಶನಿವಾರ 2,73,000ಕ್ಕೂ ಹೆಚ್ಚು ಗ್ರಾಹಕರು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಹಲವಾರು ಪೂರ್ವ ರಾಜ್ಯಗಳಾದ್ಯಂತ 2,00,000ಕ್ಕೂ ಹೆಚ್ಚು ಜನರು ಕ್ರಿಸ್​ಮಸ್ ದಿನ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು.

ಇದನ್ನೂ ಓದಿ: Russia Ukraine War: ಈಗ ಬರ್ತಾನೆ ಜನರಲ್ ವಿಂಟರ್; ಉಕ್ರೇನ್​ನಲ್ಲಿ ಹಿಮಪಾತ ಆರಂಭ, ಕುಸಿಯುತ್ತಿದೆ ಉಷ್ಣಾಂಶ, ಯುದ್ಧತಂತ್ರ ಬದಲಿಸಿದ ರಷ್ಯಾ

9 ರಾಜ್ಯಗಳಲ್ಲಿ 34 ಹವಾಮಾನ ಸಂಬಂಧಿತ ಸಾವುಗಳು ದೃಢೀಕರಿಸಲ್ಪಟ್ಟಿವೆ. ಕೊಲೊರಾಡೋದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರದವರೆಗೆ ಮುಚ್ಚಲ್ಪಟ್ಟಿದೆ.

ಟ್ರ್ಯಾಕಿಂಗ್ ವೆಬ್‌ಸೈಟ್ Flightaware.com ಪ್ರಕಾರ, ಕಳೆದ ದಶಕದಲ್ಲಿಯೇ ಅತ್ಯಂತ ಭೀಕರವಾದ ಚಂಡಮಾರುತದಿಂದ ಭಾನುವಾರದಂದು 2,400ಕ್ಕೂ ಹೆಚ್ಚು ಅಮೆರಿಕದ ವಿಮಾನಗಳನ್ನು ರದ್ದುಗೊಳಿಸಲಾಯಿತು. ಕೆಲವು ವಿಮಾನಗಳು ಶುಕ್ರವಾರದಿಂದಲೇ ರದ್ದುಗೊಂಡಿದ್ದವು. ಅಟ್ಲಾಂಟಾ, ಚಿಕಾಗೋ, ಡೆನ್ವರ್, ಡೆಟ್ರಾಯಿಟ್ ಮತ್ತು ನ್ಯೂಯಾರ್ಕ್ ಸೇರಿದಂತೆ ಕ್ರಿಸ್‌ಮಸ್ ದಿನ ಅನೇಕ ದೇಶಗಳ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Mon, 26 December 22