
ದರೋಡೆಕೋರರು ನಾಗರಿಕರರನ್ನು ಒತ್ತೆಯಾಳುಗಳಂತೆ ಕಂಡು ಕಾರಿನ ಹೊರಭಾಗಕ್ಕೆ ಕಟ್ಟಿಕೊಂಡು ರಸ್ತೆ ತುಂಬ ತಿರುಗಾಡಿದ್ದಾರೆ. ಘಟನೆ ಬ್ರೆಜಿಲ್ನಲ್ಲಿ ನಡೆದಿದ್ದು ದರೋಡೆಕೋರರ ಕ್ರೌರ್ಯಕ್ಕೆ 3 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಗನ್, ಬಾಂಬ್ ಮತ್ತು ಡ್ರೋನ್ಗಳೊಂದಿಗೆ ಶಸ್ತ್ರಸಜ್ಜಿತವಾದ ಸುಮಾರು 20 ದರೋಡೆಕೋರರು ಬ್ಯಾಂಕ್ ದರೋಡೆಗೆ ಮುಂದಾಗಿದ್ದಾರೆ. ಮಧ್ಯರಾತ್ರಿಯಲ್ಲಿ ಸಾವೊ ಪಾಲೊದಿಂದ 290 ಮೈಲಿ ದೂರದಲ್ಲಿರುವ ಅರಸತುಬಾ ನಗರ ಕೇಂದ್ರದಲ್ಲಿರುವ ಮೂರು ಬ್ಯಾಂಕ್ಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಸ್ಥಳೀಯ ಪೊಲೀಸ್ ಠಾಣೆಯ ಮೇಲೂ ದಾಳಿ ನಡೆಸಿದೆ. ಕಾರುಗಳಿಗೆ ಜನರನ್ನು ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದಾರೆ. ಪತ್ರಕರ್ತರಾದ ಯೂರಿ ಮ್ಯಾಕ್ರಿ ಅವರು ದೃಶ್ಯದ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಮೊದಲನೇಯ ಕಾರಿನ ಮೇಲೆ ಮಾನವರನ್ನು ಕಟ್ಟಿಹಾಕಲಾಗಿರುವ ದೃಶ್ಯವನ್ನು ನೋಡಬಹುದು.
Na fuga, os reféns foram amarrados nos veículos. Tentativa de impedir qualquer contra-ataque da polícia ao grupo. Deus guarde essas pessoas e todos de Araçatuba. Todas as agências bancárias do centro foram invadidas – informações preliminares. pic.twitter.com/lu0hBlcTCu
— Yuri Macri (@yurimacri) August 30, 2021
ಮತ್ತೋರ್ವ ಟ್ವೀಟರ್ ಬಳಕೆದಾರರು ಸಿಸಿಟಿವಿ ಫೂಟೇಜ್ಅನ್ನು ಪೋಸ್ಟ್ ಮಾಡಿದ್ದಾರೆ. ಜನರನ್ನು ಚದುರಿಸಲು ಬಾಂಬ್ ಸ್ಟೋಟಗೊಳಿಸಲಾಗಿದೆ. ಇದರ ಪರಿಣಾಮ 25 ವರ್ಷದ ಸೈಕಲ್ ಸವಾರನೊಬ್ಬ ಗಂಭೀರ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
Aflição total, meu Deus, oremos por todas essas pessoas que estão sendo feitas de reféns nesse mega assalto aqui em Araçatuba ??? #Araçatuba #OremPorAraçatuba pic.twitter.com/lBo4Ti2rk0
— thales (@thalespatrizzi) August 30, 2021
ಇದನ್ನೂ ಓದಿ:
Crime News: ಬುಡಕಟ್ಟು ವ್ಯಕ್ತಿಯನ್ನು ಲಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಜನರು; ಗಂಭೀರವಾಗಿ ಗಾಯಗೊಂಡಾತ ಸಾವು
Crime Story: ಸೆಕ್ಯುರಿಟಿ ಗಾರ್ಡ್ನ ವಿಚಿತ್ರ ಲವ್: ‘ಲೇಡಿ ಆಫ್ ಸ್ಮೆಲ್’ ಮರ್ಡರ್ ಸ್ಟೋರಿ..!
Published On - 11:07 am, Tue, 31 August 21