ಭ್ರಷ್ಟಾಚಾರದ ಹಗರಣ ಒಂದರಲ್ಲಿ ನಿಮ್ಮ ಪತ್ನಿ ಮಿಶೆಲ್ ಬೋಲ್ಸನಾರೊ ಹೆಸರು ತಳುಕು ಹಾಕಿಕೊಂಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ ಪತ್ರಕರ್ತರೊಬ್ಬನಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ‘ಗೂಸಾ ಕೊಡುವುದಾಗಿ’ ಹೇಳಿರುವ ಸ್ವಾರಸ್ಯಕರ ಪ್ರಸಂಗ ನಿನ್ನೆ ನಡೆದಿದೆ.
ಅಧ್ಯಕ್ಷ ಜೈರ್ ಬೋಲ್ಸನಾರೊರ ಹಿರಿಯ ಪುತ್ರ ಹಾಗೂ ಮಾಜಿ ಸಂಸದ ಫ್ಲಾವಿಯೋ ಬೋಲ್ಸನಾರೊರ ಆಪ್ತ ಸಹಾಯಕ ಫಾಬ್ರೀಜಿಯೋ ಕ್ವೇರೋಜ್ ಎಂಬಾತನ ಹೆಸರು ದೊಡ್ಡ ಹಗರಣವೊಂದರಲ್ಲಿ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದರು. ಈ ನಡುವೆ ಕಳೆದ ತಿಂಗಳು ಬ್ರೆಜಿಲ್ನ ಕೆಲ ಸುದ್ದಿವಾಹಿನಿಗಳು ಅಧ್ಯಕ್ಷ ಬೋಲ್ಸನಾರೊರ ಪತ್ನಿ ಮಿಶೆಲ್ರ ಬ್ಯಾಂಕ್ ಖಾತೆಗೆ ಫಾಬ್ರೀಜಿಯೋ ಸಾಕಷ್ಟು ಹಣವನ್ನು ಪಾವತಿಸಿದ್ದನು ಎಂದು ವರದಿ ಮಾಡಿದ್ದವು. ಆದ್ದರಿಂದ, ಈ ವಿಚಾರವಾಗಿ ಯಾರಾದರೂ ಪ್ರಶ್ನಿಸಿದರೆ ಅಧ್ಯಕ್ಷರಿಗೆ ಸಿಕ್ಕಾಪಟ್ಟೆ ಕೋಪಬರುತ್ತದ್ದಂತೆ!
Published On - 12:52 pm, Mon, 24 August 20