Breaking News: ದಕ್ಷಿಣ ಆಫ್ರಿಕಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟ; 10 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Dec 25, 2022 | 8:30 AM

ಬೋಕ್ಸ್‌ಬರ್ಗ್‌ನ ಟಾಂಬೊ ಮೆಮೋರಿಯಲ್ ಆಸ್ಪತ್ರೆ ಬಳಿ ಶನಿವಾರ ಎಲ್​ಪಿಜಿಯನ್ನು ಸಾಗಿಸುತ್ತಿದ್ದ ಇಂಧನ ಟ್ಯಾಂಕರ್ ಸ್ಫೋಟಗೊಂಡ ನಂತರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ.

Breaking News: ದಕ್ಷಿಣ ಆಫ್ರಿಕಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟ; 10 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ
ದಕ್ಷಿಣ ಆಫ್ರಿಕಾದಲ್ಲಿ ಅನಿಲ ಟ್ಯಾಂಕ್ ಸ್ಫೋಟ
Image Credit source: India Today
Follow us on

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನ ಬೋಕ್ಸ್‌ಬರ್ಗ್‌ನಲ್ಲಿ (Johannesburg) ಬೃಹತ್ ಇಂಧನದ ಟ್ಯಾಂಕರ್ (Fuel Tanker Blast) ಸ್ಫೋಟಗೊಂಡ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಎಲ್‌ಪಿಜಿಯನ್ನು ಸಾಗಿಸುತ್ತಿದ್ದ ಟ್ಯಾಂಕರ್ ಶನಿವಾರ ಬೆಳಿಗ್ಗೆ ಆಸ್ಪತ್ರೆ ಮತ್ತು ಮನೆಗಳ ಸಮೀಪವಿರುವ ಸೇತುವೆಯೊಂದರ ಕೆಳಗೆ ಸ್ಫೋಟಗೊಂಡಿದೆ.

ಬೋಕ್ಸ್‌ಬರ್ಗ್‌ನ ಟಾಂಬೊ ಮೆಮೋರಿಯಲ್ ಆಸ್ಪತ್ರೆ ಬಳಿ ಶನಿವಾರ ಎಲ್​ಪಿಜಿಯನ್ನು ಸಾಗಿಸುತ್ತಿದ್ದ ಇಂಧನ ಟ್ಯಾಂಕರ್ ಸ್ಫೋಟಗೊಂಡ ನಂತರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಆಸ್ಪತ್ರೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಸೇತುವೆಯ ಕೆಳಗೆ ಇಂಧನದ ಟ್ಯಾಂಕರ್ ಸಿಲುಕಿಕೊಂಡು, ಸ್ಫೋಟವಾಗಿದೆ ಎನ್ನಲಾಗಿದೆ. ಈ ಸ್ಫೋಟದ ನಂತರ ಆಸ್ಪತ್ರೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ.

ಇದನ್ನೂ ಓದಿ: Pakistan Blast ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; 12 ಸಾವು

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗಲೇ ಎರಡನೇ ಭಾರಿ ಸ್ಫೋಟ ಸಂಭವಿಸಿದೆ. ಇದರಿಂದ ಅಗ್ನಿಶಾಮಕ ವಾಹನದ ಎಂಜಿನ್ ಮತ್ತು ಎರಡು ಮೋಟಾರು ವಾಹನಗಳಿಗೆ ಗಾನಿಯಾಗಿದೆ. ಈ ಘಟನೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಊಹಿಸಲಾಗಿದೆ. ಈಗಾಗಲೇ ಗಾಯಗೊಂಡಿರುವ 19 ಜನರ ಸ್ಥಿತಿ ತೀರಾ ಗಂಭೀರವಾಗಿದೆ. 15 ಗಾಯಾಳುಗಳ ಆರೋಗ್ಯ ಸ್ಥಿರವಾಗಿದ್ದರೂ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: South Africa Church: ದಕ್ಷಿಣ ಆಫ್ರಿಕಾದ ಚರ್ಚ್​ ಪ್ರಾರ್ಥನೆ ವೇಳೆ ಪ್ರವಾಹ; 9 ಜನ ಸಾವು, 8 ಮಂದಿ ನಾಪತ್ತೆ

6 ಅಗ್ನಿಶಾಮಕ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಈ ಟ್ಯಾಂಕರ್ ಸ್ಫೋಟದ ವಿಡಿಯೋಗಳು ಹಡಿದಾಡುತ್ತಿವೆ. ಈ ಟ್ಯಾಂಕರ್ 60,000 ಲೀಟರ್ ಎಲ್‌ಪಿಜಿ ಗ್ಯಾಸ್ ಅನ್ನು ಹೊತ್ತೊಯ್ಯುತ್ತಿತ್ತು. ಇದನ್ನು ವಿಶೇಷವಾಗಿ ಅಡುಗೆ ಮತ್ತು ಗ್ಯಾಸ್ ಸ್ಟೌವ್‌ಗಳಲ್ಲಿ ಬಳಸಲಾಗುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 am, Sun, 25 December 22