Pakistan Blast ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; 12 ಸಾವು
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಮಂಗಳವಾರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ 12 ಮಂದಿ ಸಾವಿಗೀಡಾಗಿದ್ದಾರೆ .
ಪಾಕಿಸ್ತಾನದ (Pakistan) ಬಲೂಚಿಸ್ತಾನ (Balochistan) ಪ್ರಾಂತ್ಯದ ಖುಜ್ದಾರ್ ನಗರದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ (gas cylinder blast) ಸಂಭವಿಸಿ 12 ಮಂದಿ ಸಾವಿಗೀಡಾಗಿದ್ದು, 13 ಮಂದಿಗೆ ಗಾಯಗಳಾಗಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಗ್ಯಾಸ್ ರೀಫಿಲ್ಲಿಂಗ್ ಪ್ರಕ್ರಿಯೆ ಹೊತ್ತಲ್ಲಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಲಾಸ್ಬೆಲಾದ ಡೆಪ್ಯುಟಿ ಕಮಿಷನರ್ ಮುರಾದ್ ಖಾನ್ ಕಾಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ, ಇದು ದೊಡ್ಡ ಸ್ಫೋಟಕ್ಕೆ ಕಾರಣವಾಯಿತು. ಲಾಸ್ಬೆಲಾದ ಬೇಲಾ ಪ್ರದೇಶದಲ್ಲಿ ಪಕ್ಕದ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 25 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಕರಾಚಿಯ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 12 ಮಂದಿ ಗಾಯಾಳುಗಳು ರಾತ್ರಿಯ ಚಿಕಿತ್ಸೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
At least 12 people were killed and 13 others injured due to a massive gas cylinder blast at a market in Pakistan’s #Balochistan province, a local official said.
— IANS (@ians_india) December 20, 2022
ಗಾಯಗೊಂಡವರ ಪೈಕಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Abu Dhabi: ಅಬುಧಾಬಿ ವಿಮಾನ ನಿಲ್ದಾಣ ಪ್ರವೇಶಿಸಲು ಪಾಸ್ಪೋರ್ಟ್, ಟಿಕೆಟ್ ಬೇಕಿಲ್ಲ; ಮುಖವೇ ಬೋರ್ಡಿಂಗ್ ಪಾಸ್!
ಸ್ಫೋಟದಿಂದ ಉಂಟಾದ ಬೆಂಕಿ ಅಂಗಡಿಯಲ್ಲಿ ಸಂಗ್ರಹಿಸಲಾದ ಇತರ ಸಿಲಿಂಡರ್‌ಗಳನ್ನು ಸಹ ಆವರಿಸಿದೆ, ಇದು ಹೆಚ್ಚಿನ ಸ್ಫೋಟಗಳಿಗೆ ಕಾರಣವಾಯಿತು. ಈ ಜ್ವಾಲೆಯಲ್ಲಿ ನಾಲ್ಕು ಅಕ್ಕಪಕ್ಕದ ಅಂಗಡಿಗಳು ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ಸುಮಾರು 12 ವಾಹನಗಳು ಹೊತ್ತಿ ಉರಿದಿವೆ.
ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Tue, 20 December 22