ಮನೆಯಿಂದ ಕೆಲಸ ಮಾಡುವುದು ಸುಲಭವಲ್ಲ, ವರ್ಕ್ ಫ್ರಂ ಹೋಮ್​​ ಬಗ್ಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದೇನು?

| Updated By: ರಶ್ಮಿ ಕಲ್ಲಕಟ್ಟ

Updated on: May 16, 2022 | 8:20 PM

ಮನೆಯಿಂದ ಕೆಲಸ ಮಾಡುವುದು ಸರಿಹೋಗುವುದಿಲ್ಲ .ಮನೆಯಿಂದ ಕೆಲಸ ಮಾಡುವಾಗ ಜನರು ಕಾಫಿ ಮಾಡಿಕೊಂಡು, ಚೀಸ್ ತಿನ್ನುವ ಮೂಲಕ ಕಚೇರಿ ಕೆಲಸದಿಂದ ವಿಚಲಿತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಮನೆಯಿಂದ ಕೆಲಸ ಮಾಡುವುದು ಸುಲಭವಲ್ಲ, ವರ್ಕ್ ಫ್ರಂ ಹೋಮ್​​ ಬಗ್ಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದೇನು?
ಬೋರಿಸ್ ಜಾನ್ಸನ್
Image Credit source: Pippa Fowles/10 Downing Street/AFP
Follow us on

ಕೊವಿಡ್ (Covid 19)  ಸಾಂಕ್ರಾಮಿಕ ರೋಗವು ಜಗತ್ತನ್ನು ಕಂಗಾಲಾಗಿಸಿದಾಗಿನಿಂದ ಮನೆಯಿಂದಲೇ ಕೆಲಸ ಮಾಡುವುದು (WFH) ಸಾಮಾನ್ಯವಾಗಿದೆ. ಲ್ಯಾಪ್‌ಟಾಪ್ ಬಳಸಿ ನಿಮ್ಮ ಸ್ವಂತ ಸ್ಥಳದಿಂದ ಕೆಲಸ ಮಾಡುವುದು ಅನುಕೂಲಕರವಾಗಿದ್ದರೂ, ಅದು ತನ್ನದೇ ಆದ ಕಳವಳವನ್ನು ಹೊಂದಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಹೇಳುತ್ತಾರೆ. ಮನೆಯಿಂದ ಕೆಲಸ ಮಾಡುವುದು ಸರಿಹೋಗುವುದಿಲ್ಲ .ಮನೆಯಿಂದ ಕೆಲಸ ಮಾಡುವಾಗ ಜನರು ಕಾಫಿ ಮಾಡಿಕೊಂಡು, ಚೀಸ್ ತಿನ್ನುವ ಮೂಲಕ ಕಚೇರಿ ಕೆಲಸದಿಂದ ವಿಚಲಿತರಾಗುತ್ತಾರೆ ಎಂದು ಅವರು ಹೇಳಿದ್ದಾರೆ. ಜನರು ಕಚೇರಿಗೆ ಮರಳುವಂತೆ ಅವರು ಒತ್ತಾಯಿಸುತ್ತಿರುವ ಹೊತ್ತಲ್ಲೇ ಅವರು ಮನೆಯಿಂದ ಕೆಲಸ ಮಾಡುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ದಿ ಗಾರ್ಡಿಯನ್‌ನ ವರದಿಯ ಪ್ರಕಾರ, ಸಹೋದ್ಯೋಗಿಗಳೊಂದಿಗೆ ಕೆಲಸದ ಸ್ಥಳದಲ್ಲಿ ಸಿಬ್ಬಂದಿಗಳು “ಹೆಚ್ಚು ಉತ್ಪಾದಕ, ಹೆಚ್ಚು ಶಕ್ತಿಯುತ, ಹೆಚ್ಚು ಆಲೋಚನೆಗಳಿಂದ ತುಂಬಿರುತ್ತಾರೆ” ಎಂದು ಅವರು ಹೇಳಿದರು. ಮನೆಯಿಂದ ಕೆಲಸ ಮಾಡುವ ಅನುಭವವನ್ನು ಹೇಗೆ ಇತ್ತು ಎಂದು ಕೇಳಿದಾಗ ಇನ್ನೊಂದು ಕಪ್ ಕಾಫಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದು ನಂತರ ಎದ್ದು ನಿಧಾನವಾಗಿ ಫ್ರಿಡ್ಜ್ ಕಡೆ ನಡೆಯುವುದು, ಸಣ್ಣ ತುಂಡು ಚೀಸ್ ತೆಗೆದುಕೊಳ್ಳುವುದು ನಂತರ ನಿಧಾನವಾಗಿ ಹಿಂತಿರುಗುವುದು ಮಾಡುತ್ತೀರಿ. ನಂತರ ನಿಮ್ಮ ಲ್ಯಾಪ್‌ಟಾಪ್‌ ಬಳಿ ಮರಳಿದಾಗ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನೇ ಮರೆತುಬಿಡುತ್ತೀರಿ ಎಂದು ಹೇಳಿದ್ದಾರೆ.

ಉದ್ಯೋಗಿಗಳು ಕಚೇರಿಗೆ ಹಿಂತಿರುಗುವುದರಿಂದ ವಾರದ ದಿನಗಳಲ್ಲಿ ನಗರ ಕೇಂದ್ರಗಳು ಸಕ್ರಿಯವಾಗ ತೊಡಗುತ್ತವೆ. ಇದರಿಂದ ಸಮೂಹ ಸಾರಿಗೆ ಉತ್ತಮವಾಗಿರುತ್ತದೆ  ಅಂತಾರೆ ಜಾನ್ಸನ್. ಅಲ್ಲದೆ, ಕಠಿಣ ಸಮಯವನ್ನು ಎದುರಿಸುತ್ತಿರುವ ಬಹಳಷ್ಟು ವ್ಯವಹಾರಗಳು ಪ್ರಯೋಜನ ಪಡೆಯುತ್ತವೆ ಎಂದು ದಿ ಡೈಲಿ ಮೇಲ್‌ನೊಂದಿಗೆ ಮಾತನಾಡಿದ ಜಾನ್ಸನ್ ಹೇಳಿದ್ದಾರೆ.

ಕಂಪನಿಗಳು ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಬರುವಂತೆ ಒತ್ತಾಯಿಸುತ್ತಿರುವಾಗಲೇ ಕೊವಿಡ್ ಪ್ರಕರಣಗಳ ಉಲ್ಬಣವು ಮತ್ತೆ ಈ ಕಂಪನಿಗಳು ಮನೆಯಿಂದ ಕೆಲಸವನ್ನು ಮುಗಿಸಲು ಮತ್ತು ಉದ್ಯೋಗಿಗಳನ್ನು ಕಚೇರಿಗೆ ಕರೆಯಲು ಕಾದು ನೋಡುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದೆ. ಹೆಚ್ಚುತ್ತಿರುವ ಕೊವಿಡ್ ಪರಿಸ್ಥಿತಿಯಿಂದಾಗಿ ಮುಂದಿನ ಕೆಲವು ವಾರಗಳವರೆಗೆ ಹೆಚ್ಚಿನ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕಡ್ಡಾಯವಾಗಿ ಕೆಲಸ ಮಾಡುವ ಕುರಿತು ತಿಳಿಸುತ್ತಿವೆ. ಇಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, “ಏರ್‌ಟೆಲ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅದು ತಮ್ಮ ಎಲ್ಲಾ ಸೌಲಭ್ಯಗಳಲ್ಲಿ ಕಟ್ಟುನಿಟ್ಟಾದ ಕೊವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಮುಂದುವರೆಸಿದೆ” ಎಂದು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ
ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರಂಕುಶಾಧಿಕಾರದ ಬೆದರಿಕೆಗಳಿಂದ ಮುಕ್ತಗೊಳಿಸಬೇಕು: ಯುಕೆ ಪ್ರಧಾನಿ ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್- ನರೇಂದ್ರ ಮೋದಿ ಭೇಟಿ; ಭಾರತಕ್ಕೆ ಯುದ್ಧ ವಿಮಾನ ತಯಾರಿಕೆಗೆ ತರಬೇತಿ ನೀಡಲು ಮುಂದಾದ ಇಂಗ್ಲೆಂಡ್
Viral Video: ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್; ವಿಡಿಯೋ ವೈರಲ್
ಏಪ್ರಿಲ್​ 21-22ಕ್ಕೆ ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ; ಪ್ರಧಾನಿ ಮೋದಿಯೊಂದಿಗೆ ಮಾತುಕತೆ

 

 

 

 

Published On - 8:19 pm, Mon, 16 May 22