ಬೋರಿಸ್ ಜಾನ್ಸನ್- ನರೇಂದ್ರ ಮೋದಿ ಭೇಟಿ; ಭಾರತಕ್ಕೆ ಯುದ್ಧ ವಿಮಾನ ತಯಾರಿಕೆಗೆ ತರಬೇತಿ ನೀಡಲು ಮುಂದಾದ ಇಂಗ್ಲೆಂಡ್
ನನಗೆ ಅದ್ಭುತವಾದ ಸ್ವಾಗತ ನೀಡಿದ್ದಕ್ಕಾಗಿ ಧನ್ಯವಾದಗಳು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದು ಪ್ರಧಾನಿ ಮೋದಿ ಭೇಟಿ ವೇಳೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) 3 ದಿನಗಳ ಭಾರತ ಪ್ರವಾಸದಲ್ಲಿದ್ದು, ಅವರ ಭಾರತ ಪ್ರವಾಸದ ಎರಡನೇ ದಿನವಾದ ಇಂದು ಬೆಳಗ್ಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬೋರಿಸ್ ಜಾನ್ಸನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಬೋರಿಸ್ ಜಾನ್ಸನ್ ತಮಗೆ ಭಾರತಕ್ಕೆ ಆತ್ಮೀಯ ಸ್ವಾಗತ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದರು. “ನನಗೆ ಅದ್ಭುತವಾದ ಸ್ವಾಗತ ನೀಡಿದ್ದಕ್ಕಾಗಿ ಧನ್ಯವಾದಗಳು. ಭಾರತ ಮತ್ತು ಇಂಗ್ಲೆಂಡ್ ನಡುವೆ ಹಿಂದೆಂದಿಗಿಂತಲೂ ಈಗ ಸಂಬಂಧ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಉಭಯ ದೇಶಗಳ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ” ಎಂದಿದ್ದಾರೆ.
ಈ ವರ್ಷದ ಅಂತ್ಯದ ವೇಳೆಗೆ ಇಂಗ್ಲೆಂಡ್ ಭಾರತದೊಂದಿಗೆ ಮತ್ತೊಂದು ಮುಕ್ತ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ. ಇಂಗ್ಲೆಂಡ್ ಮತ್ತು ಭಾರತೀಯ ವ್ಯವಹಾರಗಳು ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಿಂದ ಆರೋಗ್ಯದವರೆಗಿನ ಕ್ಷೇತ್ರಗಳಲ್ಲಿ 1 ಶತಕೋಟಿ ಮೌಲ್ಯದ ಹೂಡಿಕೆ ಮತ್ತು ರಫ್ತು ವ್ಯವಹಾರಗಳನ್ನು ಘೋಷಿಸಲು ಸಿದ್ಧವಾಗಿವೆ. ಡಿಜಿಟಲ್ ಆರೋಗ್ಯ ಪಾಲುದಾರಿಕೆ ಮತ್ತು ಭಾರತೀಯ ಡೀಪ್-ಟೆಕ್ ಮತ್ತು AI ಸ್ಟಾರ್ಟ್-ಅಪ್‌ಗಳಿಗೆ ಜಂಟಿ ಹೂಡಿಕೆ ನಿಧಿ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೋಗಗಳು, ಎರಡೂ ಸರ್ಕಾರಗಳಿಂದ ಬೆಂಬಲಿತವಾಗಿದೆ ಎಂದಿದ್ದಾರೆ.
Prime Minister Narendra Modi receives UK PM Boris Johnson at Rashtrapati Bhavan pic.twitter.com/BbGjwOWDQU
— ANI (@ANI) April 22, 2022
#WATCH | Prime Minister Narendra Modi receives UK PM Boris Johnson at Rashtrapati Bhavan pic.twitter.com/IpbQMKAWPb
— ANI (@ANI) April 22, 2022
ಗುಜರಾತ್ ಜನರು ನನಗೆ ಅದ್ಭುತ ಸ್ವಾಗತವನ್ನು ನೀಡಿದರು. ಈ ರೀತಿಯ ಸ್ವಾಗತವನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ಇಂತಹ ಸಂತೋಷದಾಯಕ ಸ್ವಾಗತವನ್ನು ನಾನು ಎಲ್ಲೂ ನೋಡಿಲ್ಲ. ಜಗತ್ತಿನ ಬೇರೆಲ್ಲೂ ನನಗೆ ಈ ರೀತಿಯ ಸ್ವಾಗತ ಸಿಕ್ಕಿರಲಿಲ್ಲ. ಭಾರತದ ಪ್ರಧಾನಿ ಮೋದಿಯವರ ತವರು ರಾಜ್ಯವನ್ನು ಮೊದಲ ಬಾರಿಗೆ ನೋಡಿರುವುದು ನನಗೆ ಅದ್ಭುತವಾದ ಅನುಭವ ನೀಡಿದೆ ಎಂದು ಬ್ರಿಟನ್ ಪ್ರಧಾನಿ ಜಾನ್ಸನ್ ತಮ್ಮ ಗುಜರಾತ್ ಭೇಟಿಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
Looking forward to meeting with my friend @NarendraModi today in New Delhi.
From climate change to energy security to defence, the partnership of our democracies is vital as the world faces growing threats from autocratic states.
— Boris Johnson (@BorisJohnson) April 22, 2022
ಬಹುನಿರೀಕ್ಷಿತ ಭೇಟಿಯಲ್ಲಿ ನನ್ನ ಸ್ನೇಹಿತ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭಾರತದಲ್ಲಿ ನೋಡಲು ಬಹಳ ಖುಷಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Wonderful to see you, my friend PM @BorisJohnson in India on a long-awaited visit. Look forward to our discussions today. https://t.co/6gUxR1PwPH pic.twitter.com/z6Ufv8zgAb
— Narendra Modi (@narendramodi) April 22, 2022
ನಿನ್ನೆ ಭಾರತಕ್ಕೆ ಆಗಮಿಸಿರುವ ಪ್ರಧಾನಿ ಬೋರಿಸ್ ಜಾನ್ಸನ್ ಪಿಎಂ ಮೋದಿಯವರ ತವರು ರಾಜ್ಯವಾದ ಗುಜರಾತ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಮಹಾತ್ಮ ಗಾಂಧಿಯವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಮೊದಲ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಿದ್ದಾರೆ.
#WATCH | “Thank you for the fantastic welcome…I don’t think the things have ever been as strong or as good between us (India-UK) as they are now,” UK PM Boris Johnson said in Delhi pic.twitter.com/f7tuRbFGKj
— ANI (@ANI) April 22, 2022
ಭಾರತ ಭೇಟಿಯನ್ನು ಪ್ರಾರಂಭಿಸಿದ ಬೆನ್ನಲ್ಲೇ 1 ಶತಕೋಟಿ ಪೌಂಡ್ ಒಪ್ಪಂದವನ್ನು ದೃಢೀಕರಿಸಿದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ತಡರಾತ್ರಿ ಈ ಬಗ್ಗೆ ಟ್ವೀಟ್ ಮಾಡಿದ್ದರು. ಇಂದು ನಾವು ಯುಕೆಯಲ್ಲಿ ಸುಮಾರು 11,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಭಾರತ- ಇಂಗ್ಲೆಂಡ್ ದೇಶಗಳ ನಡುವೆ 1 ಬಿಲಿಯನ್‌ಗಿಂತಲೂ ಹೆಚ್ಚಿನ ಹೊಸ ಹೂಡಿಕೆಗಳನ್ನು ದೃಢಪಡಿಸಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Viral Video: ಸಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್; ವಿಡಿಯೋ ವೈರಲ್
ಏಪ್ರಿಲ್ 21-22ಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ; ಪ್ರಧಾನಿ ಮೋದಿಯೊಂದಿಗೆ ಮಾತುಕತೆ
Published On - 11:23 am, Fri, 22 April 22