ವೈದ್ಯಲೋಕದ ಅಚ್ಚರಿ: 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿತ್ತು, ಮಗುವಿಗೆ ಮತ್ತೆ ಉಸಿರುಕೊಟ್ಟ ವೈದ್ಯರಿಗೊಂದು ಸಲಾಂ

ಒಮ್ಮೆ ಹೃದಯ ಬಡಿತ ನಿಂತು ಹೋದರೆ ಬದುಕಿ ಬರುವ ಮಾತೆಲ್ಲಿ, ಆದರೆ ಈ ಮಗು ಸಾವನ್ನೂ ಗೆದ್ದು ಬಂದಿದೆ. ಸತತ 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿದ್ದರೂ, ವೈದ್ಯರು ಮಗುವನ್ನು ಬದುಕಿಸುವಲ್ಲಿ ಸಫಲರಾಗಿದ್ದಾರೆ.

ವೈದ್ಯಲೋಕದ ಅಚ್ಚರಿ: 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿತ್ತು, ಮಗುವಿಗೆ ಮತ್ತೆ ಉಸಿರುಕೊಟ್ಟ ವೈದ್ಯರಿಗೊಂದು ಸಲಾಂ
ಮಗು ವೇಲಾನ್
Image Credit source: NDTV

Updated on: Feb 23, 2023 | 8:38 AM

ಒಮ್ಮೆ ಹೃದಯ ಬಡಿತ ನಿಂತು ಹೋದರೆ ಬದುಕಿ ಬರುವ ಮಾತೆಲ್ಲಿ, ಆದರೆ ಈ ಮಗು ಸಾವನ್ನೂ ಗೆದ್ದು ಬಂದಿದೆ. ಸತತ 3 ಗಂಟೆಗಳ ಕಾಲ ಹೃದಯ ಬಡಿತ ನಿಂತಿದ್ದರೂ, ವೈದ್ಯರು ಮಗುವನ್ನು ಬದುಕಿಸುವಲ್ಲಿ ಸಫಲರಾಗಿದ್ದಾರೆ. ಇದು ವೈದ್ಯಲೋಕದ ಅಚ್ಚರಿ ಎಂದೇ ಹೇಳಬಹುದು. ಹೋಂ ಡೇ ಕೇರ್​ನ ಹೊರಾಂಗಣದಲ್ಲಿ ಆಡುತ್ತಿದ್ದ 20 ತಿಂಗಳ ಮಗು ಅರಿವಿಲ್ಲದೆ ಈಜುಕೊಳಕ್ಕೆ ಬಿದ್ದಿತ್ತು. ಪ್ರಜ್ಞೆ ತಪ್ಪಿತ್ತು, ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗು ನಿರ್ಜೀವವಾಗಿತ್ತು. ಈ ಘಟನೆ ನಡೆದಿದ್ದು, ಕೆನಡಾದಲ್ಲಿ.

ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗುವಿನ ಹೃದಯ ಬಡಿತ ನಿಂತಿತ್ತು, ಆದರೂ ವೈದ್ಯರು ನೋಡಿಯೇ ಬಿಡೋಣ ಮಗು ಬದುಕಿದರೂ ಬದುಕಬಹುದು ಎಂದು ನಿರ್ಧಾರ ಮಾಡಿದರು. ಅಲ್ಲಿನ ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್​ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮಗುವನ್ನು ಉಳಿಸಲು ನಿರಂತರ ಪ್ರಯತ್ನ ಮಾಡಿ ಕೊನೆಗೂ ಮಗು ಬದುಕುಳಿದಿದೆ.

ಪೆಟ್ರೋಲಿಯಾ ಲಂಡನ್‌ನಿಂದ 100 ಕಿಲೋಮೀಟರ್ ದೂರದಲ್ಲಿದೆ ಮತ್ತು ಆಸ್ಪತ್ರೆಯಲ್ಲಿ ಸಂಪನ್ಮೂಲ ಹಾಗೂ ಸಿಬ್ಬಂದಿ ಕೊರತೆ ಇದೆ.
ಆ ದಿನ ಲ್ಯಾಬ್ ಕೆಲಸಗಾರರು ಮತ್ತು ನರ್ಸ್​ಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ತಾವು ಮಾಡುವ ಕೆಲಸ ನಿಲ್ಲಿಸದರು, ಮಗು ವೇಲಾನ್ ಜೀವ ಉಳಿಸುವ ಕಾರ್ಯದಲ್ಲಿ ಸಹಾಯ ಮಾಡಲು ಶುರು ಮಾಡಿದರು.

ಮೂರು ಗಂಟೆಗಳ ಕಾಲ ಮಗುವಿಗೆ ಸಿಪಿಆರ್​ ಅನ್ನು ಪರ್ಯಾಯವಾಗಿ ನೀಡಿದರು. ಇದು ನಿಜವಾಗಿಯೂ ತಂಡದ ಪ್ರಯತ್ನವಾಗಿತ್ತು, ಲ್ಯಾಬ್​ ಟೆಕ್​ಗಳು ಕೊಠಡಿಯಲ್ಲಿ ಪೋರ್ಟಬಲ್ ಹೀಟರ್​ಗಳನ್ನು ಹಿಡಿದಿದ್ದರು, ಇಎಂಎಸ್ ಸಿಬ್ಬಂದಿ ಕೂಡ ಕಂಪ್ರೆಸರ್​ಗಳ ಮೂಲಕ ವಾಯುಮಾರ್ಗ ನಿರ್ವಹಿಸುವಲ್ಲಿ ಸಹಾಯ ಮಾಡಿದರು. ಮೆಲಾನ್ ಫೆಬ್ರವರಿ 6 ರಂದು ಆಸ್ಪತ್ರೆಯಿಂದ ಬಿಡುಗಡೆಯಾಯಿತು. ಪೋಷಕರು ಮಗುವಿಗೆ ಮರುಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us