Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೆಟ್ಟು ನಿಂತ ಕೆನಡಾ ಪ್ರಧಾನಿ ಪ್ರಯಾಣಿಸಬೇಕಿದ್ದ ವಿಮಾನ, ಮುಜುಗರ ಅನುಭವಿಸಿದ ಟ್ರುಡೊ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಪ್ರಯಾಣಿಸಬೇಕಿದ್ದ ವಿಮಾನ ಮತ್ತೆ ಕೈಕೊಟ್ಟಿದ್ದು, ತೀವ್ರ ಮುಜುಗರ ಅನುಭವಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ಕೆಟ್ಟು ನಿಂತಿರುವುದು ಇದು ಎರಡನೇ ಬಾರಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ G20 ಸಮಯದಲ್ಲಿ ಭಾರತದಲ್ಲಿ ಟ್ರೂಡೊ ಅವರ ವಿಮಾನವು ಕೆಟ್ಟುಹೋಯಿತು, ಇದರಿಂದಾಗಿ ಕೆನಡಾದ ಪ್ರಧಾನಿ ಇನ್ನೂ ಎರಡು ದಿನಗಳ ಕಾಲ ಭಾರತದಲ್ಲಿ ಉಳಿಯಬೇಕಾಯಿತು.

ಮತ್ತೆ ಕೆಟ್ಟು ನಿಂತ ಕೆನಡಾ ಪ್ರಧಾನಿ ಪ್ರಯಾಣಿಸಬೇಕಿದ್ದ ವಿಮಾನ, ಮುಜುಗರ ಅನುಭವಿಸಿದ ಟ್ರುಡೊ
ಜಸ್ಟಿನ್Image Credit source: NDTV
Follow us
ನಯನಾ ರಾಜೀವ್
|

Updated on: Jan 07, 2024 | 8:21 AM

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಪ್ರಯಾಣಿಸಬೇಕಿದ್ದ ವಿಮಾನ ಮತ್ತೆ ಕೈಕೊಟ್ಟಿದ್ದು, ತೀವ್ರ ಮುಜುಗರ ಅನುಭವಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ಕೆಟ್ಟು ನಿಂತಿರುವುದು ಇದು ಎರಡನೇ ಬಾರಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ G20 ಸಮಯದಲ್ಲಿ ಭಾರತದಲ್ಲಿ ಟ್ರೂಡೊ ಅವರ ವಿಮಾನವು ಕೆಟ್ಟುಹೋಯಿತು, ಇದರಿಂದಾಗಿ ಕೆನಡಾದ ಪ್ರಧಾನಿ ಇನ್ನೂ ಎರಡು ದಿನಗಳ ಕಾಲ ಭಾರತದಲ್ಲಿ ಉಳಿಯಬೇಕಾಯಿತು.

ಕೆನಡಾದ ಪ್ರಧಾನಿ ಡಿಸೆಂಬರ್ 26 ರಂದು ಕುಟುಂಬ ವಿಹಾರಕ್ಕಾಗಿ ಜಮೈಕಾಗೆ ಹೋಗಿದ್ದರು, ಅಲ್ಲಿ ಅವರು ತಮ್ಮ ಕುಟುಂಬದೊಂದಿಗೆ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು, ಆದರೆ ಗುರುವಾರ, ಅವರು ಹಿಂದಿರುಗುವಾಗ, ಅವರ ವಿಮಾನವು ಕೆಟ್ಟನಿಂತಿತ್ತು, ಇದರಿಂದಾಗಿ ಅವರು ಒಂದು ದಿನ ಅಲ್ಲೇ ಉಳಿಯಬೇಕಾಯಿತು.

ರಾಷ್ಟ್ರೀಯ ರಕ್ಷಣಾ ಇಲಾಖೆಯು ಜಮೈಕಾಕ್ಕೆ ಎರಡನೇ ವಿಮಾನವನ್ನು ಕಳುಹಿಸಿದೆ ಎಂದು ಕೆನಡಾದ ಔಟ್ಲೆಟ್ CBC ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಕೆನಡಾದ ವಾರ್ತಾಪತ್ರಿಕೆ ನ್ಯಾಷನಲ್ ಪೋಸ್ಟ್ ಈ ಹಿಂದೆ ಟ್ರೂಡೊ ತನ್ನ ರಜೆಯ ಪ್ರಯಾಣಕ್ಕೆ ತಾನೇ ಪಾವತಿಸುತ್ತಿರುವುದಾಗಿ ಹೇಳಿದ್ದಾಗಿ ವರದಿ ಮಾಡಿತ್ತು.

ಮತ್ತಷ್ಟು ಓದಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತದಿಂದ ತೆರಳುವುದು ಮತ್ತಷ್ಟು ವಿಳಂಬ

ಟ್ರುಡೊ ಅವರ ವಿಮಾನ ಎಷ್ಟು ಹಳೆಯದು? ಟ್ರುಡೊ ಅವರ ಪ್ರಸ್ತುತ ವಿಮಾನವು 36 ವರ್ಷ ಹಳೆಯದು. ಅಕ್ಟೋಬರ್ 2016 ರಲ್ಲಿ, ಅದು ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಒಟ್ಟಾವಾ (ಕೆನಡಾದ ರಾಜಧಾನಿ) ಗೆ ಮರಳಿತು. ಆ ಸಮಯದಲ್ಲಿ ಟ್ರುಡೊ ಬೆಲ್ಜಿಯಂಗೆ ಭೇಟಿ ನೀಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ