ವಾಷಿಂಗ್ಟನ್: ವೈದ್ಯಕೀಯ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಪವಾಡ ನಡೆಯುತ್ತಲೇ ಇರುತ್ತದೆ. ಇದೀಗ ಕ್ಯಾನ್ಸರ್ ರೋಗದ ಇತಿಹಾಸದಲ್ಲೇ ಮೊದಲು ಎಂಬಂತೆ ಅಮೆರಿಕದಲ್ಲೊಂದು ಅಂಥದ್ದೇ ಪವಾಡ ನಡೆದಿದೆ. ಗುದನಾಳದ ಕ್ಯಾನ್ಸರ್‌ಗೆ ತುತ್ತಾಗಿದ್ದ ಸುಮಾರು 18 ರೋಗಿಗಳಿಗೆ ಕಳೆದ 6 ತಿಂಗಳಿಂದ ಡೋಸ್ಟರ್‌ಲಿಮಾಬ್’ ಎಂಬ ಔಷಧವನ್ನು ಪರೀಕ್ಷಾರ್ಥವಾಗಿ ನೀಡಲಾಗುತ್ತಿತ್ತು.
ಚಿಕಿತ್ಸೆಯ ಕೊನೆಯ ಹಂತದಲ್ಲಿ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಎಲ್ಲ 18 ಮಂದಿಯಲ್ಲೂ ಕ್ಯಾನ್ಸರ್ ನಿರ್ಮೂಲನೆಯಾಗಿದೆ.
ಶಾರೀರಿಕ ಪರೀಕ್ಷೆ, ಎಂಡೋಸ್ಕೋಪಿ, ಪಾಸಿಟ್ರನ್ ಎಮಿಷನ್ ಟೋಮೋಗ್ರಫಿ ಅಥವಾ ಪಿಇಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್ ಹೀಗೆ ಎಲ್ಲ ರೀತಿಯ ಪರೀಕ್ಷೆಗೆ ಒಳಪಡಿಸಿದರೂ, ಅವರಲ್ಲಿದ್ದ ಕ್ಯಾನ್ಸರ್ ಗೆಡ್ಡೆಗಳು ಕಾಣಿಸುತ್ತಿಲ್ಲ.
ಈ ಚಿಕಿತ್ಸೆ ವರದಾನ ಸಾಬೀತಾಗಲಿದೆ.
ಇದರ ನಡುವೆ, ಪ್ರಸ್ತುತ ನಡೆದಿರುವ ಈ ಪರೀಕ್ಷೆಯು ಚಿಕಿತ್ಸೆ ಪಡೆಯುತ್ತಿರುವ ಹಲವಾರು ರೋಗಿಗಳ ಪಾಲಿಗೆ ವರದಾನ ಸಾಬೇತಾಗಲಿದೆ . ಈ ಕುರಿತು ಟೈಮ್ಸ್ ಜೊತೆಗೆ ಮಾತನಾಡಿರುವ ಅಧ್ಯಯನದ ಸಹ-ಲೇಖಕರಾದ ಡಾ ಆಂಡ್ರಿಯಾ ಸೆರ್ಸೆಕ್, ಫಲಿತಾಂಶಗಳು ಪ್ರಕಟಗೊಂಡಾಗ ಬೆಹುತೆಕರ ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಇತ್ತು ಎಂದಿದ್ದಾರೆ.
ಸೆರ್ಸೆಕ್, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ಆಂಕೊಲಾಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಸ್ಪತ್ರೆ ಹೊರತಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, “ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಅಧ್ಯಯನದಲ್ಲಿ ಪಾಲ್ಗೊಂಡ ರೋಗಿಗಳಿಂದ ಬಂದ ಸಂತೋಷದ ಇಮೇಲ್‌ಗಳು ನನ್ನ ಕಣ್ಣಲ್ಲಿ ನೀರು ತರಿಸಿವೆ. ಏಕೆಂದರೆ ಈ ರೋಗಿಗಳು ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಆರೋಗ್ಯದಿಂದ ಇದ್ದಾರೆ” ಎಂದು ಸೆರ್ಸೆಕ್ ಮಾಹಿತಿ ನಿಡಿದ್ದಾರೆ.
ಕಿಮೋಥೆರಪಿ, ವಿಕಿರಣ ಚಿಕಿತ್ಸೆ ಇಲ್ಲ
ಈ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ಕೀಮೋಥೆರಫಿ ಮತ್ತು ವಿಕಿರಣವನ್ನು ಚಿಕಿತ್ಸೆಯನ್ನು ನೀಡಲಾಗಿಲ್ಲ. ಗುದನಾಳದ ಕ್ಯಾನ್ಸರ್ನ ಸಂದರ್ಭದಲ್ಲಿ, ಕೆಲವು ರೋಗಿಗಳಿಗೆ ಕೊಲೊಸ್ಟೊಮಿ ಬ್ಯಾಗ್ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳು ಕೆಲವೊಮ್ಮೆ ಕರುಳಿನ, ಮೂತ್ರ ಕೋಶದ ದೋಷಗಳಂತಹ ಶಾಶ್ವತ ತೊಡಕುಗಳನ್ನು ಸಹ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ.
ಹೊಸ ಭರವಸೆ ಮೂಡಿಸಿದ ಔಷಧಿ
ಈ ಚಿಕಿತ್ಸೆಯು ಹೊಸ ಭರವಸೆಯನ್ನು ಮೂಡಿಸಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನಷ್ಟು ಅಧ್ಯಯನಗಳು ಹಾಗೂ ದೊಡ್ಡ ಮಟ್ಟದ ಪ್ರಯೋಗಗಳು ನಡೆಯಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸದಲ್ಲೇ ಮೊದಲು
ಇಂಥದ್ದೊಂದು ಪವಾಡ ನಡೆದಿರುವುದು ಕ್ಯಾನ್ಸರ್ ಇತಿಹಾಸದಲ್ಲಿ ಇದೇ ಮೊದಲು’ ಎಂದು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಕೇಂದ್ರದ ಡಾ. ಲೂಯಿಸ್ ಎ ಡಿಯಾಜ್ ಜೆ ಹೇಳಿದ್ದಾರೆ. ಜತೆಗೆ, ಈ ಸಂಶೋಧನೆಯು ವೈದ್ಯಕೀಯ ಜಗತ್ತಿನಲ್ಲೇ ಸಂಚಲನ ಮೂಡಿಸಿದೆ ಎಂದೂ ಅವರು ತಿಳಿಸಿದ್ದಾರೆ.
18 ರೋಗಿಗಳ ಮೇಲೆ ನಡೆದ ಪ್ರಯೋಗ
ಇದರಲ್ಲಿ ಕೇವಲ 18 ರೋಗಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ, ಇನ್ನೊಂದೆಡೆ ಪ್ರಯೋಗದ ಫಲಿತಾಂಶಗಳನ್ನು ಕಂಡು ರೋಗಿಗಳು ಅಷ್ಟೇ ಅಲ್ಲ, ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಪ್ರಯೋಗದ ಸಮಯದಲ್ಲಿ, ರೋಗಿಗಳಿಗೆ ಆರು ತಿಂಗಳ ಕಾಲ ಡೋಸ್ಟಾರ್ಲಿಮಾಬ್ ಅನ್ನು ನೀಡಲಾಗಿದೆ.
ನಿಗದಿತ ಅವಧಿಯ ಬಳಿಕ ಭಾಗವಹಿಸುವವರ ಸ್ಕ್ಯಾನ್ ಸಂಪೂರ್ಣವಾಗಿ ಸ್ಪಷ್ಟವಾಗಿದೆ ಮತ್ತು ಅವರ ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಇಲ್ಲದಿರುವುದು ಪತ್ತೆಯಾಗಿದೆ. ಈ ಸಂಶೋಧನೆಯು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನಕ್ಕೆ ಔಷಧ ತಯಾರಕ ಕಂಪನಿ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಬೆಂಬಲಿಸಿದೆ.
ಇತರೆ ವಿದೇಶಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ