Gupta Brothers Arrest: ಭ್ರಷ್ಟಾಚಾರದ ಆರೋಪ; ಯುಎಇಯಲ್ಲಿ ಭಾರತ ಮೂಲದ ಗುಪ್ತಾ ಬ್ರದರ್ಸ್​ ಬಂಧನ

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರ ಅವಧಿಯಲ್ಲಿ ರಾಜಕೀಯ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸಹೋದರರಾದ ರಾಜೇಶ್ ಗುಪ್ತಾ ಮತ್ತು ಅತುಲ್ ಗುಪ್ತಾ ಅವರನ್ನು ಯುಎಇಯಲ್ಲಿ ಬಂಧಿಸಲಾಗಿದೆ.

Gupta Brothers Arrest: ಭ್ರಷ್ಟಾಚಾರದ ಆರೋಪ; ಯುಎಇಯಲ್ಲಿ ಭಾರತ ಮೂಲದ ಗುಪ್ತಾ ಬ್ರದರ್ಸ್​ ಬಂಧನ
ರಾಜೇಶ್ ಗುಪ್ತಾ, ಅತುಲ್ ಗುಪ್ತಾImage Credit source: Times of India
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 07, 2022 | 12:05 PM

ನವದೆಹಲಿ: ಭಾರತ ಮೂಲದ ರಾಜೇಶ್ ಗುಪ್ತಾ (Rajesh Gupta) ಮತ್ತು ಅವರ ಸಹೋದರ ಆತುಲ್ ಗುಪ್ತಾ (Atul Gupta) ಅವರನ್ನು ಯುಎಇಯಲ್ಲಿ (UAE) ಬಂಧಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಉದ್ಯಮ ಸಾಮ್ರಾಜ್ಯ ಹೊಂದಿರುವ ಗುಪ್ತಾ ಬ್ರದರ್ಸ್ (Gupta Brothers) ಇದೀಗ ಬಂಧಿತರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜಾಕೋಬ್ ಜುಮಾ (Jacob Zuma) ಅಧ್ಯಕ್ಷರಾಗಿದ್ದಾಗ ರಾಜೇಶ್ ಗುಪ್ತಾ ಮತ್ತು ಅವರ ಕುಟುಂಬಸ್ಥರು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಗುಪ್ತಾ ಬ್ರದರ್ಸ್​ ಭಾರತದ ಉತ್ತರ ಪ್ರದೇಶದ ಶಹಾರನ್​ಪುರ ಜಿಲ್ಲೆಯವರಾಗಿದ್ದಾರೆ. ಇವರು 2018ರಲ್ಲಿ ದಕ್ಷಿಣ ಆಫ್ರಿಕಾವನ್ನು ತೊರೆದು ಯುಎಇಯಲ್ಲಿ ಠಿಕಾಣಿ ಹೂಡಿದ್ದರು. ಇದೀಗ ಯುಎಇಯಲ್ಲಿ ಅವರನ್ನು ಬಂಧಿಸಲಾಗಿದೆ.

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರ ಅವಧಿಯಲ್ಲಿ ರಾಜಕೀಯ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸಹೋದರರಾದ ರಾಜೇಶ್ ಗುಪ್ತಾ ಮತ್ತು ಅತುಲ್ ಗುಪ್ತಾ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಬಂಧಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಸೋಮವಾರ ತಿಳಿಸಿದೆ.

ದಕ್ಷಿಣ ಆಫ್ರಿಕಾ ಮತ್ತು ಯುಎಇ ಈ ಎರಡೂ ದೇಶಗಳು 2021ರ ಏಪ್ರಿಲ್ ತಿಂಗಳಲ್ಲಿ ಹಸ್ತಾಂತರ ಒಪ್ಪಂದವನ್ನು ಅಂಗೀಕರಿಸಿದವು. ಆದರೆ, ಈ ಬಂಧನದ ಬಳಿಕ ಗುಪ್ತಾ ಬ್ರದರ್ಸ್​ ದಕ್ಷಿಣ ಆಫ್ರಿಕಾಕ್ಕೆ ಮರಳಲು ಸಾಧ್ಯವೇ? ಎಂಬುದು ಸ್ಪಷ್ಟವಾಗಿಲ್ಲ. 2009ರಿಂದ 2018ರವರೆಗೆ ಆಳ್ವಿಕೆ ನಡೆಸಿದ ಜುಮಾ ಅವರೊಂದಿಗಿನ ಸಂಪರ್ಕವನ್ನು ಒಪ್ಪಂದಗಳನ್ನು ಗೆದ್ದಿದ್ದಾರೆ, ರಾಜ್ಯದ ಆಸ್ತಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಕ್ಯಾಬಿನೆಟ್ ನೇಮಕಾತಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಗುಪ್ತಾ ಬ್ರದರ್ಸ್​ ಸಹೋದರರ ಮೇಲೆ ಆರೋಪ ಕೇಳಿಬಂದಿತ್ತು. ಜುಮಾ ಮತ್ತು ಗುಪ್ತ ಬ್ರದರ್ಸ್​ ಈ ಆರೋಪವನ್ನು ನಿರಾಕರಿಸಿದ್ದರು.

ಇದನ್ನೂ ಓದಿ: Sadhu Singh Dharamsot: ಭ್ರಷ್ಟಾಚಾರ ಪ್ರಕರಣ; ಪಂಜಾಬ್‌ನ ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್ ಬಂಧನ

2018ರಲ್ಲಿ ಜುಮಾ ಅವರನ್ನು ಪದಚ್ಯುತಗೊಳಿಸಿದ ನಂತರ ಭಾರತೀಯ ಮೂಲದ ಗುಪ್ತಾ ಬ್ರದರ್ಸ್​ ದಕ್ಷಿಣ ಆಫ್ರಿಕಾವನ್ನು ತೊರೆದರು. ಜುಮಾ ಅವರ ಅಧಿಕಾರದ ವರ್ಷಗಳಲ್ಲಿ ನಾಟಿ ಆರೋಪಗಳನ್ನು ಪರೀಕ್ಷಿಸಲು 2018ರಲ್ಲಿ ವಿಚಾರಣೆಯನ್ನು ಶುರು ಮಾಡಲಾಯಿತು. ಏಪ್ರಿಲ್ 2021ರಲ್ಲಿ ಯುಎಇ ದಕ್ಷಿಣ ಆಫ್ರಿಕಾದೊಂದಿಗೆ ಹಸ್ತಾಂತರ ಒಪ್ಪಂದವನ್ನು ಅಂಗೀಕರಿಸಿತು. ಈ ಕ್ರಮವು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರ ಸರ್ಕಾರವು ಆರೋಪಗಳನ್ನು ಎದುರಿಸಲು ಗುಪ್ತರ ಮರಳುವಿಕೆಗೆ ಕಾರಣವಾಗುತ್ತದೆ ಎಂದು ಆಶಿಸಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್