ಜೀವಕ್ಕೆ ಕುತ್ತು ತಂದ ಚಾಟ್​​ಜಿಪಿಟಿ

ನೀವು ಕೂಡ ಚಾಟ್​ಜಿಪಿಟಿ(ChatGPT)ಯನ್ನು ಅತಿಯಾಗಿ ನಂಬಿದ್ದರೆ ಮತ್ತು ಎಐ ಚಾಟ್​ಬಾಟ್​​ಗಳಿಂದ ಫಿಟ್​ನೆಸ್ ಸಲಹೆಗಳು ಅಥವಾ ಆಹಾರ ಸಲಹೆಗಳನ್ನು ತೆಗೆದುಕೊಳ್ಳುವ ಮುನ್ನ ಜಾಗರೂಕರಾಗಿರಿ. ಅದು ನಿಮ್ಮ ಜೀವಕ್ಕೇ ಕುತ್ತು ತರಬಹುದು. ಎಐನಿಂದ ತೆಗೆದುಕೊಳ್ಳಲಾದ ಆರೋಗ್ಯ ಸಲಹೆಯು ಜೀವಕ್ಕೆ ಅಪಾಯವನ್ನುಂಟುಮಾಡಬಹುದು. ಇದೇ ಚಾಟ್​​ಜಿಪಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯಾಯಾರ್ಕ್​ನ 60 ವರ್ಷದ ವ್ಯಕ್ತಿಯೊಬ್ಬರು ಚಾಟ್ ಜಿಪಿಟಿ ಸೂಚಿಸಿದ ಆಹಾರ ಹಾಗೂ ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಜೀವಕ್ಕೆ ಕುತ್ತು ತಂದ ಚಾಟ್​​ಜಿಪಿಟಿ
ಆಸ್ಪತ್ರೆ
Image Credit source: iStock

Updated on: Aug 12, 2025 | 11:59 AM

ನ್ಯೂಯಾರ್ಕ್​​, ಆಗಸ್ಟ್​ 12: ನೀವು ಕೂಡ ಚಾಟ್​ಜಿಪಿಟಿ(ChatGPT)ಯನ್ನು ಅತಿಯಾಗಿ ನಂಬಿದ್ದರೆ ಮತ್ತು ಎಐ ಚಾಟ್​ಬಾಟ್​​ಗಳಿಂದ ಫಿಟ್​ನೆಸ್ ಸಲಹೆಗಳು ಅಥವಾ ಆಹಾರ ಸಲಹೆಗಳನ್ನು ತೆಗೆದುಕೊಳ್ಳುವ ಮುನ್ನ ಜಾಗರೂಕರಾಗಿರಿ. ಅದು ನಿಮ್ಮ ಜೀವಕ್ಕೇ ಕುತ್ತು ತರಬಹುದು. ಎಐನಿಂದ ತೆಗೆದುಕೊಳ್ಳಲಾದ ಆರೋಗ್ಯ ಸಲಹೆಯು ಜೀವಕ್ಕೆ ಅಪಾಯವನ್ನುಂಟುಮಾಡಬಹುದು.

ಇದೇ ಚಾಟ್​​ಜಿಪಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯಾಯಾರ್ಕ್​ನ 60 ವರ್ಷದ ವ್ಯಕ್ತಿಯೊಬ್ಬರು ಚಾಟ್ ಜಿಪಿಟಿ ಸೂಚಿಸಿದ ಆಹಾರ ಹಾಗೂ ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮುಂದಿನ ದಿನಗಳಲ್ಲಿ ಈ ಚಾಟ್​ಜಿಪಿಟಿ ಹಲವರ ಉದ್ಯೋಗಗಳನ್ನು ಕಸಿದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ವ್ಯಕ್ತಿಯ ಜೀವವನ್ನೇ ಕಸಿಯಲು ಹೊರಟಿತ್ತು ಎನ್ನುವುದು ಗಂಭೀರ ವಿಚಾರವಾಗಿದೆ.

ವೈದ್ಯರ ಪ್ರಕಾರ, ಆ ವ್ಯಕ್ತಿ ಇದ್ದಕ್ಕಿದ್ದಂತೆ ಹಲವಾರು ವಾರಗಳವರೆಗೆ ತನ್ನ ಆಹಾರದಿಂದ ಸೋಡಿಯಂ ಪ್ರಮಾಣವನ್ನು ಬಹುತೇಕ ಶೂನ್ಯಕ್ಕೆ ಇಳಿಸಿದ್ದರು. ಇದರಿಂದಾಗಿ ಹೈಪೋನಾಟ್ರೀಮಿಯಾ ಎಂದು ಕರೆಯಲ್ಪಡುವ ಅಪಾಯಕಾರಿಯಾಗಿ ಕಡಿಮೆ ಆರೋಗ್ಯ ಸಮಸ್ಯೆ ಉಂಟಾಗಿತ್ತು.

ಮತ್ತಷ್ಟು ಓದಿ:

ChatGPT Tricks: ಚಾಟ್ ಜಿಪಿಟಿ ಬಳಸಿಕೊಂಡು ನಿಮ್ಮ ಫೋಟೋವನ್ನು ಈರೀತಿ ಮಾಡುವುದು ಹೇಗೆ?: ಇಲ್ಲಿದೆ ಟೆಕ್ಸ್ಟ್

 

ವೈದ್ಯರನ್ನು ಸಂಪರ್ಕಿಸಿದೇ ಅವರೇ ಸ್ವಯಂ ಚಿಕಿತ್ಸೆ ಪಡೆದ ಕಾರಣ ಈ ಪರಿಣಾಮ ಎದುರಿಸಬೇಕಾಯಿತು.
ಇತ್ತೀಚೆಗೆ ಅಮೆರಿಕನ್ ಕಾಲೇಜ್ ಆಫ್ ಫಿಸಿಶಿಯನ್ಸ್ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿತ್ತು.ಆಸ್ಪತ್ರೆಯಲ್ಲಿ ಸುಮಾರು ಮೂರು ವಾರಗಳ ಕಾಲ ಕಳೆದ ನಂತರ ಆ ವ್ಯಕ್ತಿ ಚೇತರಿಸಿಕೊಂಡರು ಎಂಬುದು ಸಮಾಧಾನಕರ ಸಂಗತಿ. ಆದರೆ ಈ ಪ್ರಕರಣವು ಚಾಟ್‌ಜಿಪಿಟಿಯ ವಿಶ್ವಾಸಾರ್ಹತೆಯ ಬಗ್ಗೆ ಖಂಡಿತವಾಗಿಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆ ವ್ಯಕ್ತಿ ತನ್ನ ಆಹಾರದಿಂದ ಸೋಡಿಯಂ ಕ್ಲೋರೈಡ್ ಅನ್ನು ಹೇಗೆ ತೆಗೆದಹಾಕಬಹುದು ಎಂದು ಚಾಟ್ ಜಿಪಿಟಿಯನ್ನು ಕೇಳಿದ್ದರು. ಪರ್ಯಾಯವಾಗಿ ಸೋಡಿಯಂ ಬ್ರೋಮೈಡ್ ಅನ್ನು ಸೂಚಿಸಿತ್ತು. 20 ನೇ ಶತಮಾನದ ಆರಂಭದಲ್ಲಿ ಔಷಧಿಗಳಲ್ಲಿ ಬಳಸಲಾಗುತ್ತಿದ್ದ ಸಂಯುಕ್ತ ಆದರೆ ಈಗ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಎಂದು ಪರಿಗಣಿಸಲಾಗಿದೆ. ಈ ಸಲಹೆಯ ಮೇರೆಗೆ, ಆ ವ್ಯಕ್ತಿ ಆನ್‌ಲೈನ್‌ನಲ್ಲಿ ಸೋಡಿಯಂ ಬ್ರೋಮೈಡ್ ಅನ್ನು ಖರೀದಿಸಿ ಮೂರು ತಿಂಗಳ ಕಾಲ ತನ್ನ ಅಡುಗೆಯಲ್ಲಿ ಬಳಸಿದ್ದರು.

ಮಾನಸಿಕ ಅಥವಾ ದೈಹಿಕ ಅಸ್ವಸ್ಥತೆಯ ಯಾವುದೇ ಇತಿಹಾಸವಿಲ್ಲದ ಕಾರಣ, ಆ ವ್ಯಕ್ತಿಗೆ ಭ್ರಮೆಗಳು, ಮತಿವಿಕಲ್ಪ ಮತ್ತು ಅತಿಯಾದ ಬಾಯಾರಿಕೆ ಪ್ರಾರಂಭವಾಯಿತು. ನರಕ್ಕೆ ಸಂಬಂಧಿಸಿದ ಸಮಸ್ಯೆಗಳು, ಮೊಡವೆ, ದದ್ದುಗಳು ದೇಹದಲ್ಲಿ ಕಾಣಿಸಿಕೊಂಡಿದ್ದವು.ಇವು ಬ್ರೋಮಿಸಂನ ಲಕ್ಷಣಗಳಾಗಿವೆ. ಮೂರು ವಾರಗಳ ಅವಧಿಯಲ್ಲಿ ಕ್ರಮೇಣವಾಗಿ ರೋಗಿಯ ಸ್ಥಿತಿ ಸುಧಾರಿಸಿತ್ತು.ಸೋಡಿಯಂ ಮತ್ತು ಕ್ಲೋರೈಡ್ ಮಟ್ಟಗಳು ಸಾಮಾನ್ಯ ಸ್ಥಿತಿಗೆ ಮರಳಿದಾಗ ಅವರನ್ನು ಬಿಡುಗಡೆ ಮಾಡಲಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us