ಬಲೂಚಿಸ್ತಾನದಲ್ಲಿ ಉಗ್ರರ ದಾಳಿಗೆ 9 ಪಾಕಿಸ್ತಾನಿ ಸೈನಿಕರು ಬಲಿ
ಬಲೂಚಿಸ್ತಾನದ ದಾಳಿಯಲ್ಲಿ ಒಬ್ಬ ಪಾಕಿಸ್ತಾನಿ ಸೇನೆಯ ಅಧಿಕಾರಿ ಸೇರಿದಂತೆ 9 ಪಾಕ್ ಸೈನಿಕರು ಬಲಿಯಾಗಿದ್ದಾರೆ. ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಉಗ್ರರು 9 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದಾರೆ ಎಂದು ಪಾಕಿಸ್ತಾನದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಜನ್‌ಗಟ್ಟಲೆ ಉಗ್ರರು ಪೊಲೀಸ್ ಠಾಣೆ ಮತ್ತು ಗಡಿ ಪಡೆಗಳ ಆವರಣದ ಮೇಲೆ ದಾಳಿ ಮಾಡಿದ್ದಾರೆ ಎಂದು ವಾಶುಕ್ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ಲಮಾಬಾದ್, ಆಗಸ್ಟ್ 12: ಬಲೂಚಿಸ್ತಾನ್ (Balochistan Attack) ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನದ ಸೇನಾ ಕ್ಯಾಪ್ಟನ್ ಸೇರಿದಂತೆ 9 ಪಾಕಿಸ್ತಾನಿ (Pakistan) ಸೈನಿಕರು ಸಾವನ್ನಪ್ಪಿದ್ದಾರೆ. ವಾಶುಕ್ ಜಿಲ್ಲೆಯ ಬಸಿಮಾ ಪ್ರದೇಶದ ಗ್ರೀನ್ ಚೌಕ್ ಬಳಿ ನಡೆದ ದಾಳಿಯಲ್ಲಿ ಆ ಪ್ರದೇಶದಲ್ಲಿ ಚಲಿಸುತ್ತಿದ್ದ ಮಿಲಿಟರಿ ಪೊಲೀಸ್ ವ್ಯಾನ್ ಮತ್ತು ಕ್ವಿಕ್ ರೆಸ್ಪಾನ್ಸ್ ಫೋರ್ಸ್ (ಕ್ಯೂಆರ್‌ಎಫ್) ಘಟಕದ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯವನ್ನು ಪಾಕಿಸ್ತಾನಿ ಆಡಳಿತದಿಂದ ಮುಕ್ತಗೊಳಿಸಲು ಚಳುವಳಿ ನಡೆಸುತ್ತಿರುವ ಬಲೂಚಿಸ್ತಾನ್ ಹೋರಾಟಗಾರರು ದಾಳಿಯ ಹಿಂದೆ ಇದ್ದಾರೆ ಎನ್ನಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ, ಪಾಕಿಸ್ತಾನಿ ಆಡಳಿತವನ್ನು ವಿರೋಧಿಸುವ ಸಶಸ್ತ್ರ ಗುಂಪುಗಳು ತಮ್ಮ ಕಾರ್ಯಾಚರಣೆಯನ್ನು ಹೆಚ್ಚಿಸಿವೆ. ಕಳೆದ ತಿಂಗಳ ಕೊನೆಯಲ್ಲಿ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಮೂವರು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯನ್ನು ಕೊಂದಿದ್ದರು. ಈ ತಿಂಗಳ ಆರಂಭದಲ್ಲಿ ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಡಜನ್ಗಟ್ಟಲೆ ಹೋರಾಟಗಾರರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ 8 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು.
ಇದನ್ನೂ ಓದಿ: Balochistan Blast: ಬಲೂಚಿಸ್ತಾನದ ಕಿಲಾ ಅಬ್ದುಲ್ಲಾ ಮಾರುಕಟ್ಟೆಯಲ್ಲಿ ಸ್ಫೋಟ, ಇಬ್ಬರು ಸಾವು, 11 ಮಂದಿಗೆ ಗಾಯ
ಬಲೂಚಿಸ್ತಾನದಲ್ಲಿ ಹಿಂಸಾತ್ಮಕ ದಾಳಿಗಳು ಹೆಚ್ಚುತ್ತಿವೆ. ಇತ್ತೀಚೆಗೆ, ಕರಾಚಿಯಿಂದ ಕ್ವೆಟ್ಟಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದರು, ಕಲಾತ್ ಪ್ರದೇಶದಲ್ಲಿ ಮೂವರು ಸಾವನ್ನಪ್ಪಿದರು ಮತ್ತು 7 ಮಂದಿ ಗಾಯಗೊಂಡರು. ಮತ್ತೊಂದು ಘಟನೆಯಲ್ಲಿ, ಕಿಲ್ಲಾ ಅಬ್ದುಲ್ಲಾ ಜಿಲ್ಲೆಯಲ್ಲಿ ನಡೆದ ಮಾರಕ ಮಾರುಕಟ್ಟೆ ಬಾಂಬ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡರು. ಜಬ್ಬಾರ್ ಮಾರುಕಟ್ಟೆ ಬಳಿಯ ಸ್ಫೋಟವು ಗಮನಾರ್ಹವಾದ ರಚನಾತ್ಮಕ ಹಾನಿಯನ್ನುಂಟುಮಾಡಿತು, ಹತ್ತಿರದ ಅಂಗಡಿಗಳು ಕುಸಿದವು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಬೆಂಕಿ ಕಾಣಿಸಿಕೊಂಡಿತು.
ಇದನ್ನೂ ಓದಿ: ಬಲೂಚಿಸ್ತಾನ: ಶಾಲಾ ಬಸ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರು ಮಕ್ಕಳು ಸಾವು, 38 ಮಂದಿಗೆ ಗಾಯ
2 ದಶಕಗಳಿಂದ ಬಲೂಚಿಸ್ತಾನ್ ಪಾಕಿಸ್ತಾನಿ ಆಡಳಿತದ ವಿರುದ್ಧ ಉಗ್ರ ಚಳುವಳಿಗೆ ನೆಲೆಯಾಗಿದೆ. ಸ್ವ-ನಿರ್ಣಯ ಚಳವಳಿಯನ್ನು ನಡೆಸುತ್ತಿರುವ ಕೆಲವು ಗುಂಪುಗಳು ಬಲೂಚ್ ಲಿಬರೇಶನ್ ಆರ್ಮಿ (BLA)ಯಂತಹ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿವೆ. ಈ ದಾಳಿಯ ಬಗ್ಗೆ ಇನ್ನೂ ಯಾವುದೇ ಸಂಘಟನೆ ಅಧಿಕೃತ ಹೊಣೆ ಹೊತ್ತಿಲ್ಲ. ತನಿಖೆಗಳು ನಡೆಯುತ್ತಿವೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




