ಜಗತ್ತಿನ ಮೇಲೆ ಕೊರೊನಾ ಹೇರಿದ ಚೀನಾ.. ಸೈಲೆಂಟಾಗಿ ಆರ್ಥಿಕತೆ ವೃದ್ಧಿಸಿಕೊಂಡಿದೆ!
ಇಡೀ ಜಗತ್ತಿಗೆ ಕೊರೊನಾ ವೈರಸ್ ಎಂಬ ಉಡುಗೊರೆ ನೀಡಿ ತತ್ತರಿಸಿ ಹೋಗುವಂತೆ ಮಾಡಿರುವ ಚೀನಾ ಎಲ್ಲರೂ ನಲುಗಿ ಹೋಗಿರುವ ಸಂದರ್ಭದಲ್ಲಿ ತನ್ನ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಚೀನಾದ ಆರ್ಥಿಕತೆ 2020ರ ಮೂರನೇ ತ್ರೈಮಾಸದಲ್ಲಿ (Q3) ಶೇಕಡಾ 4.9 ರಷ್ಟು ವೃದ್ಧಿಸಿದೆ. ಆರ್ಥಿಕ ತಜ್ಞರ ಪ್ರಕಾರ ಕಳೆದ ತ್ರೈಮಾಸಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಏರಿಕೆ ಸಹ ಕಂಡಿದೆ. ಕೊರೊನಾ ವೈರಸ್ನ ದಾಳಿಯಿಂದ ತತ್ತರಿಸಿ ಹೋಗಿದ್ದ ಚೀನಾದ ಆರ್ಥಿಕತೆ ದಶಕಗಳಲ್ಲಿ ಎಂದೂ ಕಂಡು ಕೇಳರಿಯದ […]
ಇಡೀ ಜಗತ್ತಿಗೆ ಕೊರೊನಾ ವೈರಸ್ ಎಂಬ ಉಡುಗೊರೆ ನೀಡಿ ತತ್ತರಿಸಿ ಹೋಗುವಂತೆ ಮಾಡಿರುವ ಚೀನಾ ಎಲ್ಲರೂ ನಲುಗಿ ಹೋಗಿರುವ ಸಂದರ್ಭದಲ್ಲಿ ತನ್ನ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಚೀನಾದ ಆರ್ಥಿಕತೆ 2020ರ ಮೂರನೇ ತ್ರೈಮಾಸದಲ್ಲಿ (Q3) ಶೇಕಡಾ 4.9 ರಷ್ಟು ವೃದ್ಧಿಸಿದೆ.
ಆರ್ಥಿಕ ತಜ್ಞರ ಪ್ರಕಾರ ಕಳೆದ ತ್ರೈಮಾಸಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಏರಿಕೆ ಸಹ ಕಂಡಿದೆ. ಕೊರೊನಾ ವೈರಸ್ನ ದಾಳಿಯಿಂದ ತತ್ತರಿಸಿ ಹೋಗಿದ್ದ ಚೀನಾದ ಆರ್ಥಿಕತೆ ದಶಕಗಳಲ್ಲಿ ಎಂದೂ ಕಂಡು ಕೇಳರಿಯದ ಹೊಡೆತ ತಿಂದಿತ್ತು. ಆದರೆ ಇದೀಗ, ತುಸು ಚೇತರಿಕೆ ಕಾಣುತ್ತಿದೆ.
ಮೂಲಗಳ ಪ್ರಕಾರ ತನ್ನ ಕುಸಿಯುತ್ತಿದ್ದ ಆರ್ಥಿಕತೆಯನ್ನು ಸರಿಪಡಿಸಲು ಚೀನಾ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದಿಂದ ಅನುದಾನ ಬಿಡುಗಡೆ, ತೆರಿಗೆ ವಿನಾಯಿತಿ ಹಾಗೂ ಸಾಲದ ಬಡ್ಡಿ ದರದಲ್ಲಿ ಕಡಿತ ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿಗೆ ತಂದು ಕುಸಿಯುತ್ತಿದ್ದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ಸು ಕಂಡಿದೆ.