ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ
ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್ವೆನ್-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್ ಮಾರ್ಚ್ ರಾಕೆಟ್ ಮೂಲಕ ಇಂದು […]
ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್ವೆನ್-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್ ಮಾರ್ಚ್ ರಾಕೆಟ್ ಮೂಲಕ ಇಂದು ಯಶಸ್ವಿ ಉಡ್ಡಯನ ಸಾಧಿಸಿದೆ. ವೆಂಚಾಂಗ್ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿದ ರಾಕೆಟ್ ಮುಖಾಂತರ ಈ ಉಪಗ್ರಹ ಮಂಗಳ ಗ್ರಹವನ್ನು ಮುಂದಿನ ಫೆಬ್ರವರಿಗೆ ತಲುಪಲಿದೆ.
ಸುಮಾರು 90 ದಿನಗಳ ಕಾಲ ಕಕ್ಷೆಯಲ್ಲಿ ಮಂಗಳನನ್ನ ಸುತ್ತಲಿದ್ದು ಈ ನಡುವೆ ಗ್ರಹದ ಮೇಲೆ ರೋವರ್ ವಾಹನವೊಂದನ್ನು ಲ್ಯಾಂಡ್ ಮಾಡಿಸಲಿದೆ. ಅಂದ ಹಾಗೆ, ಈ ಕಾರ್ಯದಲ್ಲಿ ಚೀನಾ ಯಶಸ್ಸು ಕಂಡರೆ ಇಡೀ ವಿಶ್ವದಲ್ಲಿ ಮಂಗಳ ಗ್ರಹವನ್ನು ಕಕ್ಷೆಯಲ್ಲಿ ಸುತ್ತಿ, ರೋವರ್ ಲ್ಯಾಂಡ್ ಮಾಡಿಸು ಪ್ರಪ್ರಥಮ ದೇಶವಾಗಲಿದೆ.
China has successfully launched a #Mars probe, aiming to complete orbiting, landing and roving in one mission, and taking the first step in its planetary exploration of the solar system. #Tianwen1 pic.twitter.com/GLY1FxUwUe
— China Xinhua News (@XHNews) July 23, 2020