Colombia Landslide: ಕೊಲಂಬಿಯಾದಲ್ಲಿ ಭಾರೀ ಭೂಕುಸಿತ, 34 ಜನರ ಸಾವು

| Updated By: ಆಯೇಷಾ ಬಾನು

Updated on: Dec 06, 2022 | 8:07 AM

ರಾಜಧಾನಿ ಬೊಗೋಟಾದಿಂದ ಸುಮಾರು 230ಕಿಮೀ ದೂರದ ರಿಸಾರಾಲ್ಡಾದ ಪ್ಯೂಬ್ಲೋ ರಿಕೊದಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಮಣ್ಣಿನಡಿಯಲ್ಲಿ ಸಿಲುಕಿ ಸಮಾಧಿಯಾಗಿದೆ. ಘಟನೆಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ

Colombia Landslide: ಕೊಲಂಬಿಯಾದಲ್ಲಿ ಭಾರೀ ಭೂಕುಸಿತ, 34 ಜನರ ಸಾವು
ಕೊಲಂಬಿಯಾದಲ್ಲಿ ಭಾರೀ ಭೂಕುಸಿತ, 34 ಜನರ ಸಾವು
Image Credit source: ABC News
Follow us on

ಕೊಲಂಬಿಯಾದಲ್ಲಿ ಭಾರೀ ಭೂಕುಸಿತ( Colombia Landslide) ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಮಣ್ಣಿನಡಿಯಲ್ಲಿ ಸಿಲುಕಿ ಸಮಾಧಿಯಾಗಿದೆ. ಘಟನೆಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಪ್ರಾಂತ್ಯದ ಚೋಕೊಗೆ ಹೋಗುವ ರಸ್ತೆಯಲ್ಲಿ ಭಾನುವಾರ ಮುಂಜಾನೆ ಭೂಕುಸಿತ ಸಂಭವಿಸಿತ್ತು. ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಘಟನೆ ಸಂಬಂಧ ಸೋಮವಾರದಂದು ಟ್ವೀಟ್‌ ಮಾಡಿ 27 ಜನ ಶವಗಳನ್ನು ಮಣ್ಣಿನಲ್ಲಿ ಸಿಲುಕಿರುವ ಬಸ್​ನಿಂದ ಹೊರ ತೆಗೆಯಲಾಗಿದೆ ಎಂದಿದ್ದರು. ಆದ್ರೆ ಈಗ ಸಾವಿನ ಸಂಖ್ಯೆ ಏರಿಕೆಯಾಗಿದೆ. 34 ಜನರು ಮೃತ ಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಸಾವಿನ ಸಂಖ್ಯೆ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.

ರಿಸಾರಾಲ್ಡಾದ ಪ್ಯೂಬ್ಲೋ ರಿಕೊದಲ್ಲಿ ನಡೆದ ದುರಂತದಲ್ಲಿ 3 ಅಪ್ರಾಪ್ತ ವಯಸ್ಕರು ಸೇರಿದಂತೆ 27 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ದುಃಖದಿಂದ ಘೋಷಿಸಬೇಕಾಗಿದೆ. ಸಂತ್ರಸ್ತರ ಕುಟುಂಬಗಳೊಂದಿಗೆ ಸರ್ಕಾರ ನಿಲ್ಲುತ್ತದೆ. ರಾಷ್ಟ್ರೀಯ ಸರ್ಕಾರದಿಂದ ಸಮಗ್ರ ಬೆಂಬಲವನ್ನು ನೀಡಲಾಗುತ್ತದೆ ಎಂದು ಪೆಟ್ರೋ ಈ ಹಿಂದೆ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಭೂ ಕುಸಿತ ತಡೆಗಟ್ಟಲು ಅರಣ್ಯ ಇಲಾಖೆಯಿಂದ ನೂತನ ಪ್ರಯೋಗ; ಡ್ರೋನ್ ಮೂಲಕ ಬೀಜ ಬಿತ್ತನೆ

ಇನ್ನು ರಾಜಧಾನಿ ಬೊಗೋಟಾದಿಂದ ಸುಮಾರು 230ಕಿಮೀ ದೂರದ ರಿಸಾರಾಲ್ಡಾದ ಪ್ಯೂಬ್ಲೋ ರಿಕೊದಲ್ಲಿ ನಡೆದ ಈ ಘಟನೆ ನಯನತಾರ ನಟನೆಯ O2 ಚಿತ್ರವನ್ನು ನೆನಪಿಸುತ್ತದೆ. ಸದ್ಯ ಬಸ್​ನಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಿಸಲಾಗಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ.

ಕೊಲಂಬಿಯಾದಲ್ಲಿ ಭಾರೀ ಮಳೆ ಸುರಿದಿದೆ, ಸರ್ಕಾರದ ಅಂಕಿಅಂಶಗಳ ಪ್ರಕಾರ, 2022 ರಲ್ಲಿ ಇಲ್ಲಿಯವರೆಗೆ ಭಾರೀ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 216 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 48 ಮಂದಿ ನಾಪತ್ತೆಯಾಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ