ಡೆಡ್ಲಿ ವೈರಸ್​ಗೆ ಬೆಚ್ಚಿಬಿದ್ದ ವಿಶ್ವ: ಕರುನಾಡಿನ ಮೇಲೂ ಕೊರೊನಾ ಕಾರ್ಮೋಡ!

ಹೆಜ್ಜೆ ಇಡೋಕೆ ಹೆದರಿಕೆ ಆಗ್ತಿದೆ. ಬಾಯ್ಬಿಡೋಕೆ ಭಯ ಶುರುವಾಗಿದೆ. ಶೇಕ್ ಹ್ಯಾಂಡ್​ ಮಾಡೋಕೆ ಶೇಕ್ ಆಗ್ತಿದ್ದಾರೆ. ಕುಂತ್ರೂ ನೆಮ್ಮದಿ ಇಲ್ಲ.. ನಿಂತ್ರೂ ನೆಮ್ಮದಿ ಇಲ್ಲ. ಆ ರೇಂಜಿಗೆ ಡೆಡ್ಲಿ ವೈರಸ್ ಕೊರೊನಾ ಎಲ್ಲರನ್ನೂ ನಡುಗಿಸ್ಬಿಟ್ಟಿದೆ. ವಿಶ್ವಕ್ಕೆ ವಿಶ್ವವನ್ನೇ ಸಾವಿನ ಮನೆ ಮಾಡಿ. ದೇಶಕ್ಕೇ ದೇಶವನ್ನೇ ದಿಗಿಲು ಬಡಿಸಿ.. ಕರುನಾಡಿನಲ್ಲಿ ಭಯ ಹುಟ್ಟಿಸಿರೋ ಕಿಲ್ಲರ್ ಕೊರೊನಾ ಭೀತಿ ಮತ್ತಷ್ಟು ಆವರಿಸಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಕಾರ್ಮೋಡ ಆವರಿಸಿದೆ. ಸಪ್ತಸಾಗರಗಳನ್ನ ದಾಟಿ ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಟ್ಟಿರೋ ರಾಕ್ಷಸ ವೈರಸ್ […]

ಡೆಡ್ಲಿ ವೈರಸ್​ಗೆ ಬೆಚ್ಚಿಬಿದ್ದ ವಿಶ್ವ: ಕರುನಾಡಿನ ಮೇಲೂ ಕೊರೊನಾ ಕಾರ್ಮೋಡ!
Follow us
ಸಾಧು ಶ್ರೀನಾಥ್​
|

Updated on: Mar 12, 2020 | 7:51 AM

ಹೆಜ್ಜೆ ಇಡೋಕೆ ಹೆದರಿಕೆ ಆಗ್ತಿದೆ. ಬಾಯ್ಬಿಡೋಕೆ ಭಯ ಶುರುವಾಗಿದೆ. ಶೇಕ್ ಹ್ಯಾಂಡ್​ ಮಾಡೋಕೆ ಶೇಕ್ ಆಗ್ತಿದ್ದಾರೆ. ಕುಂತ್ರೂ ನೆಮ್ಮದಿ ಇಲ್ಲ.. ನಿಂತ್ರೂ ನೆಮ್ಮದಿ ಇಲ್ಲ. ಆ ರೇಂಜಿಗೆ ಡೆಡ್ಲಿ ವೈರಸ್ ಕೊರೊನಾ ಎಲ್ಲರನ್ನೂ ನಡುಗಿಸ್ಬಿಟ್ಟಿದೆ. ವಿಶ್ವಕ್ಕೆ ವಿಶ್ವವನ್ನೇ ಸಾವಿನ ಮನೆ ಮಾಡಿ. ದೇಶಕ್ಕೇ ದೇಶವನ್ನೇ ದಿಗಿಲು ಬಡಿಸಿ.. ಕರುನಾಡಿನಲ್ಲಿ ಭಯ ಹುಟ್ಟಿಸಿರೋ ಕಿಲ್ಲರ್ ಕೊರೊನಾ ಭೀತಿ ಮತ್ತಷ್ಟು ಆವರಿಸಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಕಾರ್ಮೋಡ ಆವರಿಸಿದೆ. ಸಪ್ತಸಾಗರಗಳನ್ನ ದಾಟಿ ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಟ್ಟಿರೋ ರಾಕ್ಷಸ ವೈರಸ್ ಊರ ಬಾಗ್ಲ್ಲಲೇ ಕೂತು ಕಾಯ್ತಿದೆ. ಇದ್ರ ನಡುವೆ ಕಲಬುರಗಿಯಲ್ಲಿ ಕೊರೊನಾ ಸೋಂಕಿನ ಶಂಕಿತ ವ್ಯಕ್ತಿ ವೃದ್ಧನೋರ್ವ ಉಸಿರು ಚೆಲ್ಲಿರೋದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದ್ರಿಂದ ಅಲರ್ಟ್ ಆಗಿರೋ ರಾಜ್ಯ ಸರ್ಕಾರ ಕೊರೊನಾ ಕಂಟ್ರೋಲ್​ಗೆ ಸ್ಟ್ರಿಕ್​ ರೂಲ್ಸ್ ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸಿದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋ ಖಡಕ್ ಸಂದೇಶ ರವಾನಿಸಿದೆ.

‘ಕೊರೊನಾ’ ಕಂಟ್ರೋಲ್​​ಗೆ ರೂಲ್ಸ್..! ಡೆಡ್ಲಿ ವೈರಸ್ ಕಬಂಧಬಾಹು ಚಾಚೋದಕ್ಕೆ ಬ್ರೇಕ್ ಹಾಕೋಕೆ ಸರ್ಕಾರ ಎಪಿಡಮಿಕ್ ಡಿಸೀಸಸ್ ಕೋವಿಡ್-19 ನಿಯಂತ್ರಣ ತಕ್ಷಣದಿಂದಲೇ ಜಾರಿಗೆ ತಂದಿದೆ. ಎಪಿಡಮಿಕ್ ಡಿಸೀಸಸ್ ಕಾಯ್ದೆ 1897ರ ಅಡಿ ಅಧಿಸೂಚನೆ ಹೊರಡಿಸಿದ್ದು, ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ‌ಮಾಡಲೇಬೇಕು ಎನ್ನಲಾಗಿದೆ. ಆದ್ರೆ, ಖಾಸಗಿ ಲ್ಯಾಬ್‌ಗಳಲ್ಲಿ ಕೊರೊನಾ ಸೋಂಕನ್ನು ಪರೀಕ್ಷೆ ಮಾಡುವಂತಿಲ್ಲ. ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ಮಾಡಿ ಐಸೋಲೇಟ್ ಮಾಡಬೇಕು ಎನ್ನಲಾಗಿದೆ.

ಅಲ್ದೇ, ಐಸೋಲೇಟ್ ಮಾಡಿದ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳು ಮಾಹಿತಿ ನೀಡಬೇಕು. ಜೊತೆಗೆ ಆ ಸ್ಯಾಂಪಲ್‌ಗಳನ್ನು ಆರೋಗ್ಯ ಇಲಾಖೆಗೆ ನೀಡಬೇಕು ಅನ್ನೋ ರೂಲ್ಸ್ ಜಾರಿಗೆ ತರಲಾಗಿದೆ. ಯಾವುದೇ ವ್ಯಕ್ತಿ ವಿದೇಶಕ್ಕೆ ಹೋಗಿ ಬಂದರೆ ಮಾಹಿತಿ ನೀಡಬೇಕು, ಒಂದು ವೇಳೆ ಮಾಹಿತಿ ನೀಡದಿದ್ದರೆ ಅಪರಾಧವಾಗಲಿದೆ. ವಿದೇಶಕ್ಕೆ ಹೋಗಿ ಬಂದ 14 ದಿನಗಳೊಳಗೆ ಮಾಹಿತಿ ರಾಜ್ಯ ಸರ್ಕಾರಕ್ಕೆ ಅವರು ಮಾಹಿರಿ ನೀಡುವಂತೆ ನಿಯಮ ತರಲಾಗಿದೆ. ಕೊರೊನಾ ಲಕ್ಷಣ ಇಲ್ಲದಿದ್ರೂ ಅವರು ಮಾಹಿತಿ ನೀಡುವಂತೆ ಅಧಿಸೂಚನೆ ಹೊರಡಿಸಲಾಗಿದೆ.

ವದಂತಿಗೆ ಕಿವಿಗೊಡದಂತೆ ಆರೋಗ್ಯ ಇಲಾಖೆ ಸಂದೇಶ..! ಕೊರೊನಾ ವೈರಸ್ ಅಲ್ಲಿಗೆ ಬಂದಿದೆ, ಇಲ್ಲಿಗೆ ಬಂದಿದೆ.. ಅವ್ರಿಗೆ ಬಂದಿದೆ ಅನ್ನೋ ಸುದ್ದಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಆದ್ರೆ, ಕೆಲವು ವದಂತಿಗಳು ಕೂಡ ಹರಡ್ತಿರೋ ಹಿನ್ನೆಲೆಯಲ್ಲಿ ಅಧಿಕೃತ ಮಾಹಿತಿ ಬರೋವರೆಗೂ ಯಾವುದನ್ನೂ ನಂಬಂದಂತೆ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ನೀಡಿದೆ. ಕೊರೊನಾದಿಂದಾಗಿ ಶಾಲೆ, ಕಚೇರಿಗಳನ್ನ ಕ್ಲೋಸ್ ಮಾಡಿಲ್ಲ, ನಾವು ಅಧಿಕೃತವಾಗಿ ನೀಡುವ ಮಾಹಿತಿಯನ್ನಷ್ಟೇ ಪರಿಗಣಿಸಿ ಅನ್ನೋ ಸಂದೇಶ ರವಾನಿಸಿದೆ.

ಏಪ್ರಿಲ್ 15 ರವರೆಗೆ ಪ್ರವಾಸಿ ವೀಸಾಗೆ ನಿರ್ಬಂಧ..! ಇನ್ನು, ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ತಿರೋ ಕೇಂದ್ರ ಸರ್ಕಾರ, ಇದೀಗ ಎಲ್ಲಾ ದೇಶಗಳ ಪ್ರವಾಸಿ ವೀಸಾಗಳನ್ನು ರದ್ದುಗೊಳಿಸಿದೆ. ಮಾರ್ಚ್​ 13ರಿಂದ ಜಾರಿಗೆ ಬರಲಿದ್ದು, ಏಪ್ರಿಲ್ 15ರವರೆಗೆ ವೀಸಾ ನಿರ್ಬಂಧ ಹೇರಿದೆ. ರಾಜತಾಂತ್ರಿಕರು, ವಿಶ್ವಸಂಸ್ಥೆ ಪ್ರತಿನಿಧಿಗಳ ವೀಸಾಗಳಿಗೆ ರದ್ದತಿ ಅನ್ವಯಿಸಲ್ಲ ಅನ್ನೋ ಮಾಹಿತಿ ನೀಡಿದೆ. ಅಲ್ಲದೇ ಇಟಲಿ ಹಾಗೂ ಸೌತ್ ಕೊರಿಯಾಕ್ಕೆ ತೆರಳುವ ವಿಮಾನಗಳಿಗೆ ಬ್ರೇಕ್ ಹಾಕಲಾಗಿದೆ.

ಡೆಡ್ಲಿ ಕೊರೊನಾ ಸಾಂಕ್ರಾಮಿಕ ಮಹಾಮಾರಿ..! ಜಗತ್ತಿನಾದ್ಯಂತ ಜನರನ್ನ ಹಿಂಡಿ ಹಿಪ್ಪೆ ಮಾಡ್ತಿರೋ ಕೋವಿಡ್​-19 ವೈರಸ್ ಸರ್ವವ್ಯಾಪಿ ಸಾಂಕ್ರಾಮಿಕ ರೋಗ ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇದನ್ನು ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಜಾಗೃತರಾಗಬೇಕೆಂದು ಮನವಿ ಮಾಡಿದೆ.

‘ಕ್ರೂರಿ ಕೊರೊನಾ’ ಅಟ್ಟಹಾಸಕ್ಕೆ 4605 ಮಂದಿ ಬಲಿ..! ವಿಶ್ವವನ್ನೇ ತನ್ನ ಕಪಿಮುಷ್ಠಿಯೊಳಗಿಟ್ಟುಕೊಂಡು ಆಟವಾಡಿಸುತ್ತಿರೋ ಕೋವಿಡ್​​-19 ವೈರಸ್ ದಾಳಿಗೆ ಇದುವರೆಗೆ 4605 ಮಂದಿ ಉಸಿರು ಚೆಲ್ಲಿದ್ದಾರೆ. 1 ಲಕ್ಷದ 25 ಸಾವಿರದ 599 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

ಇಟಲಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 827ಕ್ಕೆ ಏರಿಕೆ..! ಇಟಲಿಯಲ್ಲಿ ಕೊರೊನಾ ವೈರಸ್ ದಾಳಿಗೆ ತುತ್ತಾಗಿರೋ ಜನರ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ. ಈವರೆಗೆ ಡೆಡ್ಲಿ ವೈರಸ್ ದಾಳಿಗೆ 827 ಮಂದಿ ಬಲಿಯಾಗಿದ್ದಾರೆ. ಅದ್ರಲ್ಲೂ ಕೇವಲ 24 ಗಂಟೆಯಲ್ಲಿ 196 ಜನರು ಕೊರೊನಾ ಅಟ್ಟಹಾಸಕ್ಕೆ ಸಾವಿನ ಮನೆ ಸೇರಿರೋದು ಬೆಚ್ಚಿ ಬೀಳಿಸಿದೆ.

ಒಟ್ನಲ್ಲಿ ಕರುನಾಡಿನಲ್ಲಿ ಕೊರೊನಾ ಕಾರ್ಮೋಡ ಆವರಿಸಿದ್ರೆ, ವಿಶ್ವಕ್ಕೆ ವಿಶ್ವನ್ನೇ ತಲ್ಲಣಗೊಳಿಸಿದೆ. ಡೆಡ್ಲಿ ವೈರಸ್ ಕೊರೊನಾ ತನ್ನ ಉಗ್ರರೂಪ ಇನ್ನೆಷ್ಟು ಮೆರೆಯುತ್ತೋ ಅನ್ನೋ ಆತಂಕ ಎಲ್ಲರನ್ನೂ ಆವರಿಸಿದಂತೂ ಸತ್ಯ.

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ