Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಾಪುರ: ಕೇವಲ 15 ದಿನಗಳಲ್ಲಿ 56,000 ಕೊರೊನಾ ಪ್ರಕರಣಗಳು ಪತ್ತೆ, ಚೀನಾದಲ್ಲಿ ಹೇಗಿದೆ ಪರಿಸ್ಥಿತಿ

ಸಿಂಗಾಪುರ(Singapore)ದಲ್ಲಿ ಮತ್ತೆ ಕೊರೊನಾ(Corona) ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಡಿಸೆಂಬರ್ ಆರಂಭದಿಂದ ಇಲ್ಲಿಯವರೆಗೆ 56,000 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್​ ಧರಿಸುವಂತೆ ಮನವಿ ಮಾಡಲಾಗಿದೆ. ಕಳೆದ ವಾರ ಈ ಸಂಖ್ಯೆ 32 ಸಾವಿರ ಆಗಿತ್ತು, ಇದೀಗ ಅದು 56 ಸಾವಿರಕ್ಕೇರಿದೆ. ಒಂದು ವಾರದಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಶೇಕಡಾ 75 ರಷ್ಟು ಹೆಚ್ಚಾಗಿದೆ. ಸಿಂಗಾಪುರ ಆರೋಗ್ಯ ಸಚಿವಾಲಯವು ಡಿಸೆಂಬರ್ ತಿಂಗಳಿನಿಂದ ಕೊರೊನಾ ಪ್ರಕರಣಗಳನ್ನು ಬಹಿರಂಗಪಡಿಸುತ್ತಿವೆ.

ಸಿಂಗಾಪುರ: ಕೇವಲ 15 ದಿನಗಳಲ್ಲಿ 56,000 ಕೊರೊನಾ ಪ್ರಕರಣಗಳು ಪತ್ತೆ, ಚೀನಾದಲ್ಲಿ ಹೇಗಿದೆ ಪರಿಸ್ಥಿತಿ
ಕೊರೊನಾImage Credit source: Reuters
Follow us
ನಯನಾ ರಾಜೀವ್
|

Updated on: Dec 16, 2023 | 11:12 AM

ಸಿಂಗಾಪುರ(Singapore)ದಲ್ಲಿ ಮತ್ತೆ ಕೊರೊನಾ(Corona) ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಡಿಸೆಂಬರ್ ಆರಂಭದಿಂದ ಇಲ್ಲಿಯವರೆಗೆ 56,000 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್​ ಧರಿಸುವಂತೆ ಮನವಿ ಮಾಡಲಾಗಿದೆ. ಕಳೆದ ವಾರ ಈ ಸಂಖ್ಯೆ 32 ಸಾವಿರ ಆಗಿತ್ತು, ಇದೀಗ ಅದು 56 ಸಾವಿರಕ್ಕೇರಿದೆ. ಒಂದು ವಾರದಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಶೇಕಡಾ 75 ರಷ್ಟು ಹೆಚ್ಚಾಗಿದೆ. ಸಿಂಗಾಪುರ ಆರೋಗ್ಯ ಸಚಿವಾಲಯವು ಡಿಸೆಂಬರ್ ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಬಹಿರಂಗಪಡಿಸುತ್ತಿವೆ.

ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಸಿಂಗಾಪುರ ಸರ್ಕಾರ ಜನರಿಗೆ ಸಲಹೆ ನೀಡಿದೆ. ಜನರು ಅನಾರೋಗ್ಯಕ್ಕೆ ಒಳಗಾಗದಿದ್ದರೂ ಸಹ, ಮಾಸ್ಕ್​ ಧರಿಸುವಂತೆ ಕೇಳಲಾಗಿದೆ. ಸಿಂಗಾಪುರದ ಆರೋಗ್ಯ ಸಚಿವಾಲಯವು ಶೀಘ್ರದಲ್ಲೇ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ಸಿಂಗಾಪುರ ಎಕ್ಸ್‌ಪೋ ಹಾಲ್ ಸಂಖ್ಯೆ 10 ರಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದೆ. ಕ್ರಾಫರ್ಡ್ ಆಸ್ಪತ್ರೆಯು ಈಗಾಗಲೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.

ಚೀನಾ ಪರಿಸ್ಥಿತಿ ಹೇಗಿದೆ? ಚೀನಾದಲ್ಲಿ ಹೊಸದಾಗಿ 7 ಪ್ರಕರಣಗಳು ಪತ್ತೆಯಾಗಿವೆ, ಕೊರೊನಾದ ಹೊಸ ರೂಪಾಂತರಿ JN-1ಪತ್ತೆಯಾಗಿದೆ. ಚೀನಾದಲ್ಲಿ ಇದು ಪ್ರಬಲವಾದ ತಳಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. JN.1 ಅನ್ನು ಮೊದಲು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೆಪ್ಟೆಂಬರ್ 2023 ರಲ್ಲಿ ಪತ್ತೆ ಮಾಡಲಾಯಿತು.

ಮತ್ತಷ್ಟು ಓದಿ: ಕೋವಿಡ್-19 ಆತಂಕ; ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಸಿಂಗಾಪುರ ಸರ್ಕಾರ

ಕೊರೊನಾವೈರಸ್‌ನ JN.1 ರೂಪಾಂತರವು ಇತರ ರೂಪಾಂತರಗಳಿಂದ ವಿಭಿನ್ನ ರೋಗಲಕ್ಷಣಗಳನ್ನು ಉಂಟುಮಾಡುತ್ತದೆಯೇ ಎಂಬುದು ಪ್ರಸ್ತುತ ತಿಳಿದಿಲ್ಲ. ಸಾಮಾನ್ಯವಾಗಿ, COVID-19 ನ ರೋಗಲಕ್ಷಣಗಳು ವಿವಿಧ ರೂಪಾಂತರಗಳನ್ನು ಹೋಲುತ್ತವೆ.

ಸಿಂಗಾಪುರದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ದಿನಕ್ಕೆ ಸರಾಸರಿ 225-350 ಆಗಿದೆ. ಸೋಂಕಿನಿಂದ ICU ಗೆ ದಾಖಲಾಗುವ ರೋಗಿಗಳ ದೈನಂದಿನ ಸರಾಸರಿ 4-9 ಆಗಿದೆ.

ಶುಕ್ರವಾರ ಭಾರತದಲ್ಲಿ 312 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ 280 ಪ್ರಕರಣಗಳು ದಾಖಲಾಗಿವೆ. ರೋಗಲಕ್ಷಣಗಳು ಗಂಭೀರವಾಗಿಲ್ಲ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 17605 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್