Covid-19 Updates: ಕೊವಿಡ್​ ಹೆಚ್ಚಳದಿಂದ ಬೀಜಿಂಗ್​ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತ

ಮೂರು ಡಜನ್ ಸುರಂಗಮಾರ್ಗ ನಿಲ್ದಾಣಗಳು ಮತ್ತು ಸುಮಾರು 150 ಬಸ್ ಮಾರ್ಗಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೀಜಿಂಗ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

Covid-19 Updates: ಕೊವಿಡ್​ ಹೆಚ್ಚಳದಿಂದ ಬೀಜಿಂಗ್​ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತ
ಕೊವಿಡ್-19
Follow us
| Updated By: ಸುಷ್ಮಾ ಚಕ್ರೆ

Updated on: May 04, 2022 | 3:59 PM

ಬೀಜಿಂಗ್: ಇಡೀ ವಿಶ್ವದಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕೊರೊನಾವೈರಸ್ (Coronavirus) ಪತ್ತೆಯಾಗಿತ್ತು. ಇದೀಗ ಬೇರೆ ದೇಶಗಳಲ್ಲಿ ಬಹುಪಾಲು ಜನರಿಗೆ ಕೊವಿಡ್ ಲಸಿಕೆಗಳನ್ನು (Covid-19 Vaccine) ಹಾಕಲಾಗಿದ್ದರೂ ಕೊವಿಡ್ 4ನೇ ಅಲೆ ಮತ್ತಷ್ಟು ಆತಂಕ ಮೂಡಿಸಿದೆ. ಇದರ ನಡುವೆ ಚೀನಾದಲ್ಲಿ ಮತ್ತೊಮ್ಮೆ ಕೊವಿಡ್ ಕೇಸುಗಳು ತಾರಕಕ್ಕೇರಿದ್ದು, ಕೊವಿಡ್ -19 ಕೇಸುಗಳ ಏರಿಕೆಯನ್ನು ತಡೆಗಟ್ಟಲು ಅಧಿಕಾರಿಗಳು ಜನಸಂಚಾರವನ್ನು ತಡೆಗಟ್ಟಲು ಡಜನ್​ಗಟ್ಟಲೆ ಸುರಂಗಮಾರ್ಗ ನಿಲ್ದಾಣಗಳು, ಬಸ್ ಮಾರ್ಗಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಬೀಜಿಂಗ್​ನ ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಮೂರು ಡಜನ್ ಸುರಂಗಮಾರ್ಗ ನಿಲ್ದಾಣಗಳು ಮತ್ತು ಸುಮಾರು 150 ಬಸ್ ಮಾರ್ಗಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೀಜಿಂಗ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಬೀಜಿಂಗ್​ನಲ್ಲಿ 500ಕ್ಕೂ ಹೆಚ್ಚು ಕೋವಿಡ್ -19 ಸೋಂಕುಗಳ ಕೇಸುಗಳು ದಾಖಲಾಗಿದೆ. ಸುಮಾರು 3.5 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಜನಸಂಖ್ಯೆಯ ಚಾಯಾಂಗ್ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬಂದ್ ಮಾಡಲಾಗಿದೆ. ಕೇಂದ್ರ ವ್ಯಾಪಾರ ಜಿಲ್ಲೆ, ರಾಯಭಾರ ಕಚೇರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಹೋಟೆಲ್‌ಗಳು ಮತ್ತು ಬಾರ್‌ಗಳು ಇರುವ ಚಾಯಾಂಗ್‌ನಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಬೀಜಿಂಗ್‌ನ 16 ಜಿಲ್ಲೆಗಳಲ್ಲಿ ಹನ್ನೆರಡು ಮಂಗಳವಾರದಿಂದ ಗುರುವಾರದವರೆಗೆ ಪ್ರತಿದಿನವೂ ಸತತವಾಗಿ ಮೂರು ಸುತ್ತಿನ ನ್ಯೂಕ್ಲಿಯಿಕ್ ಆಸಿಡ್ ಸ್ಕ್ರೀನಿಂಗ್ ಅನ್ನು ಹರಡುವುದನ್ನು ತಡೆಯಲು ಪ್ರಾರಂಭಿಸಿವೆ ಎಂದು ರಾಜ್ಯ ಮಾಧ್ಯಮ ವರದಿ ತಿಳಿಸಿದೆ. ಕಳೆದ 10 ದಿನಗಳಲ್ಲಿ ನಗರದ ಅನೇಕ ನಿವಾಸಿಗಳು ಈಗಾಗಲೇ ಕನಿಷ್ಠ ಐದು ಬಾರಿ ಪರೀಕ್ಷೆಗೆ ಒಳಗಾಗಿದ್ದಾರೆ. ಬೀಜಿಂಗ್​ನಲ್ಲಿ ಶಾಂಘೈನಂತೆ ವ್ಯಾಪಕವಾದ ಲಾಕ್​ಡೌನ್ ನಿಯಮಗಳನ್ನು ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ತಿಳಿಸಿದ್ದರೂ ಅನೇಕ ಪ್ರದೇಶಗಳಲ್ಲಿ ಶಟ್​ಡೌನ್ ಮಾಡಲಾಗಿದೆ.

ಹೀಗಾಗಿ, ಮುಂಬರುವ ಸಂಪೂರ್ಣ ಲಾಕ್‌ಡೌನ್ ಬಗ್ಗೆ ಇಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. ಬೀಜಿಂಗ್ ಚೀನಾದ ರಾಜಕೀಯ ಕೇಂದ್ರವಾಗಿದ್ದು, ಇಲ್ಲಿ ಕೊರೊನಾವೈರಸ್​ ಕೇಸುಗಳು ಹೆಚ್ಚು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇದರ ನಡುವೆ, ಚೀನಾದ ಹಣಕಾಸು ಕೇಂದ್ರ ಶಾಂಘೈನಲ್ಲಿ ಮಂಗಳವಾರ 260 ಕೋವಿಡ್ -19 ಪ್ರಕರಣಗಳು ಮತ್ತು 4,722 ಸ್ಥಳೀಯ ಲಕ್ಷಣರಹಿತ ಕೊವಿಡ್ ಪ್ರಕರಣಗಳು ವರದಿಯಾಗಿವೆ. ಶಾಂಘೈನಲ್ಲಿ ಕೊವಿಡ್ -19ನಿಂದ 16 ಸಾವುಗಳು ವರದಿಯಾಗಿವೆ. ಮಂಗಳವಾರದ ವೇಳೆಗೆ ಶಾಂಘೈನಲ್ಲಿ ಸಾವಿನ ಸಂಖ್ಯೆ 490ರಷ್ಟಿದೆ.

ಶಾಂಘೈನ ಹೆಚ್ಚಿನ ಭಾಗದಲ್ಲಿ ಕಟ್ಟುನಿಟ್ಟಾದ ಲಾಕ್​ಡೌನ್ ಘೋಷಿಸಲಾಗಿದೆ. ಆದರೂ ಕೆಲವು ಪ್ರದೇಶಗಳಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಬರಲು ಅವಕಾಶ ನೀಡಲಾಗಿದೆ. ಸುಮಾರು 25 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಶಾಂಘೈ ನಗರದಲ್ಲಿ ಕೊರೋನಾವೈರಸ್‌ನ ಹೊಸ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಇದರಿಂದಾಗಿ ಮಾರ್ಚ್ 1ರಿಂದ ಶಾಂಘೈನಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಜನರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಜನರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೊವಿಡ್ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು