ಅಲ್ಬೇನಿಯಾ ಭೀಕರ ಭೂಕಂಪ: ಮೃತರ ಸಂಖ್ಯೆ 30ಕ್ಕೆ ಏರಿಕೆ

ಅಲ್ಬೇನಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಇನ್ನು ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳು ಧರೆಗುರುಳಿವೆ. Rescue teams and dogs continue search for #Albania quake survivors in #Durres pic.twitter.com/kgTQHN8D20 — Ruptly (@Ruptly) November 28, 2019 ಕೊನೆಗೂ ಉಳಿಯಲಿಲ್ಲ.. ಚಿಕಿತ್ಸೆ ಫಲಿಸಲಿಲ್ಲ.. ಆಸ್ಟ್ರೆಲಿಯಾದಲ್ಲಿ ಭೀಕರ ಕಾಡ್ಗಿಚ್ಚಿಗೆ ಲಕ್ಷಾಂತರ ಹೆಕ್ಟೆರ್ ಕಾಡು ಭಸ್ಮವಾಗಿ, ಸಾವಿರಾರು ಪ್ರಬೇಧದ ಜೀವ […]

ಅಲ್ಬೇನಿಯಾ ಭೀಕರ ಭೂಕಂಪ: ಮೃತರ ಸಂಖ್ಯೆ 30ಕ್ಕೆ ಏರಿಕೆ
sadhu srinath

|

Nov 28, 2019 | 10:16 AM

ಅಲ್ಬೇನಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಇನ್ನು ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳು ಧರೆಗುರುಳಿವೆ.

ಕೊನೆಗೂ ಉಳಿಯಲಿಲ್ಲ.. ಚಿಕಿತ್ಸೆ ಫಲಿಸಲಿಲ್ಲ.. ಆಸ್ಟ್ರೆಲಿಯಾದಲ್ಲಿ ಭೀಕರ ಕಾಡ್ಗಿಚ್ಚಿಗೆ ಲಕ್ಷಾಂತರ ಹೆಕ್ಟೆರ್ ಕಾಡು ಭಸ್ಮವಾಗಿ, ಸಾವಿರಾರು ಪ್ರಬೇಧದ ಜೀವ ಸಂಕುಲ ನಾಶವಾಗಿದೆ. ಇನ್ನು ಇತ್ತೀಚೆಗೆ ಕಾಡ್ಗಿಚ್ಚಿನಲ್ಲಿ ಕೋಲಾ ಒಂದನ್ನ ರಕ್ಷಣೆ ಮಾಡಲಾಗಿತ್ತು. ಆದ್ರೆ ಸುಟ್ಟಗಾಯಗಳಿಂದಾಗಿ ತೀವ್ರವಾಗಿ ಬಳಲಿದ್ದ ಕೋಲಾ, ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಅಮೆರಿಕದ ಟೆಕ್ಸಾಸ್​ನಲ್ಲಿ ರಾಸಾಯನಿಕ ಕಾರ್ಖಾನೆಯೊಂದು ಸ್ಫೋಟಗೊಂಡಿದ್ದು, ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿಯ ತೀವ್ರತೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಹೊಗೆ ಆವರಿಸಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.

‘ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ ಇಲ್ಲ’ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವುದಿಲ್ಲ ಅಂತಾ ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್‌ ಲೋಕಸಭೆಗೆ ತಿಳಿಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡುವ ಅಧಿಕಾರ ಕೇಂದ್ರಕ್ಕಿದೆ ಎಂಬುದನ್ನ ಪುನರುಚ್ಚರಿಸಿದ್ದಾರೆ.

ಚಿದು ನ್ಯಾಯಾಂಗ ಬಂಧನ ವಿಸ್ತರಣೆ ಐಎನ್​ಎಕ್ಸ್ ಹಗರಣಕ್ಕೆ ಸಂಬಂಧಪಟ್ಟಂತೆ ಚಿದಂಬರಂಗೆ ವಿಧಿಸಲಾಗಿರುವ ನ್ಯಾಯಾಂಗ ಬಂಧನದ ಅವಧಿಯನ್ನು ಡಿಸೆಂಬರ್ 11ರವರೆಗೂ ವಿಸ್ತರಿಸಲಾಗಿದೆ. ಇಡಿ ಮನವಿಯನ್ನ ನ್ಯಾಯಾಲಯ ಒಪ್ಪಿದ್ದು, ತಿಹಾರ್​ನಲ್ಲಿರುವ ಚಿದು ಭೇಟಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ತೆರಳಿದ್ದರು.

ಸಂಸದೆ ವಿರುದ್ಧ ವಿಪಕ್ಷಗಳ ಸಿಟ್ಟು ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದ ಗೋಡ್ಸೆಯನ್ನ ಮತ್ತೆ ದೇಶಭಕ್ತನೆಂದು ಸಾಧ್ವಿ ಪ್ರಜ್ಞಾ ಠಾಕೂರ್ ಪುನರುಚ್ಚರಿಸಿದ್ದಾರೆ. ಸಂಸತ್​ನಲ್ಲಿ ಪ್ರಜ್ಞಾ ನೀಡಿರುವ ಈ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಹಿಂದೆ ಲೋಕಸಭಾ ಚುನಾವಣೆ ವೇಳೆಯೂ ಪ್ರಜ್ಞಾ ಗೋಡ್ಸೆಯನ್ನ ದೇಶಭಕ್ತನೆಂದಿದ್ದರು, ಖುದ್ದು ಪ್ರಧಾನಿಯೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

‘ಬೆಳವಣಿಗೆ ನಿಧಾನವಾಗಿದೆ, ಹಿಂಜರಿತವಲ್ಲ’ ದೇಶದ ಆರ್ಥಿಕ ಬೆಳವಣಿಗೆ ನಿಧಾನವಾಗಿದೆಯೇ ಹೊರತು, ಆರ್ಥಿಕ ಹಿಂಜರಿತವಾಗಿಲ್ಲ ಅಂತಾ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮಾನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಯುಪಿಎ ಸರ್ಕಾರಕ್ಕಿಂತ ನಮ್ಮ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಸಾಕಷ್ಟು ಕ್ರಮ ಕೈಗೊಂಡಿದೆ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada