ಸಂಯೋಜನೆಗೊಂಡ ಡೆಲ್ಟಾ ಮತ್ತು ಒಮಿಕ್ರಾನ್​; ಸೈಪ್ರಸ್​​ನಲ್ಲಿ ಕೊವಿಡ್​ 19ನ ಹೊಸ ತಳಿ ಡೆಲ್ಟಾಕ್ರಾನ್​ ಪತ್ತೆ !

ಸಂಯೋಜನೆಗೊಂಡ ಡೆಲ್ಟಾ ಮತ್ತು ಒಮಿಕ್ರಾನ್​; ಸೈಪ್ರಸ್​​ನಲ್ಲಿ ಕೊವಿಡ್​ 19ನ ಹೊಸ ತಳಿ ಡೆಲ್ಟಾಕ್ರಾನ್​ ಪತ್ತೆ !
ಪ್ರಾತಿನಿಧಿಕ ಚಿತ್ರ

ಶುಕ್ರವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಕೊಸ್ಟ್ರಿಕಿಸ್​, ನಾವೀಗ ಒಮಿಕ್ರಾನ್​ ಮತ್ತು ಡೆಲ್ಟಾದ ಸಂಯೋಜನೆಯಿಂದ ಉಂಟಾದ ಒಂದು ಹೊಸ ತಳಿಯನ್ನು ಕಂಡುಕೊಂಡಿದ್ದೇವೆ. ಅದಕ್ಕೆ ಡೆಲ್ಟಾಕ್ರಾನ್​ ಎಂದು ಹೆಸರಿಸಲಾಗಿದೆ ಎಂದಿದ್ದಾರೆ.

TV9kannada Web Team

| Edited By: Lakshmi Hegde

Jan 10, 2022 | 1:17 PM

ಕೊವಿಡ್​ 19ನ ವಿವಿಧ ರೂಪಾಂತರ ವೈರಸ್​ಗಳು ದಾಂಗುಡಿ ಇಟ್ಟರೂ, ಅತ್ಯಂತ ಹೆಚ್ಚು  ಪ್ರಸರಣಗೊಂಡು ಆತಂಕ ಸೃಷ್ಟಿಸಿರುವ ತಳಿಗಳೆಂದರೆ ಡೆಲ್ಟಾ ಮತ್ತು ಒಮಿಕ್ರಾನ್​. ಅದರಲ್ಲೂ ಒಮಿಕ್ರಾನ್​ನ ಹಬ್ಬುವಿಕೆ ಅತ್ಯಂತ ವೇಗವಾಗಿದೆ. ಆದರೆ ಈ ಬೆನ್ನಲ್ಲೇ ಯುರೋಪ್​​ನ ದ್ವೀಪ ರಾಷ್ಟ್ರವಾದ ಸೈಪ್ರಸ್​​ನಲ್ಲಿ ಇನ್ನೊಂದು ಕೊವಿಡ್​ 19ನ ಇನ್ನೊಂದು ತಳಿ ಕಾಣಿಸಿಕೊಂಡಿದೆ. ಅದು ಡೆಲ್ಟಾ ಮತ್ತು ಒಮಿಕ್ರಾನ್​ ವೈರಸ್​ಗಳ ಸಂಯೋಜಿತ ತಳಿಯಾಗಿದ್ದು, ಡೆಲ್ಟಾಕ್ರಾನ್ (​Deltacron) ಎಂದು ಹೆಸರಿಡಲಾಗಿದೆ ಎಂದು ಸೈಪ್ರಸ್ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ ಪ್ರಯೋಗಾಲಯದ ಮುಖ್ಯಸ್ಥ ಆಗಿರುವ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ತಿಳಿಸಿದ್ದಾರೆ. 

ಶುಕ್ರವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಕೊಸ್ಟ್ರಿಕಿಸ್​, ನಾವೀಗ ಒಮಿಕ್ರಾನ್​ ಮತ್ತು ಡೆಲ್ಟಾದ ಸಂಯೋಜನೆಯಿಂದ ಉಂಟಾದ ಒಂದು ಹೊಸ ತಳಿಯನ್ನು ಕಂಡುಕೊಂಡಿದ್ದೇವೆ. ಅದಕ್ಕೆ ಡೆಲ್ಟಾಕ್ರಾನ್​ ಎಂದು ಹೆಸರಿಸಲಾಗಿದೆ. ಡೆಲ್ಟಾ ಜಿನೋಮ್​​ಗಳಲ್ಲಿ ಒಮಿಕ್ರಾನ್ ಮಾದರಿಯ ಜೆನೆಟಿಕ್​ ಸಿಗ್ನಿಚರ್​ಗಳು ಕಂಡುಬಂದಿದ್ದರಿಂದ ಈ ಹೆಸರಿಡಲಾಗಿದೆ. ಸದ್ಯ ಸೈಪ್ರಸ್​​ನಲ್ಲಿ 25 ಡೆಲ್ಟಾಕ್ರಾನ್​ ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದ್ದಾರೆ.  ಕೊವಿಡ್​ 19 ಸೋಂಕಿನ ಸೌಮ್ಯ ಲಕ್ಷಣಗಳಿದ್ದು, ಆಸ್ಪತ್ರೆಗೆ ದಾಖಲಾಗದೆ ಇರುವವರಿಗಿಂತ, ಕೊರೊನಾ ಗಂಭೀರ ಸ್ವರೂಪಗಳಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಈ ಡೆಲ್ಟಾಕ್ರಾನ್​ ಕಾಣಿಸಿಕೊಂಡಿದೆ ಎಂದೂ ತಿಳಿಸಿದ್ದಾರೆ. ಜಾಗತಿಕ ವಿಜ್ಞಾನ ಉಪಕ್ರಮ ಮತ್ತು ಪ್ರಾಥಮಿಕ ಮೂಲವಾದ ಜಿಐಎಸ್​ಎಐಡಿಗೆ ಈ 25ಜನರ ಮಾದರಿಗಳನ್ನು ಕಳಿಸಿಕೊಡಲಾಗಿದೆ. ಅದು ವೈರಸ್​​ ಬದಲಾವಣೆಯನ್ನು ಟ್ರ್ಯಾಕ್​ ಮಾಡುತ್ತದೆ. ಡೆಲ್ಟಾಕ್ರಾನ್​ ಎಂಬುದು ಭವಿಷ್ಯದಲ್ಲಿ ಎಷ್ಟು ಗಂಭೀರವಾಗಬಹುದು? ಪ್ರಸರಣದ ವೇಗ ಎಷ್ಟು? ಒಮಿಕ್ರಾನ್​ ಮತ್ತು ಡೆಲ್ಟಾಕ್ಕಿಂತಲೂ ಭಿಕರವಾ? ಎಂಬಿತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದೂ ಕೊಸ್ಟ್ರಿಕಿಸ್ ಹೇಳಿದ್ದಾರೆ. ಉಳಿದ ವಿಜ್ಞಾನಿಗಳು ಈ ಸೋಂಕು ಪ್ರಯೋಗಾಲಯದಲ್ಲಿನ ಕಲ್ಮಷದಿಂದ ಪತ್ತೆಯಾಗಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಕೊಸ್ಟ್ರಿಕಿಸ್​ ಮಾತ್ರ ಡೆಲ್ಟಾಕ್ರಾನ್​ ಇದೆ ಎಂಬುದನ್ನು ದೃಢವಾಗಿಯೇ ತಿಳಿಸಿದ್ದಾರೆ.

ಇದನ್ನೂ ಓದಿ: Coronavirus: ಕೋವಿಡ್​ ತಡೆಗಟ್ಟುವ ಡಯೆಟ್​ ಫುಡ್​​ನಲ್ಲಿ ಹೆಚ್ಚು ಪ್ರೋಟೀನ್​ಯುಕ್ತ ಆಹಾರವಿರಲಿ

Follow us on

Most Read Stories

Click on your DTH Provider to Add TV9 Kannada