ಪಾಕ್ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥನ ನಡುವೆ ಮನಸ್ತಾಪ; ಮಾತುಕತೆ ನಡೆದರೂ ಮುಗಿಯದ ಭಿನ್ನಾಭಿಪ್ರಾಯ
ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಗೆ, ಐಎಸ್ಐ ನೂತನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಗೈರಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳೂ ವರದಿ ಮಾಡಿವೆ.
ಪಾಕಿಸ್ತಾನ ಸರ್ಕಾರ ಅಲ್ಲಿನ ಸೇನೆಯ ಕೈಯಲ್ಲೇ ಇರುತ್ತದೆ. ಪ್ರಧಾನಮಂತ್ರಿಯಿದ್ದರೂ ಅವರು ಸೇನಾ ಮುಖ್ಯಸ್ಥರಿಗೆ ವಿಧೇಯರಾಗಿಯೇ ಇರಬೇಕು ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಒಂದು ಸಣ್ಣ ವಿಷಯಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Pakistan PM Imran Khan) ಮತ್ತು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಾಜ್ವಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ (ISI)ಗೆ ಮುಖ್ಯಸ್ಥರನ್ನು ನೇಮಕ ಮಾಡುವ ಸಂಬಂಧ ಈ ಸಂಘರ್ಷ ಪ್ರಾರಂಭವಾಗಿದೆ ಎಂದೂ ಗೊತ್ತಾಗಿದೆ.
ಐಎಸ್ಐಗೆ ನೂತನ ಮಹಾ ನಿರ್ದೇಶಕರನ್ನಾಗಿ (DG) ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ರನ್ನು ನೇಮಕ ಮಾಡಲಾಗಿದೆ ಎಂದು ಅಕ್ಟೋಬರ್ 6ರಂದು ಪಾಕಿಸ್ತಾನದ ಸಶಸ್ತ್ರ ಪಡೆಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಶನ್ಸ್ ಘೋಷಿಸಿತ್ತು. ಆದರೆ ಈ ನೇಮಕಾತಿಯನ್ನು ಪ್ರಧಾನಮಂತ್ರಿ ಇಮ್ರಾನ್ ಖಾನ್ ತಿರಸ್ಕರಿಸಿದ್ದಾರೆ. ಐಎಸ್ಐ ಡಿಜಿಯನ್ನು ನೇಮಕ ಮಾಡುವ ಹಕ್ಕು ಪ್ರಧಾನಿಗೆ ಇದೆ. ಹೀಗಾಗಿ ಸಶಸ್ತ್ರಪಡೆಯ ನೇಮಕವನ್ನು ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಒಂದು ಹಂತದ ಸ್ಥಿರತೆಗೆ ಬರುವವರೆಗೂ ಡಿಜಿ ಬದಲಾವಣೆ ಮಾಡುವುದು ಬೇಡ. ಈಗಿರುವ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ರೇ ಐಎಸ್ಐನ ಡಿಜಿಯಾಗಿ ಮುಂದುವರಿಯಲಿ ಎಂದೂ ಹೇಳಿದ್ದಾರೆ. ಇದು ಸೇನಾ ಮುಖ್ಯಸ್ಥನ ಅಸಮಾಧಾನಕ್ಕೆ ಕಾರಣವಾಗಿದೆ.
ಐಎಸ್ಐ ಮುಖ್ಯಸ್ಥನ ನೇಮಕಕ್ಕೆ ಸಂಬಂಧಪಟ್ಟಂತೆ ತಮ್ಮಿಬ್ಬರ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲು ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಮತ್ತು ಇಮ್ರಾನ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಅದಕ್ಕೊಂದು ಪರಿಹಾರ ಸಿಗುತ್ತಿಲ್ಲ. ಈ ಮಧ್ಯೆ ನಡೆದ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಗೆ, ಐಎಸ್ಐ ನೂತನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಗೈರಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳೂ ವರದಿ ಮಾಡಿವೆ. ಈ ಮಧ್ಯೆ ಪಾಕಿಸ್ತಾನ ಮಾಹಿತಿ ಸಚಿವ ಫಾವಾದ್ ಚೌಧರಿ ಟ್ವೀಟ್ ಮಾಡಿ, ಐಎಸ್ಐಗೆ ಹೊಸ ಡಿಜಿ ನೇಮಕ ಸಂಬಂಧ ನಾಗರಿಕಯಾನ ಮತ್ತು ಸೇನಾ ನಾಯಕತ್ವದ ನಡುವಿನ ಸಮಾಲೋಚನೆ ಮುಕ್ತಾಯಗೊಂಡಿದ್ದು, ಡಿಜಿ ನೇಮಕ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರ್ಯನ್ ಖಾನ್ ಜತೆ ಸೆಲ್ಫಿ ಕ್ಲಿಕ್ಕಿಸಿದ ‘ಡಿಟೆಕ್ಟಿವ್’ ಕಿರಣ್ ಗೋಸಾವಿಗೆ ಪುಣೆ ಪೊಲೀಸರಿಂದ ಲುಕೌಟ್ ನೋಟಿಸ್
Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ; ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ