Syrian Earthquake: ಅವಶೇಷಗಳಡಿಯಲ್ಲಿ ಜನಿಸಿದ ಸಿರಿಯನ್ ಮಗುವಿಗಿಟ್ಟ ಹೆಸರೇನು ಗೊತ್ತಾ? ಈ ಮಗುವಿನ ಜನನ ಮಿರಾಕಲ್

ಮಹಿಳೆಯೊಬ್ಬರು ತಮ್ಮ ಮನೆಯ ಅವಶೇಷಗಳಡಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ತಾಯಿ ಸಾವನ್ನಪ್ಪಿದ್ದಾರೆ. ಇದೀಗ ಮಗುವಿಗೆ "ಆಯಾ" ಎಂದು ಹೆಸರನ್ನು ಇಡಲಾಗಿದೆ. ಸಿರಿಯಾದ ಜೆಂಡರಿಸ್ ಪಟ್ಟಣದಲ್ಲಿ ನಡೆದ ಭೂಕಂಪದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಮಗುವಿನ ತಾಯಿಯ ಜೊತೆಗೆ ಮಗುವನ್ನು ರಕ್ಷಿಸಲಾಗಿದೆ.

Syrian Earthquake: ಅವಶೇಷಗಳಡಿಯಲ್ಲಿ ಜನಿಸಿದ ಸಿರಿಯನ್ ಮಗುವಿಗಿಟ್ಟ ಹೆಸರೇನು ಗೊತ್ತಾ? ಈ ಮಗುವಿನ ಜನನ ಮಿರಾಕಲ್
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 10, 2023 | 10:38 AM

ಸಿರಿಯಾ: ಭೂಕಂಪದಿಂದ ನಲುಗಿರುವ ಟಿರ್ಕಿ ಮತ್ತು ಸಿರಿಯಾ (Syrian Earthquake) ಬಹಳ ತೊಂದರೆಯನ್ನು ಅನುಭವಿಸಿದೆ, ಅದೆಷ್ಟೋ ಜನ ಮನೆ, ಪ್ರಾಣ, ಕುಟುಂಬವನ್ನು ಕಳೆದುಕೊಂಡಿದ್ದಾರೆ. ಟಿರ್ಕಿಯಲ್ಲಿ ಒಂದು ಪರಿಸ್ಥಿತಿಯಾದರೆ, ಸಿರಿಯಾದಲ್ಲಿ ಇನ್ನೊಂದು ಕಥೆ, ಹೌದು ಸಿರಿಯಾದಲ್ಲಿ ಒಂದು ಕರುಣಾಜನಕ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತಮ್ಮ ಮನೆಯ ಅವಶೇಷಗಳಡಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ತಾಯಿ ಸಾವನ್ನಪ್ಪಿದ್ದಾರೆ. ಇದೀಗ ಮಗುವಿಗೆ “ಆಯಾ” ಎಂದು ಹೆಸರನ್ನು ಇಡಲಾಗಿದೆ. ಸಿರಿಯಾದ ಜೆಂಡರಿಸ್ ಪಟ್ಟಣದಲ್ಲಿ ನಡೆದ ಭೂಕಂಪದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಮಗುವಿನ ತಾಯಿಯ ಜೊತೆಗೆ ಮಗುವನ್ನು ರಕ್ಷಿಸಲಾಗಿದೆ. ಈ ಭೂಕಂಪದಲ್ಲಿ ಆಕೆಯ ತಂದೆ ಮತ್ತು ಒಡಹುಟ್ಟಿದವರು ಸಹ ಸಾವನ್ನಪ್ಪಿದರು. ಆಕೆಗೆ ಆಯಾ ಎಂದು ಹೆಸರಿಸಲಾಗಿದೆ, ಇದರರ್ಥ ಇಂಗ್ಲಿಷ್‌ನಲ್ಲಿ ‘ಮಿರಾಕಲ್’.

ಮಗುವಿನ ತಂದೆಯ ಚಿಕ್ಕಪ್ಪ ವಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಮಗುವಿನ ಹತ್ತಿರದ ಕುಟುಂಬದ ಸದಸ್ಯರೆಲ್ಲರೂ ಸಾವನ್ನಪ್ಪಿದ್ದಾರೆ. ಭೂಕಂಪದಲ್ಲಿ ಸಲಾಹ್ ಅಲ್-ಬದ್ರನ್ ಅವರ ಸ್ವಂತ ಮನೆ ನಾಶವಾಗಿದ್ದು, ಪ್ರಸ್ತುತ ಅವರು ತಮ್ಮ ಕುಟುಂಬದೊಂದಿಗೆ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

ಮಗುವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಸಿದಿರುವ ನಾಲ್ಕು ಅಂತಸ್ತಿನ ಕಟ್ಟಡದ ಅವಶೇಷಗಳ ಮೇಲೆ ಒಬ್ಬ ವ್ಯಕ್ತಿಯು ಧೂಳಿನಿಂದ ಆವೃತವಾದ ಪುಟ್ಟ ಮಗುವನ್ನು ಹಿಡಿದುಕೊಂಡು ಓಡುತ್ತಿರುವುದನ್ನು ದೃಶ್ಯಾವಳಿಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಹೆಣ್ಣು ಮಗುವನ್ನು ಸಾವಿರಾರು ಜನರು ದತ್ತು ಪಡೆಯಲು ಮುಂದಾಗಿದ್ದರು. ವೈದ್ಯರೊಬ್ಬರ ಪತ್ನಿ ತನ್ನ ಮಗುವಿನ ಜೊತೆಗೆ ಮಿರಾಕಲ್ ಗೂ ಹಾಲುಣಿಸಿದ್ದಾಳೆ.

ಇದನ್ನೂ ಓದಿ:Turkey-Syria earthquake: ಟರ್ಕಿಯಲ್ಲಿ ಜೂಲಿ, ರೋಮಿಯೋ, ಹನಿ, ರಾಂಬೊ, ಮಹತ್ವದ ಕಾರ್ಯಚರಣೆಯಲ್ಲಿ ಭಾರತದ ಶ್ವಾನದಳ

ಸೋಮವಾರದ 7.8 ತೀವ್ರತೆಯ ಭೂಕಂಪದಿಂದ ಅನಾಥವಾಗಿರುವ ಮಕ್ಕಳಲ್ಲಿ ಅಯಾ ಕೂಡ ಒಬ್ಬರು. UN ಮಕ್ಕಳ ಏಜೆನ್ಸಿ, UNICEF, ಇದು ಅವರ ಪೋಷಕರು ಕಾಣೆಯಾದ ಮತ್ತು ಸಾವನ್ನಪ್ಪಿರುವ ಮಕ್ಕಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದರ ಜೊತೆಗೆ ಅವರಿಗೆ ಸಂಬಂಧಿದ ಕುಟುಂಬದ ಸದಸ್ಯರನ್ನು ಪತ್ತೆ ಮಾಡುತ್ತಿದೆ. ಟರ್ಕಿ-ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 21,000 ದಾಟಿದೆ. ಅವಶೇಷಗಳಡಿಯಲ್ಲಿ ಇನ್ನೂ ಸಿಲುಕಿರುವವರನ್ನು ರಕ್ಷಿಸಲು ನಾಲ್ಕನೇ ದಿನವೂ ರಕ್ಷಣಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಭಾರತವೂ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ.

Published On - 10:38 am, Fri, 10 February 23