Donald Trump: ಹಣಕಾಸು ಅವ್ಯವಹಾರ ಸೇರಿ 34 ಪ್ರಕರಣಗಳಲ್ಲಿ ಡೊನಾಲ್ಡ್ ಟ್ರಂಪ್ ತಪ್ಪಿತಸ್ಥ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಶ್ ಮನಿ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ಪ್ರಕರಣದ ಎರಡು ದಿನಗಳ ವಿಚಾರಣೆಯ ಬಳಿಕ 12 ಸದಸ್ಯರ ಪೀಠ ಎಲ್ಲಾ 34 ಆರೋಪಗಳಲ್ಲಿ ಅವರನ್ನು ದೋಷಿ ಎಂದು ಘೋಷಿಸಿದೆ.
ಹಶ್ ಮನಿ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ಪ್ರಕರಣದ ಎರಡು ದಿನಗಳ ವಿಚಾರಣೆಯ ಬಳಿಕ 12 ಸದಸ್ಯರ ಪೀಠ ಎಲ್ಲಾ 34 ಆರೋಪಗಳಲ್ಲಿ ಅವರನ್ನು ದೋಷಿ ಎಂದು ಘೋಷಿಸಿದೆ.
ಹಾಲಿ ಅಥವಾ ಮಾಜಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲು. 2016ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಪೋರ್ನ್ ಸ್ಟಾರ್ ಸ್ಟ್ರೋಮಿ ಡೇನಿಯಲ್ಸ್ ಜೊತೆ ಸಂಬಂಧವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ ಮತ್ತು ಅದನ್ನು ಮರೆಮಾಡಲು ಅವರು ಹಣವನ್ನು ಸ್ಟೋರ್ಮಿಗೆ ಪಾವತಿಸಿದ್ದರು ಎಂದು ಆರೋಪಿಸಲಾಗಿದೆ.
ಒಟ್ಟಿನಲ್ಲಿ ಎಲ್ಲಾ 34 ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂಬುದು ಸಾಬೀತಾಗಿದೆ. ದಾಖಲೆಗಳನ್ನು ತಿದ್ದಿದ ಎಲ್ಲಾ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಅವರು ಸ್ಟಾರ್ಮಿ ಡೇನಿಯಲ್ಸ್ ಜತೆಗಿನ ಸಂಬಂಧವನ್ನು ಕೂಡ ನಿರಾಕರಿಸಿದ್ದಾರೆ. ನ್ಯಾ. ಜುವಾನ್ ಮಾರ್ಚೆನ್ ಜುಲೈ 11ರಂದು ಶಿಕ್ಷೆ ಪ್ರಕಟಿಸಲಿದ್ದಾರೆ. ಜುಲೈ 15ರಂದು ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶ ಪ್ರಾರಂಭವಾಗಲಿರುವ ಸಮಯದಲ್ಲಿ ಟ್ರಂಪ್ ವಿರುದ್ಧ ನಿರ್ಧಾರ ಪ್ರಕಟವಾಗುತ್ತದೆ. ಇದರಲ್ಲಿ ಟ್ರಂಪ್ ಹೆಸರನ್ನು ಪಕ್ಷವು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸುತ್ತದೆ.
ಮತ್ತಷ್ಟು ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಉತ್ಸುಕರಾಗಿದ್ದ ಡೊನಾಲ್ಡ್ ಟ್ರಂಪ್ಗೆ ಭಾರೀ ಹಿನ್ನಡೆ
ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್ ಹೊರಗೆ ಟ್ರಂಪ್ ಹೇಳಿದ್ದಾರೆ. ನಾನೊಬ್ಬ ಮುಗ್ದ ವ್ಯಕ್ತಿ, ಹೋರಾಟ ಮಾಡುತ್ತೇನೆ, ಕೊನೆಯವರೆಗೂ ಹೋರಾಡಿ ಗೆಲ್ಲುತ್ತೇನೆ. ನವೆಂಬರ್ 5ರಂದು ದೇಶದ ಜನತೆ ನಿಜವಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಈ ಪ್ರಕರಣದಲ್ಲಿ ಟ್ರಂಪ್ಗೆ ಗರಿಷ್ಠ ನಾಲ್ಕು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಆದರೆ ಜೈಲಿನಲ್ಲಿದ್ದರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರಮಾಣವಚನ ಸ್ವೀಕಾರ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಘಟನೆ ಏನು? ಡೊನಾಲ್ಡ್ ಟ್ರಂಪ್ 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಜತೆ ಲೈಂಗಿಕ ಸಂಬಂಧ ಹೊದಿದ್ದರು. 2016ರ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಈ ವಿಷಯವು ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಈ ಘಟನೆಯನ್ನು ಬಹಿರಂಗಗೊಳಿಸುವುದಾಗಿ ಸ್ಟಾರ್ಮಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಅವರಿಗೆ ರಹಸ್ಯವಾಗಿ ಟ್ರಂಪ್ ಹಣ ನೀಡಿದ್ದರು. ಇದನ್ನು ಮರೆ ಮಾಚಲು ಟ್ರಂಪ್ ಸುಳ್ಳು ದಾಖಲೆ ಸೃಷ್ಟಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ