ಚೀನಾದಿಂದ ಅಮೆರಿಕಕ್ಕೆ ಅಪರೂಪದ ಖನಿಜಗಳ ಪೂರೈಕೆ; ಒಪ್ಪಂದ ಮುಗಿದಿದೆ ಎಂದ ಟ್ರಂಪ್
ಚೀನಾದೊಂದಿಗೆ ಅಮೆರಿಕ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಚೀನಾ ಅಮೆರಿಕಕ್ಕೆ ಅಗತ್ಯವಿರುವ ಅಪರೂಪದ ಖನಿಜಗಳನ್ನು ಪೂರೈಸಲಿದೆ. ಚೀನಾದ ಸರಕುಗಳ ಮೇಲಿನ ಸುಂಕಗಳು ಶೇ. 55ರಷ್ಟು ಹೆಚ್ಚಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಚೀನಾದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡುವುದೇ ಈ ಒಪ್ಪಂದವಾಗಿದೆ.

ವಾಷಿಂಗ್ಟನ್, ಜೂನ್ 11: ಅಮೆರಿಕ (United States) ಮತ್ತು ಚೀನಾ (China) ದೇಶಗಳ ನಡುವೆ ಮಹತ್ವದ ಒಪ್ಪಂದ ನಡೆದಿದೆ. ಭೂಮಿಯ ಅಪರೂಪದ ಖನಿಜಗಳನ್ನು ಪೂರೈಕೆ ಮಾಡುವುದಾಗಿ ಅಮೆರಿಕದ ಜೊತೆ ಚೀನಾ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಚೀನಾದ ವಿದ್ಯಾರ್ಥಿಗಳಿಗೆ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಅನುಮತಿ ನೀಡಲಾಗಿದೆ. ಈ ಕುರಿತು ಚೀನಾದೊಂದಿಗೆ ಒಪ್ಪಂದ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ದೃಢಪಡಿಸಿದ್ದಾರೆ.
ಈ ವ್ಯಾಪಾರ ಒಪ್ಪಂದದ ಭಾಗವಾಗಿ, ಚೀನಾ ಅಮೆರಿಕಕ್ಕೆ ಅಪರೂಪದ ಖನಿಜಗಳನ್ನು ಮುಂಚಿತವಾಗಿ ಪೂರೈಸುತ್ತದೆ. ಹಾಗೇ ಚೀನಾದ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಅಮೆರಿಕ ಅನುಮತಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಬಗ್ಗೆ ಟ್ರೂ ಸೋಶಿಯಲ್ ಪೋಸ್ಟ್‌ನಲ್ಲಿ ತಿಳಿಸಿರುವ ಟ್ರಂಪ್, ಚೀನಾ ಅಮೆರಿಕಕ್ಕೆ ಪೂರ್ಣ ಆಯಸ್ಕಾಂತಗಳು ಮತ್ತು ಅಗತ್ಯವಿರುವ ಎಲ್ಲಾ ಅಪರೂಪದ ಭೂಮಿಯ ಖನಿಜಗಳನ್ನು ಪೂರೈಸುತ್ತದೆ ಎಂದು ಘೋಷಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಮೆರಿಕವು ಚೀನಾದ ವಿದ್ಯಾರ್ಥಿಗಳಿಗೆ ಅಮೇರಿಕನ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ನೀಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಅತ್ಯಂತ ಬಡತನದಲ್ಲಿದೆ; ವಿಶ್ವ ಬ್ಯಾಂಕ್ ಬಹಿರಂಗಪಡಿಸಿದ ಆಘಾತಕಾರಿ ಮಾಹಿತಿ ಇಲ್ಲಿದೆ
“ಚೀನಾದೊಂದಿಗಿನ ನಮ್ಮ ಒಪ್ಪಂದವು ಅಧ್ಯಕ್ಷ ಕ್ಸಿ ಮತ್ತು ನನ್ನ ಅಂತಿಮ ಅನುಮೋದನೆಗೆ ಒಳಪಟ್ಟಿರುತ್ತದೆ. ಪೂರ್ಣ ಆಯಸ್ಕಾಂತಗಳು ಮತ್ತು ಅಗತ್ಯವಿರುವ ಯಾವುದೇ ಅಪರೂಪದ ಭೂಮಿಯ ಖನಿಜಗಳನ್ನು ಚೀನಾ ಅಮೆರಿಕಕ್ಕೆ ಪೂರೈಸುತ್ತದೆ. ಅದೇ ರೀತಿ, ನಮ್ಮ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ಚೀನೀ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಕಾಶ ನೀಡಿದ್ದೇವೆ. ಇದರಿಂದ ನಮಗೆ ಒಟ್ಟು 55% ಸುಂಕದ ಲಾಭ ಸಿಗುತ್ತಿವೆ, ಚೀನಾಕ್ಕೆ 10% ಸುಂಕದ ಲಾಭ ಸಿಗುತ್ತಿದೆ. ಈ ಸಂಬಂಧವು ಅತ್ಯುತ್ತಮವಾಗಿದೆ!” ಎಂದು ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 pm, Wed, 11 June 25








