ವ್ಹೈಟ್ ಹೌಸ್​ನಿಂದ ಹೊರಬಿದ್ದ ನಂತರವೂ ಕಿಮ್ ಜಾಂಗ್-ಉನ್ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು ಡೊನಾಲ್ಡ್ ಟ್ರಂಪ್: ವರದಿ

ಟ್ರಂಪ್ ಅವರ ಬದುಕಿನ ಮೇಲೆ, ‘ದಿ ಕಾನ್ಫಿಡೆನ್ಸ್ ಮ್ಯಾನ್’ ಎಂಬ ಪುಸ್ತಕ ಬರೆಯುತ್ತಿರುವ ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ಮ್ಯಾಗಿ ಹ್ಯಾಬರ್ಮನ್ ಅವರು ಸಿಎನ್ಎನ್ ಗೆ ನೀಡಿರುವ ಒಂದು ಸಂದರ್ಶನದಲ್ಲಿ, ‘ನನಗೆ ಗೊತ್ತಿರುವ ಹಾಗೆ ಅವರು ಈ ಸಂಬಂಧದ ಬಗ್ಗೆ ಅವರಲ್ಲಿ ಗೀಳು ಹುಟ್ಟಿಕೊಂಡಿದೆ’ ಎಂದು ಹೇಳಿದ್ದಾರೆ.

ವ್ಹೈಟ್ ಹೌಸ್​ನಿಂದ ಹೊರಬಿದ್ದ ನಂತರವೂ ಕಿಮ್ ಜಾಂಗ್-ಉನ್ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು ಡೊನಾಲ್ಡ್ ಟ್ರಂಪ್: ವರದಿ
ಡೊನಾಲ್ಡ್​ ಟ್ರಂಪ್​ ಮತ್ತು ಕಿಮ್ ಜಾಂಗ್​-ಉನ್
Follow us
TV9 Web
| Updated By: shivaprasad.hs

Updated on: Feb 11, 2022 | 7:27 AM

ನಾವು ಮೊನ್ನೆಯಷ್ಟೇ ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉತ್ತರ ಕೊರಿಯಾದ (North Korea) ಸರ್ವಾಧಿಕಾರಿ ಕಿಮ್ ಜಾಂಗ್-ಉನ್ (Kim Jang-Un) ನಡುವಿನ ಸ್ನೇಹಕ್ಕೂ ಮಿಗಿಲಾದ ಸಂಬಂಧದ ಬಗ್ಗೆ ಚರ್ಚಿಸಿದ್ದೆವು. ಅದಕ್ಕೆ ಪೂರಕವಾಗಿ ಗುರುವಾರ ನಮಗೆ ವರದಿಯೊಂದು ಯುಎಸ್ ನಿಂದ ಲಭ್ಯವಾಗಿದ್ದು ಅದರ ಪ್ರಕಾರ ಟ್ರಂಪ್ ತಾವು ವ್ಹೈಟ್ ಹೌಸ್ ನಿಂದ ಹೊರಬಿದ್ದ ನಂತರವೂ ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಿಮ್ ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ತಮ್ಮ ಆಪ್ತರಿಗೆ ಹೇಳಿದ್ದಾರಂತೆ. ಟ್ರಂಪ್ ಮತ್ತು ಕಿಮ್ ನಡುವಿನ ಸಂಬಂಧ ಜನರಲ್ಲಿ ಕೆಟ್ಟ ಕುತೂಹಲ ಸೃಷ್ಟಿಸಿದೆ. ಅಸಲಿಗೆ ಈ ಸಂಬಂಧದ ಸ್ವರೂಪ ಎಂಥದ್ದು ಅಂತ ಚರ್ಚೆಗಳು ನಡೆದಿವೆ. ಏತನ್ಮಧ್ಯೆ ಉತ್ತರ ಕೊರಿಯ ನಡೆಸಿರುವ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕವನ್ನು ಹೆಚ್ಚಿಸಿದೆ.

ಟ್ರಂಪ್ ಅವರ ಬದುಕಿನ ಮೇಲೆ, ‘ದಿ ಕಾನ್ಫಿಡೆನ್ಸ್ ಮ್ಯಾನ್’ ಎಂಬ ಪುಸ್ತಕ ಬರೆಯುತ್ತಿರುವ ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ಮ್ಯಾಗಿ ಹ್ಯಾಬರ್ಮನ್ ಅವರು ಸಿಎನ್ಎನ್ ಗೆ ನೀಡಿರುವ ಒಂದು ಸಂದರ್ಶನದಲ್ಲಿ, ‘ನನಗೆ ಗೊತ್ತಿರುವ ಹಾಗೆ ಅವರು ಈ ಸಂಬಂಧದ ಬಗ್ಗೆ ಅವರಲ್ಲಿ ಗೀಳು ಹುಟ್ಟಿಕೊಂಡಿದೆ’ ಎಂದು ಹೇಳಿದ್ದಾರೆ. ತಮ್ಮ ಪುಸ್ತಕದಲ್ಲಿ ಅವರು ಟ್ರಂಪ್-ಕಿಮ್ ಸಂಬಂಧದ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆ ಇದೆ.

ತಮ್ಮ ನಡುವಿನ ಪತ್ರಗಳ ವಿನಿಮಯದ ನಂತರ ತಾನು ಮತ್ತು ಕಿಮ್ ‘ಪ್ರೀತಿಯಲ್ಲಿ ಬಿದ್ದೆವು’ ಎಂದು 2018 ರಲ್ಲಿ ಟ್ರಂಪ್ ಹೇಳಿದ್ದು ಬಹು ಚರ್ಚಿತ ವಿಷಯವಾಗಿತ್ತು. ಆದರೆ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಅಣ್ವಸ್ತ್ರೀಕರಣಗೊಳಿಸುವ ಉದ್ದೇಶದಿಂದ ಉತ್ತರ ಕೊರಿಯಾದ ನಾಯಕನೊಂದಿಗೆ ಟ್ರಂಪ್ ನಡೆಸಿದ ಎರಡು ಸಭೆಗಳು ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ಮತ್ತು ಕಿಮ್ ಅವರ ನಿಷ್ಠುರ ವಾಕ್ಚಾತುರ್ಯ ತಡೆಯಲು ವಿಫಲವಾದವು.

ಟ್ರಂಪ್ ಅವರ ಆ ಪ್ರಸಿದ್ದ ಹೇಳಿಕೆಯನ್ನು ಸರಿಯಾಗಿ ಪರಾಮರ್ಶೆ ನಡೆಸಲು ಆಗಿಲ್ಲ, ಅವರು ಹೇಳಿದ್ದು ಸುಳ್ಳಾಗಿರುವ ಸಾಧ್ಯತೆಯೂ ಇದೆ, ಎಂದು ಹ್ಯಾಬರ್ಮನ್ ಹೇಳಿದ್ದಾರೆ.

‘ಅವರ ಏನು ಹೇಳುತ್ತಾರೆ ಮತ್ತು ಅಸಲಿಗೆ ಜರುಗುವ ಸಂಗತಿಗಳ ನಡುವೆ ಬಹಳ ಸಲ ಹೊಂದಾಣಿಕೆ ಕಂಡಿಲ್ಲ, ಅದರೆ ಕಿಮ್ ಜಾಂಗ್-ಉನ್ ಜೊತೆ ತಾನು ಪತ್ರ ವ್ಯವಹಾರ ಇಟ್ಟುಕೊಂಡಿರುವುದಾಗಿ ಅವರು ಹೇಳುತ್ತಲೇ ಇದ್ದಾರೆ,’ ಎಂದು ಹ್ಯಾಬರ್ಮನ್ ಹೇಳಿದ್ದಾರೆ.

ಕಿಮ್ ಅವರು; ಟ್ರಂಪ್ ಈಗಲೂ ಸಂಪರ್ಕದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಏಕಮಾತ್ರ ವಿದೇಶಿ ನಾಯಕನಾಗಿದ್ದಾರೆ.

ನ್ಯಾಶನಲ್ ಆರ್ಖೈವ್ಸ್ ಇಲಾಖೆಯು ಕಳೆದ ತಿಂಗಳು ಟ್ರಂಪ್ ಅವರ ಫ್ಲೋರಿಡಾ ನಿವಾಸದಿಂದ ಬರಾಮತ್ತು ಮಾಡಿಕೊಂಡಿರುವ 15 ಪೆಟ್ಟಿಗೆಗಳಷ್ಟು ಅಧ್ಯಕ್ಷೀಯ ದಾಖಲೆಗಳನ್ನು ಅವರು ಕಿಮ್ ರೊಂದಿಗೆ ನಡೆಸಿದ ಪತ್ರ ವ್ಯವಹಾರವೂ ಸೇರಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಪ್ಯೊಂಗ್ಯಾಂಗ್‌ ಎಡೆಬಿಡದ ಕ್ಷಿಪಣಿ ಪ್ರಯೋಗಗಳ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಕಿಮ್ ಅವರೊಂದಿಗೆ ಇಟ್ಟುಕೊಂಡಿದ್ದ ಪತ್ರ ವ್ಯವಹಾರ ಅಸ್ವಾಭಾವಿಕ ಮತ್ತು ದಿಗಿಲು ಮೂಡಿಸುವ ವಿಷಯವಾಗಿದೆ. ನ್ಯೂಕ್ಲಿಯರ್ ಅಸ್ತ್ರಗಳು ಸುಧಾರಿತ ಕ್ಷಿಪಣಿಗಳನ್ನು ಹೊಂದಿರುವ ಕೆಲವೇ ರಾಷ್ಟ್ರಗಳ ಪೈಕಿ ನಾನೂ ಒಂದಾಗಿದ್ದು ಕ್ಷಿಪಣಿಗಳ ಪರೀಕ್ಷಣೆಯಲ್ಲಿ ಯುಎಸ್ ಜೊತೆ ಸರಿಸಮನಾಗಿ ನಿಂತು ಇಡೀ ವಿಶ್ವದಲ್ಲಿ ತಲ್ಲಣ ಸೃಷ್ಟಿಸುತ್ತಿದ್ದೇವೆ ಎಂದು ಮಂಗಳವಾರ ಉತ್ತರ ಕೊರಿಯಾ ಕೊಚ್ಚಿಕೊಂಡಿತ್ತು.

ಕಿಮ್ ಜೊತೆ ಹೊಂದಿರುವ ಸಂಬಂಧದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಯುಎಸ್ ಮಾಧ್ಯಮಗಳು ಪ್ರಯತ್ನಿಸುತ್ತಿವೆಯಾದರೂ ಅವರ ಪ್ರತಿನಿಧಿಯಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ.

ಇದನ್ನೂ ಓದಿ:  ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕೊರಿಯ ನಾಯಕ ಕಿಮ್ ಜಾಂಗ್-ಉನ್ ನಡುವೆ ಸ್ನೇಹಕ್ಕೂ ಮಿಗಿಲಾದ ಸಂಬಂಧವಿತ್ತೇ?

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್