ಮುಂದಿನ ವಾರ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ; 2024ರ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರಾ ಅಮೆರಿಕಾದ ಮಾಜಿ ಅಧ್ಯಕ್ಷ?

| Updated By: ಸುಷ್ಮಾ ಚಕ್ರೆ

Updated on: Nov 08, 2022 | 10:24 AM

ಈ ವರ್ಷದ ಮಧ್ಯಂತರ ಚುನಾವಣೆ ಇಂದು ನಡೆಯಲಿದೆ. ಈ ಮತದಾನದ ಅಂತಿಮ ದಿನಕ್ಕೂ ಮೊದಲು ಓಹಿಯೋದಲ್ಲಿ ಪ್ರಚಾರ ಮಾಡುವಾಗ ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಮುಂದಿನ ವಾರ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ; 2024ರ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರಾ ಅಮೆರಿಕಾದ ಮಾಜಿ ಅಧ್ಯಕ್ಷ?
ಡೊನಾಲ್ಡ್​ ಟ್ರಂಪ್
Follow us on

ಕ್ಯಾಲಿಫೋರ್ನಿಯಾ: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮುಂದಿನ ವಾರ “ಬಹಳ ದೊಡ್ಡ ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ಸೋಮವಾರ ಸುಳಿವು ನೀಡಿರುವ ಡೊನಾಲ್ಡ್​ ಟ್ರಂಪ್ 2024ರಲ್ಲಿ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ (US President Election 2024) ಸ್ಪರ್ಧೆ ಮಾಡುವ ನಿರೀಕ್ಷೆಯಿದೆ. 2020ರಲ್ಲಿ ಸೋತಿದ್ದ ಡೊನಾಲ್ಡ್​ ಟ್ರಂಪ್ ಮರುಚುನಾವಣೆಯ ಪ್ರಯತ್ನದ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ, ಇದೀಗ ತಾನು ಮತ್ತೆ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧ ಎಂದು ಸುಳಿವು ನೀಡಿದ್ದಾರೆ.

“ನ. 8ರಂದು ನಡೆಯಲಿರುವ ಅತ್ಯಂತ ಮಹತ್ವದ, ನಿರ್ಣಾಯಕ ಚುನಾವಣೆಗೆ ನಾವು ಯಾವುದೇ ಅಡ್ಡಿ ಮಾಡುವುದಿಲ್ಲ. ನಾನು ನವೆಂಬರ್ 15ರಂದು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಮಾರ್-ಎ-ಲಾಗೋದಲ್ಲಿ ಬಹಳ ದೊಡ್ಡ ಘೋಷಣೆ ಮಾಡಲಿದ್ದೇನೆ” ಎಂದು ಟ್ರಂಪ್ ಓಹಿಯೋದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಹೇಳಿದ್ದಾರೆ.

ಈ ವರ್ಷದ ಮಧ್ಯಂತರ ಚುನಾವಣೆ ಇಂದು ನಡೆಯಲಿದೆ. ಈ ಮತದಾನದ ಅಂತಿಮ ದಿನಕ್ಕೂ ಮೊದಲು ಓಹಿಯೋದಲ್ಲಿ ಪ್ರಚಾರ ಮಾಡುವಾಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ದೋಷಾರೋಪಣೆಗಳಿಗೆ ಕಾರಣವಾಗಬಹುದಾದ ಹಲವಾರು ತನಿಖೆಗಳು ಸೇರಿದಂತೆ ಕಾನೂನು ಸವಾಲುಗಳ ಸರಣಿಯನ್ನು ಎದುರಿಸುತ್ತಿರುವ ಡೊನಾಲ್ಡ್​ ಟ್ರಂಪ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಫ್ಲೋರಿಡಾದಲ್ಲಿರುವ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಂಗಲೆಯ ಮೇಲೆ ಎಫ್​​ಬಿಐ ದಾಳಿ

ಅಮೆರಿಕಾದಲ್ಲಿ ಸಂಸತ್ತಿನ ಕೆಳಮನೆಗೆ ಇಂದು (ನ. 8) ನಡೆಯುತ್ತಿರುವ ಮಧ್ಯಂತರ ಚುನಾವಣೆಯಲ್ಲಿ ಭಾರತ ಮೂಲದ ಐವರು ಪ್ರಭಾವಿ ರಾಜಕಾರಣಿಗಳು ಸ್ಪರ್ಧಿಸುತ್ತಿದ್ದಾರೆ. ಈ ಐವರ ಗೆಲುವು ಬಹುತೇಕ ಖಚಿತವಾಗಿದೆ. ಡೆಮಾಕ್ರಟಿಕ್ ಪಾರ್ಟಿಯ ಅಮಿ ಬೆರಾ, ರಾಜಾ ಕೃಷ್ಣಮೂರ್ತಿ, ಥಾಣೇದಾರ್, ರೋ ಖನ್ನಾ, ಪ್ರಮೀಳಾ ಜಯಪಾಲ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಈ ಉಪ ಚುನಾವಣೆಯು 2024ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ