AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತವು ಅಮೆರಿಕ ನಿರ್ಮಿತ ಭದ್ರತಾ ಸಾಧನಗಳನ್ನು ಖರೀದಿ ಮಾಡುತ್ತಿದೆ. ಸೋಮವಾರ ಸಂಜೆ ಇಬ್ಬರು ನಾಯಕರ ನಡುವೆ ನಡೆದ ದೂರವಾಣಿ ಕರೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜನವರಿ 20 ರಂದು ಯುಎಸ್ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿದ ನಂತರ ಟ್ರಂಪ್ ಅವರೊಂದಿಗೆ ಮೋದಿಯವರ ಮೊದಲ ಸಂಭಾಷಣೆ ಇದಾಗಿದೆ.

ಅಮೆರಿಕಕ್ಕೆ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆ
ಡೊನಾಲ್ಡ್​ ಟ್ರಂಪ್ Image Credit source: Mint
ನಯನಾ ರಾಜೀವ್
|

Updated on:Jan 28, 2025 | 9:07 AM

Share

ಅಮೆರಿಕದ ಶ್ವೇತ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಭಾರತವು ಅಮೆರಿಕ ನಿರ್ಮಿತ ಭದ್ರತಾ ಸಾಧನಗಳನ್ನು ಖರೀದಿ ಮಾಡುತ್ತಿದೆ. ಸೋಮವಾರ ಸಂಜೆ ಇಬ್ಬರು ನಾಯಕರ ನಡುವೆ ನಡೆದ ದೂರವಾಣಿ ಕರೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜನವರಿ 20 ರಂದು ಯುಎಸ್ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿದ ನಂತರ ಟ್ರಂಪ್ ಅವರೊಂದಿಗೆ ಮೋದಿಯವರ ಮೊದಲ ಸಂಭಾಷಣೆ ಇದಾಗಿದೆ.

ಇದರಲ್ಲಿ ವಿವಿಧ ದೇಶಗಳ ಮೇಲೆ ಸುಂಕಗಳು ಮತ್ತು ನಿರ್ಬಂಧಗಳ  ಮಧ್ಯೆ ಅವರು ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಮತ್ತು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು. ಅಮೆರಿಕ ನಿರ್ಮಿತ ಭದ್ರತಾ ಸಲಕರಣೆಗಳ ಖರೀದಿಯನ್ನು ಹೆಚ್ಚಿಸುವ ಮತ್ತು ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧದತ್ತ ಸಾಗುವ ಭಾರತದ ಪ್ರಾಮುಖ್ಯತೆಯನ್ನು ಅಧ್ಯಕ್ಷರು ಒತ್ತಿ ಹೇಳಿದರು.

ಮೋದಿ ಅವರು ಶೀಘ್ರದಲ್ಲೇ ಯುಎಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ, ಅದರ ನಂತರ ಟ್ರಂಪ್ ಮುಂದಿನ ಸುತ್ತಿನ ಕ್ವಾಡ್ ಶೃಂಗಸಭೆಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ವಾಷಿಂಗ್ಟನ್‌ಗೆ ಭೇಟಿ ನೀಡಬಹುದು ಎಂದು ಟ್ರಂಪ್ ಹೇಳಿದ್ದರು. ಆದರೆ ಭಾರತ ಇದನ್ನು ಇನ್ನೂ ಖಚಿತಪಡಿಸಿಲ್ಲ. ಟ್ರಂಪ್ ಆಡಳಿತದ ಎರಡನೇ ಅಧಿಕಾರಾವಧಿಯಲ್ಲಿ, ಭಾರತವು ಯುನೈಟೆಡ್ ಸ್ಟೇಟ್ಸ್‌ನಿಂದ ಹಲವಾರು ರಕ್ಷಣಾ ಸಾಧನಗಳನ್ನು ಖರೀದಿಸುವ ನಿರೀಕ್ಷೆಯಿದೆ.

ಮತ್ತಷ್ಟು ಓದಿ:ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ; ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಚರ್ಚೆ

ನಾವು ಪರಸ್ಪರ ಲಾಭದಾಯಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧರಾಗಿದ್ದೇವೆ. ನಮ್ಮ ಜನರ ಕಲ್ಯಾಣಕ್ಕಾಗಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಹಕಾರವನ್ನು ವಿಸ್ತರಿಸುವ ಮತ್ತು ಆಳವಾಗಿಸುವ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಅವರು ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಯುರೋಪ್ನಲ್ಲಿ ಭದ್ರತೆ ಸೇರಿದಂತೆ ಹಲವಾರು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:02 am, Tue, 28 January 25