AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ರೂ. 6 ಕೋಟಿ ಹಣವಿದ್ದ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದುಕೊಟ್ಟ ಭಾರತೀಯ ಅಲ್ಲಿನ ಪೊಲೀಸರಿಂದ ಭೇಷ್ ಅನಿಸಿಕೊಂಡರು!

ನಯೀಫ್ ಪೊಲೀಸ್ ಠಾಣೆಯ ನಿರ್ದೇಶಕರಾಗಿರುವ ಮೇಜರ್ ಜನರಲ್ ತಾರಿಖ್ ತಹ್ಲಕ್ ಅವರು ನೀಡಿರುವ ಹೇಳಿಕೆಯೊಂದರ ಪ್ರಕಾರ, ಏಷ್ಯಾ ಮೂಲದ ಇಬ್ಬರು ವ್ಯಕ್ತಿಗಳು ನಯೀಫ್ ಪ್ರದೇಶದಲ್ಲಿ ಬೇರೆ ಬೇರೆ ದೇಶಗಳ ಕರೆನ್ಸಿಯ ಸುಮಾರು 4,250,000 ಡಿರ್ಹಾಮ್ ಮೊತ್ತದಷ್ಟು ಹಣವನ್ನು ಎರಡು ಬ್ಯಾಗ್​ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಕಳ್ಳತನದ ಪ್ರಕರಣ ನಡೆದಿತ್ತು.

ದುಬೈನಲ್ಲಿ ರೂ. 6 ಕೋಟಿ ಹಣವಿದ್ದ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದುಕೊಟ್ಟ ಭಾರತೀಯ ಅಲ್ಲಿನ ಪೊಲೀಸರಿಂದ ಭೇಷ್ ಅನಿಸಿಕೊಂಡರು!
ದುಬೈ ಪೊಲೀಸರಿಂದ ಚವಾಡಗೆ ಸತ್ಕಾರImage Credit source: Times Now
TV9 Web
| Edited By: |

Updated on: Nov 26, 2022 | 2:22 PM

Share

ದುಬೈ: ಭಾರತೀಯರು ಯಾವ ದೇಶದಲ್ಲಿದ್ದರೂ ಧೈರ್ಯಶಾಲಿಗಳೇ ಅನ್ನೋದರಲ್ಲಿ ಎರಡು ಮಾತಿಲ್ಲ. ಇದನ್ನು ಯಾಕೆ ಪುನರುಚ್ಛರಿಸಬೇಕಾಗಿದೆಯೆಂದರೆ, ಕಳ್ಳನೊಬ್ಬ 2.7 ಮಿಲಿಯನ್ ದಿರ್ಹಮ್ (ಸುಮಾರು 6 ಕೋಟಿ ರೂ.) ಹಣದೊಂದಿಗೆ ಪರಾರಿಯಾಗುವ ಪ್ರಯತ್ನವನ್ನು ವಿಫಲಗೊಳಿಸಿ ಅವನನ್ನು ಪೊಲೀಸರಿಗೆ ಹಿಡಿದುಕೊಟ್ಟ, ದುಬೈನಲ್ಲಿ ವಾಸವಾಗಿರುವ ಭಾರತೀಯರೊಬ್ಬರಿಗೆ ದುಬೈ ಪೊಲೀಸ್ (Dubai police) ಪ್ರಶಂಸಾ ಪತ್ರ (letter of appreciation) ನೀಡಿ ಗೌರವಿಸಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 32-ವರ್ಷ-ವಯಸ್ಸಿನ ಕೆಶುರ್ ಕರ ಚವಾಡ ಕರು ಘೇಲಾ (Keshur Kara Chavada Karu Ghela) ದುಬೈನ ನಯೀಫ್ ಜಿಲ್ಲೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಪ್ರಸಕ್ತ ವಾರದ ಆರಂಭದಲ್ಲಿ ದುಬೈ ಪೊಲೀಸ್ ಚವಾಡ ಅವರನ್ನು ಹುಡುಕಿಕೊಂಡು ಅವರು ಕೆಲಸ ಮಾಡುವ ಅಂಗಡಿಗೆ ಹೋದಾಗ ಅವರಿಗೆ ಆಶ್ಚರ್ಯವಾಗಿತ್ತು, ಎಂದು ಅಲ್ಲಿನ ಪೊಲೀಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನಯೀಫ್ ಪೊಲೀಸ್ ಠಾಣೆಯ ನಿರ್ದೇಶಕರಾಗಿರುವ ಮೇಜರ್ ಜನರಲ್ ತಾರಿಖ್ ತಹ್ಲಕ್ ಅವರು ನೀಡಿರುವ ಹೇಳಿಕೆಯೊಂದರ ಪ್ರಕಾರ, ಏಷ್ಯಾ ಮೂಲದ ಇಬ್ಬರು ವ್ಯಕ್ತಿಗಳು ನಯೀಫ್ ಪ್ರದೇಶದಲ್ಲಿ ಬೇರೆ ಬೇರೆ ದೇಶಗಳ ಕರೆನ್ಸಿಯ ಸುಮಾರು 4,250,000 ಡಿರ್ಹಾಮ್ ಮೊತ್ತದಷ್ಟು ಹಣವನ್ನು ಎರಡು ಬ್ಯಾಗ್​ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಕಳ್ಳತನದ ಪ್ರಕರಣ ನಡೆದಿತ್ತು.

‘ಕಳ್ಳ ಆ ಇಬ್ಬರು ಏಷ್ಯನ್ ವ್ಯಕ್ತಿಗಳನ್ನು ಅಡ್ಡಗಟ್ಟಿ ಎರಡು ಬ್ಯಾಗ್ಗಳ ಪೈಕಿ ಎಇಡಿ 2,757,158 ರಷ್ಟು ಹಣವಿದ್ದ ಒಂದು ಬ್ಯಾಗ್ ಕಸಿದುಕೊಂಡಿ ಪರಾರಿಯಾಗುವ ಪ್ರಯತ್ನದಲ್ಲಿದ್ದ,’ ಎಂದು ಅವರು ಹೇಳಿದ್ದಾರೆ.

‘ಆಗ ಇಬ್ಬರು ಏಷ್ಯನ್ನರು ಸಹಾಯಕ್ಕಾಗಿ ಕೂಗಿದಾಗ, ಕಳ್ಳ ಬ್ಯಾಗ್ ತನ್ನತ್ತ ಓಡಿಬರುತ್ತಿರುವುದನ್ನು ಚವಾಡ ಗಮನಿಸಿದರು. ಅವರು ಹೆದರದೆ ಅವನನ್ನು ಅಡ್ಡಗಟ್ಟಿ ನಿಲ್ಲಿಸಿ ಅವನೊಂದಿಗೆ ಕುಸ್ತಿಗೆ ಬಿದ್ದರು. ಕಳ್ಳನನ್ನು ನೆಲಕ್ಕೆ ಕೆಡವಿ ಅವನ ಮೇಲೆ ಕುಳಿತ ಚವಾಡ ಪೊಲೀಸರು ಸ್ಥಳಕ್ಕೆ ಬರುವವರೆಗೆ ಅವನನ್ನು ಮಿಸುಕಾಡಲು ಬಿಡಲಿಲ್ಲ. ಅವರ ನೆರವಿಲ್ಲದೆ ಹೋಗಿದ್ದರೆ ಕಳ್ಳನನ್ನು ಸೆರೆಹಿಡಿಯುವುದು ಕಷ್ಟವಾಗುತ್ತಿತ್ತು,’ ಎಂದು ತಹ್ಲಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚವಾಡ ಆ ಅಂಗಡಿಯಲ್ಲಿ ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

‘ಕಳ್ಳನತ್ತ ಓಡಿ ಅವನನ್ನು ಹಿಡಿದುಕೊಂಡೆ. ಆಕಾರದಲ್ಲಿ ಅವನು ನನ್ನಷ್ಟೇ ಗಾತ್ರದವನಾಗಿದ್ದರಿಂದ ಹಿಡಿದು ನೆಲಕ್ಕೆ ಕೆಡುವುದು ಕಷ್ಟವಾಗಲಿಲ್ಲ. ಅವನ ಎದೆಗೆ ಗುದ್ದಿ ನೆಲಕ್ಕೆ ಬೀಳಿಸಿದೆ. ಬೇರೆಯವರು ನನ್ನ ಸಹಾಯಕ್ಕೆ ಬರೋವರೆಗೆ ಅವನನ್ನು ಬಿಡಲಿಲ್ಲ’ ಎಂದು ಚವಾಡ ದಿ ನ್ಯಾಶನಲ್ ಪತ್ರಿಕೆ ವರದಿಗಾರನೊಂದಿಗೆ ಮಾತಾಡುವಾಗ ಹೇಳಿದ್ದಾರೆ.

ಕಳ್ಳನಿಂದ ಬ್ಯಾಗ್ ಕಸಿದ ಚವಾಡ ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ.

ಕ್ರಿಮಿನಲ್ ತನಿಖಾ ವ್ಯವಹಾರಗಳ ಸಹಾಯಕ ಕಮಾಂಡೆಂಟ್-ಇನ್-ಚೀಫ್ ಮೇಜರ್ ಜನರಲ್ ಖಲೀಲ್ ಇಬ್ರಾಹಿಂ ಅಲ್ ಮನ್ಸೂರಿ, ಚವಾಡ ಮಾಡಿದ ಕೆಲಸ ಸಮುದಾಯದೆಡೆ ನಿಜವಾದ ಬದ್ಧತೆ ಮತ್ತು ತುರ್ತು ಸ್ಥಿತಿಯನ್ನು ಎದುರಿಸುವಲ್ಲಿ ಪ್ರದರ್ಶಿಸಬಹುದಾದ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

‘ಚವಾಡ ಅವರನ್ನು ಅವರ ಕೆಲಸದ ಸ್ಥಳದಲ್ಲಿ, ಅವರ ಸಹೋದ್ಯೋಗಿಗಳು ಮತ್ತು ನೆರೆಹೊರೆಯವರ ಸಮ್ಮುಖದಲ್ಲಿ ಗೌರವಿಸುವುದು ಸಮುದಾಯದ ಸಹಭಾಗಿತ್ವದ ಪರಿಕಲ್ಪನೆಯನ್ನು ಬಲಪಡಿಸಲು ಮತ್ತು ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸಲು ದುಬೈ ಪೊಲೀಸರಲ್ಲಿರುವ ಬದ್ಧತೆಯ ಪ್ರತೀಕವಾಗಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು